18 C
Bangalore
Friday, December 6, 2019

ತಿಂಗಳಿನ್ನೂ ಆರು ಸಮಸ್ಯೆ ನೂರಾರು

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಲೆಕ್ಕ ಏನೇ ಇರಲಿ ತಮ್ಮದೇ ಪ್ರತ್ಯೇಕ ಚಾಣಕ್ಯ ತಂತ್ರ ನಡೆಯುತ್ತದೆ ಎನ್ನುವಂತೆ ಮೂರನೇ ಪಕ್ಷದ ಜತೆ ಕಾಂಗ್ರೆಸ್ ಮಾಡಿಕೊಂಡ ಒಪ್ಪಂದದಂತೆ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ವಿವಾದಗಳಲ್ಲೇ 6 ತಿಂಗಳು ಪೂರೈಸಿದೆ. ನೀವೆಲ್ಲ 4 ವರ್ಷ ಅಧಿಕಾರ ನಡೆಸಿದ್ದೀರಿ ನನಗೆ ಸಮಯ ನೀಡಿ ಎನ್ನುತ್ತಲೇ ಸಾಲಮನ್ನಾದಂತಹ ಪ್ರಮುಖ ಘೊಷಣೆಯನ್ನೂ ದಡ ಸೇರಿಸುವಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿಫಲರಾಗುತ್ತಿದ್ದರೆ, ಸಚಿವ ಸಂಪುಟ ವಿಸ್ತರಣೆಯ ಗುಂಗಿನಲ್ಲೇ ಕಾಂಗ್ರೆಸ್ ಮುಳುಗಿದೆ. ತಮಗೆ ಅರಿವಿಲ್ಲದಂತೆಯೇ ಸಾಲಮನ್ನಾ ಸುಳಿಯಲ್ಲಿ ಸಿಲುಕಿ ಅದರಿಂದ ಹೊರಬರಲಾಗದೆ ಇರುವ ಸಿಎಂ ನಡೆ ಸರ್ಕಾರದಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕಾದ ಅನೇಕ ವಿಚಾರಗಳಲ್ಲಿ ವ್ಯಕ್ತವಾಗುವ ಮೂಲಕ ಸರ್ಕಾರ ಆರು ತಿಂಗಳಲ್ಲಿ ಇಂಥದ್ದೇ ಸಾಧನೆ ಮಾಡಿದೆ ಎಂದು ಹೇಳುವ ಯಾವುದೇ ಹೆಜ್ಜೆ ಕಣ್ಮುಂದೆ ಕಾಣುತ್ತಿಲ್ಲ. ಸಮಸ್ಯೆ ಬಂದಾಗ ಎದುರಿಸುವ ಚಾಕಚಕ್ಯತೆ, ಸಂಘಟನಾ ಕೌಶಲ್ಯ ಇಲ್ಲದ ಕಾರಣಕ್ಕೆ ಪದೇಪದೆ ತಾಳ್ಮೆ ಕಳೆದುಕೊಳ್ಳುವ ಸಿಎಂ ಆಡಿದ ‘ವಿಷಕಂಠ’. ‘ನನಗೇನೂ ವೋಟು ಹಾಕಿಲ್ಲ’, ‘ಮುಳ್ಳಿನ ಹಾಸಿಗೆ’, ‘ರೈತರಲ್ಲ ಗೂಂಡಾಗಳು’, ‘ನಾಲ್ಕು ವರ್ಷ ಎಲ್ಲಿ ಮಲಗಿದ್ದೆ?’ ಹೇಳಿಕೆಗಳು ಗಾಯದ ಮೇಲೆ ಬರೆ ಎಳೆದಿವೆ. ತಾನು ಪ್ರಾಮಾಣಿಕ, ಜನರಿಗಾಗಿ ಬದುಕಿದ್ದೇನೆ, ಯಾರಿಗೂ ಹೆದರುವುದಿಲ್ಲ ಎಂದು ಪದೇಪದೆ ಸಿಎಂ ಬುಸುಗುಟ್ಟುವಿಕೆ ಕ್ಲೀಷೆಯಾಗಿ, ಸದ್ಯದಲ್ಲೇ ಅಪಹಾಸ್ಯವಾಗುವತ್ತಲೂ ಹೆಜ್ಜೆ ಹಾಕಿದೆ.

ಬೌಂಡರಿಯಲ್ಲೇ ಪ್ರತಿಪಕ್ಷ

ನಾವು ಅತಿ ದೊಡ್ಡ ಪಕ್ಷ, ಸರ್ಕಾರ ನಾವೇ ನಡೆಸಬೇಕು ಎನ್ನುತ್ತಲೇ ಆರು ತಿಂಗಳು ಬೌಂಡರಿಯಲ್ಲೇ ಕಾಯುತ್ತಿರುವ ಬಿಜೆಪಿ ಇತ್ತ ಸರ್ಕಾರವನ್ನೂ ರಚಿಸದೆ, ಸರ್ಕಾರದ ವಿರುದ್ಧ ನಿರ್ಣಾಯಕ ಹೋರಾಟವನ್ನೂ ರೂಪಿಸದೆ ಇರುವುದು ಗೋಚರಿಸುತ್ತದೆ. ಈ ಸರ್ಕಾರ ತನ್ನ ಭಾರಕ್ಕೆ ತಾನೇ ಕುಸಿಯುತ್ತದೆ ಎಂದು ಬಿ.ಎಸ್. ಯಡಿಯೂರಪ್ಪ ನಾಲ್ಕೈದು ಡೆಡ್​ಲೈನ್ ನೀಡಿದರು. ಇದೇ ಗುಂಗಿನಲ್ಲಿ ಅಸಂಘಟಿತವಾಗಿ ಉಪಚುನಾವಣೆ ಎದುರಿಸಿದ ಪಕ್ಷ, ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡು ಮುಖಭಂಗ ಅನುಭವಿಸಿತು. ಸಿಎಂ ಮಾತಿನಿಂದಲೇ ಹೆಚ್ಚು ವಿವಾದವಾಗಿರುವ ಕಬ್ಬು ಬೆಳೆಗಾರರ ಸಮಸ್ಯೆಯನ್ನಾದರೂ ಕೈಗೆತ್ತಿಕೊಂಡು ಪ್ರತಿಪಕ್ಷ ಸ್ಥಾನ ತುಂಬುತ್ತದೆಯೇ ಎಂಬುದು ಬೆಳಗಾವಿ ಅಧಿವೇಶನದಲ್ಲಿ ಕಾಣಲಿದೆ.

ಸಂಪುಟ ಗೊಂದಲ

ಸಚಿವರ ಆಪ್ತ ಸಿಬ್ಬಂದಿ ಹಾಗೂ ಕಚೇರಿ ಸಿಬ್ಬಂದಿ ನೇಮಕದಲ್ಲೂ ಜೆಡಿಎಸ್ ಹಿರಿಯ ನಾಯಕರು ಹಸ್ತಕ್ಷೇಪ ಮಾಡುತ್ತಾರೆಂಬ ಆರೋಪ ಸರ್ಕಾರದ ಪ್ರಾರಂಭದಲ್ಲೇ ಗೋಚರಿಸಿತ್ತು. ಈ ಬಗ್ಗೆ ಕೃಷ್ಣಬೈರೇಗೌಡ, ಯು.ಟಿ. ಖಾದರ್, ಡಿ.ಕೆ. ಶಿವಕುಮಾರ್ ಸೇರಿ ಅನೇಕರು ಅಸಮಾಧಾನ ಹೊರಹಾಕಿದ್ದರು. ಇನ್ನು, ಉನ್ನತ ಶಿಕ್ಷಣ ಖಾತೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದರೂ ಬದಲಾವಣೆಗೊಳ್ಳದ ಖಾತೆಯಲ್ಲಿ ಜಿ.ಟಿ. ದೇವೇಗೌಡ ಮುಂದುವರಿದಿದ್ದಾರೆ. ಬಿಎಸ್​ಪಿ ನಿರ್ಧಾರದಂತೆ ಸಚಿವ ಸ್ಥಾನಕ್ಕೆ ಎನ್. ಮಹೇಶ್ ರಾಜೀನಾಮೆ ನೀಡಿದ್ದರೆ, ಮತ್ತೊಬ್ಬ ಸಚಿವ ರಮೇಶ್ ಜಾರಕಿಹೊಳಿ ಸಂಪುಟಸಭೆಗೆ ನಿರಂತರ ಗೈರಾಗುತ್ತಿದ್ದಾರೆ. ಕಳೆದ ಸಂಪುಟದಲ್ಲಿ ಮುಖದರ್ಶನ ಮಾಡಿಸಿ ಅರ್ಧದಲ್ಲೇ ಹೊರನಡೆದರು. ಎಸ್​ಸಿಎಸ್​ಟಿ ಮುಂಬಡ್ತಿ ಮೀಸಲು, ಎಸ್​ಸಿಎಸ್​ಟಿಗಳಿಗೆ ಗುತ್ತಿಗೆ ಮೀಸಲಾತಿ, ಕೆಪಿಎಸ್​ಸಿಯಲ್ಲಿ ಮೀಸಲಾತಿ ಸಮಸ್ಯೆ ಮುಂತಾದವಲ್ಲಿ ಸರ್ಕಾರದ ನಡೆಯನ್ನು ನಿರಂತರವಾಗಿ ಟೀಕಿಸುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ನಡೆ, ಜೆಡಿಎಸ್ ಪಕ್ಷ ದಲಿತ ವಿರೋಧಿ ಎಂಬ ಭಾವನೆಯನ್ನು ಗಟ್ಟಿಗೊಳಿಸುತ್ತಿದೆ. ಈ ಮಧ್ಯೆ ಮಾಜಿ ಸಿಎಂ ‘ಪತ್ರ ಸಮರ’, ಜಾರಕಿಹೊಳಿ ಸಹೋದರರ ಆಕ್ರೋಶದ ವೇಳೆ ವಿದೇಶ ಪ್ರವಾಸ ಕಿರಿಕಿರಿ ಉಂಟುಮಾಡಿತ್ತು.

ಬಜೆಟ್​ನಿಂದಲೇ ವಿವಾದ

ಮೈತ್ರಿ ಸರ್ಕಾರ ಮೊದಲ ಬಜೆಟ್​ನಿಂದಲೇ ವಿವಾದ ಆರಂಭವಾಗಿತ್ತು. ಅನ್ನಭಾಗ್ಯದ ಅಕ್ಕಿ ಪ್ರಮಾಣ ಕಡಿತ, ಬಜೆಟ್​ನಲ್ಲಿ ಉತ್ತರ ಕರ್ನಾಟಕಕ್ಕೆ ಬೆರಳೆಣಿಕೆ ಯೋಜನೆ, ‘ಉತ್ತರ ಕರ್ನಾಟಕದವರು ಮತ ನೀಡಿಲ್ಲ’ ಎಂಬ ಹೇಳಿಕೆ ಪ್ರತ್ಯೇಕ ರಾಜ್ಯದ ಮಾತಿನವರೆಗೂ ಎಳೆಯಿತು. ಸಾಲಮನ್ನಾ ಘೋಷಣೆಯಾದರೂ ಪೂರ್ಣ ದಡ ಸೇರಿಲ್ಲ.

ಮುಜುಗರದ ದಿನಗಳು

 • ಪುಣ್ಯಾತ್ಮ ರಾಹುಲ್ ಗಾಂಧಿ ಅವರಿಂದಾಗಿ ಮುಖ್ಯಮಂತ್ರಿಯಾಗಿದ್ದೇನೆ
 • ನಾನೇನೂ ಆರೂವರೆ ಕೋಟಿ ಕನ್ನಡಿಗರ ಮರ್ಜಿಯಲ್ಲಿಲ್ಲ, ವಿಷ ನುಂಗುತ್ತಾ ವಿಷಕಂಠನಾಗಿದ್ದೇನೆ, ಮುಳ್ಳಿನ ಹಾಸಿಗೆಯಲ್ಲಿದ್ದೇನೆ ಎಂಬ ಸಿಎಂ ಮಾತು.
 • ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕುಳಿತು ಮಾಜಿ ಸಿಎಂ ಸಿದ್ದರಾಮಯ್ಯ ಆಡಿದ ಮಾತು
 • ಉತ್ತರ ಕರ್ನಾಟಕದವರೇನು ನನಗೆ ಮತ ಹಾಕಿದ್ದಾರೆಯೇ ಎಂಬ ಸಿಎಂ ಮಾತು
 • ಸಿಎಂ ಸ್ಥಾನ ಸಿಕ್ಕರೆ ನಿಭಾಯಿಸಲು ಸಿದ್ಧ ಎಂಬ ಡಿಸಿಎಂ ಪರಮೇಶ್ವರ್ ಹೇಳಿಕೆ
 • ವೀರಶೈವ ಲಿಂಗಾಯತ ವಿಚಾರ ಕೈಗೆತ್ತಿಕೊಂಡಿದ್ದು ಅಪರಾಧ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ
 • ಪ್ರತಿಭಟನಾನಿರತ ಕಬ್ಬು ಬೆಳೆಗಾರರು ಗೂಂಡಾಗಳು ಎಂದ ಸಿಎಂ
 • ರೈತ ಮಹಿಳೆಯನ್ನು, ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ಎಂಬ ಸಿಎಂ ಮಾತು

 

ಜಾರಿಗೆ ತಂದ ಯೋಜನೆಗಳು

 • ಸಾಲಮನ್ನಾಕ್ಕೆ ನಡೆದಿರುವ ಪ್ರಯತ್ನ
 • ಬಡವರ ಬಂಧು ಯೋಜನೆ
 • ಚೀನಾದೊಂದಿಗೆ ಸ್ಪರ್ಧೆಗೆ ನೀಲನಕ್ಷೆ
 • ಸಾಮಾಜಿಕ ಭದ್ರತಾ ಪಿಂಚಣಿಗಳ ಹೆಚ್ಚಳ
 • ಜಲಧಾರೆ ಯೋಜನೆಗೆ ಸಿದ್ಧತೆ
 • ಕೃಷಿ ಕ್ಯಾಬಿನೆಟ್ ರಚನೆಗೆ ಸಜ್ಜು

ಏನಾಗುವುದು ಘಟಬಂಧನ?

ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವೇ ದೇಶದ ಮಹಾಘಟಬಂಧನಕ್ಕೆ ಮುನ್ನುಡಿ ಎಂಬಂತೆ ನಡೆದಿತ್ತು. ರಾಜ್ಯದಲ್ಲಿ ನಡೆದ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಾಲ್ಕರಲ್ಲಿ ಮಿತ್ರಪಕ್ಷಗಳು ಗೆಲುವು ಸಾಧಿಸಿದವು. ಈಗ ಮುಂದಿನ ಚುನಾವಣೆಯಲ್ಲಿ ಏನಾಗುವುದು ಎಂಬುದು ಕುತೂಹಲ ಮೂಡಿಸಿದೆ.

ಆಗದ ಅಧಿಕಾರ ಹಂಚಿಕೆ

ನಿಗಮ ಮತ್ತು ಮಂಡಳಿಗಳ ಅಧಿಕಾರ ಹಂಚಿಕೆ ಆಗುತ್ತಿಲ್ಲವೆಂಬುದು ಎರಡೂ ಪಕ್ಷದಲ್ಲಿನ ಶಾಸಕರು ಹಾಗೂ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಕುಮಾರಸ್ವಾಮಿ ತಮಗೆ ಬೇಕಾದ ಕೆಲ ಆಪ್ತರಿಗೆ ನಿಗಮಗಳಿಗೆ ನೇಮಕ ಮಾಡಿರುವುದು, ಪಕ್ಷಕ್ಕೆ ದುಡಿದ ಅನೇಕರು ಇದ್ದಾಗಲೂ ಕುಟುಂಬದ ಸದಸ್ಯರಿಗೆ ಆಪ್ತರಾದ ವ್ಯಕ್ತಿಗೆ ಸದ್ದಿಲ್ಲದೆ ವಿಧಾನ ಪರಿಷತ್​ಗೆ ಆಯ್ಕೆ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಹಾಸನಕ್ಕೇ ಮೊದಲ ಆದ್ಯತೆ

ಹಾಸನ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇತರ ಜಿಲ್ಲೆಗಳನ್ನು ಕಡೆಗಣಿಸಲಾಗುತ್ತದೆಂಬ ಭಾವನೆ ಮೂಡುವಂತೆ ಮಾಡಿದೆ. ಪ್ರತಿ ಸಂಪುಟ ಸಭೆಯಲ್ಲೂ ಹಾಸನಕ್ಕೆ ಸಂಬಂಧಿಸಿದ ಒಂದೆರಡು ವಿಷಯಗಳು ಇದ್ದೇ ಇರುತ್ತವೆ. ಜತೆಗೆ ಸಚಿವ ಎಚ್.ಡಿ. ರೇವಣ್ಣ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಲೇ ಇದ್ದಾರೆ.

ಅರ್ಧ ವರ್ಷ ಇಲ್ಲ ಹರ್ಷ

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...