ಸುದೀಪ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ; ನಿವಾಸದ ಬಳಿ ಅಭಿಮಾನಿಗಳ ಸಾಗರ

ಬೆಂಗಳೂರು: ಸ್ಯಾಂಡಲ್​ವುಡ್​ ನಾಯಕ ನಟ ಸುದೀಪ್​ ಅವರು ಇಂದು ತಮ್ಮ 45ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಅವರ ನಿವಾಸದೆದರು ಶನಿವಾರ ಮಧ್ಯರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಜೆ.ಪಿನಗರಕ್ಕೆ ಆಗಮಿಸಿರುವ ಅಭಿಮಾನಿಗಳು, ಸುದೀಪ್​ಗೆ ಜೈಕಾರ ಮೊಳಗಿಸಿದ್ದಾರೆ. ಈ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಿಗಿದ್ದಾರೆ.

ತರಹೇವಾರಿ ವಿನ್ಯಾಸದ ಕೇಕ್​, ಹೂವಿನ ಹಾರ ಹಿಡಿದು ಸುದೀಪ್​ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು, ಅವರನ್ನು ಭೇಟಿಯಾಗಲು ಕಾತುರದಿಂದ ಕಾಯುತ್ತಿದ್ದರು. ಆದರೆ, ಅಭಿಮಾನಿಗಳೊಂದಿಗೆ ಕೇಕ್​ ಕತ್ತರಿಸದ ಸುದೀಪ್​, ಈ ಮೂಲಕ ಅವರಲ್ಲಿ ನಿರಾಸೆ ಮೂಡಿಸಿದರು.
ಇನ್ನೊಂದೆಡೆ, ಸಂಭ್ರಮಾಚರಣೆ ವೇಳೆ ಅಭಿಮಾನಿಗಳ ನಡುವೆ ನೂಕುನುಗ್ಗಲು ಸಂಭವಿಸಿದ್ದು, ಪೊಲೀಸರಿಂದ ಲಘು ಲಾಠಿ ಪ್ರಹಾರವೂ ನಡೆದಿದೆ. ‘ಈ ವೇಳೆ ಅಭಿಮಾನಿಯೊಬ್ಬರ ತಲೆಗೆ ಗಾಯವಾಗಿದೆ.

ಇನ್ನು ಟ್ವಿಟರ್​ನಲ್ಲಿ ಸುದೀಪ್ ಅವರಿಗೆ​ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ನಟ, ನಟಿಯರು, ಗಣ್ಯರು ಸುದೀಪ್​ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

ಸುದೀಪ್​ ಅವರನ್ನು ನೋಡಲು ಕಟ್ಟಡ ಏರಿದ ಅಭಿಮಾನಿಗಳು