ಸುದೀಪ್ ಮ್ಯಾನೇಜರ್​ ವಿರುದ್ಧ ಜೀವ ಬೆದರಿಕೆ ದೂರು, ಪೊಲೀಸ್​ ರಕ್ಷಣೆ ಕೇಳಿದ ವ್ಯಕ್ತಿ

ಚಿಕ್ಕಮಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಮ್ಯಾನೇಜರ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು,ರಕ್ಷಣೆ ಕೋರಿದ್ದಾರೆ.

ಬೈಗೂರು ಗ್ರಾಮದ ದೀಪಕ್ ಮಯೂರ್​​ ಶನಿವಾರ ಮಲ್ಲಂದೂರು ಠಾಣೆಗೆ ದೂರು ನೀಡಿದ್ದು, ಕಿಚ್ಚ ಸುದೀಪ್‌ ಮ್ಯಾನೇಜರ್ ನವೀನ್ ಎಂಬವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಿಚ್ಚ ಸುದೀಪ್​ ನಿರ್ಮಾಣ ಮಾಡಿದ್ದ ವಾರಸ್ದಾರ ಧಾರಾವಾಹಿಯಲ್ಲಿ ರೆಸಾರ್ಟ್​ಗೆ ಹಾನಿ ಮಾಡಲಾಗಿತ್ತು. ಆದರೆ, ಆ ಹಣ ನೀಡಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಾಕಿ ಹಣ ಪಡೆಯಲು ದೀಪಕ್​ ಈ ಹಿಂದೆಯೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. (ದಿಗ್ವಿಜಯ ನ್ಯೂಸ್​)