ಕುರುಗೋಡು: ನೋಟಿಸ್ ನೀಡದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಏಕಾಏಕಿ ಮನೆ ತೆರವಿಗೆ ಮುಂದಾಗಿರುವ ಕ್ರಮವನ್ನು ವಿರೋಧಿಸಿ ಬಾದನಟ್ಟಿ ಗ್ರಾಮದ ಬಡ ಜನರ ಮನೆ ಉಳಿವಿಗಾಗಿ ಹೋರಾಟ ಸಮಿತಿ ಶನಿವಾರ ಪ್ರತಿಭಟನೆ ನಡೆಸಿತು.

ರಸ್ತೆ ವಿಸ್ತರಣೆ ವೇಳೆ ಕನಿಷ್ಟ ನಿಯಮ ಪಾಲಿಸದೇ ಅಧಿಕಾರಿಗಳು ಏಕಾಏಕಿ ಮನೆ ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ. ಅಲ್ಲದೆ, ಗ್ರಾಮದ ಮಧ್ಯದಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣದಿಂದ ಸಾಕಷ್ಟು ಅಪಘಾತ, ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ರಸ್ತೆ ನಿರ್ಮಾಣ ಕಾರ್ಯವನ್ನು ಕೈ ಬಿಡಬೇಕು ಎಂದು ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ್, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಎಐಡಿವೈಒ ಯುವಜನ ಸಂಘಟನೆ ಜಿಲ್ಲಾಧ್ಯಕ್ಷ ಕೋಳೂರು ಪಂಪಾಪತಿ , ರೈತರಾದ ಮಣ್ಣೂರು ರಾಘ, ಅಂಬರೀಶ, ಶೇಕಣ್ಣ, ಹನುಮಕ್ಕ, ದುರುಗಣ್ಣ, ಗೋವಿಂದ್, ಜಡೇಪ್ಪ ಒತ್ತಾಯಿಸಿದ್ದಾರೆ.