Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಮರಿಯಾನೆ ಬಾಲಾಜಿ ಹಠಾತ್ ಸಾವು

Thursday, 12.07.2018, 3:47 PM       No Comments

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಮರಿಯಾನೆ ಬಾಲಾಜಿ(2) ಹಠಾತ್ ಮೃತಪಟ್ಟಿದೆ. ಕೆಲ ದಿನಗಳಿಂದ ಆಹಾರ ಸೇವನೆ ಕಡಿಮೆ ಮಾಡಿದ್ದ ಮರಿಯಾನೆ ಸಾವು ಬಿಡಾರದ ಮಾವುತರು ಹಾಗೂ ಸಿಬ್ಬಂದಿಗೆ ಆಘಾತ ಉಂಟು ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವನ್ಯಜೀವಿ ವಿಭಾಗದ ಡಿಸಿಎಫ್ ಚಂದ್ರಶೇಖರ್, ಆನೆ ಮರಿಯ ಹೊಟ್ಟೆಯಲ್ಲಿ ಹುಣ್ಣು ಕಾಣಿಸಿಕೊಂಡಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಅದು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ.

ದಾಂಡೇಲಿಯಲ್ಲಿ ಒಂದೂವರೆ ವರ್ಷದ ಹಿಂದೆ ಕೃಷಿಹೊಂಡದಲ್ಲಿ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಆಗ ಆನೆಯನ್ನು ರಕ್ಷಿಸಿ ಬಿಡಾರಕ್ಕೆ ಕರೆತಂದು ಆರೈಕೆ ಮಾಡಲಾಗಿತ್ತು. ಬಿಡಾರದ ಮಾವುತರು ಹಾಗೂ ವೈದ್ಯರ ಸತತ ಆರೈಕೆಯಿಂದ ಮರಿಯಾನೆ ಚೇತರಿಸಿಕೊಂಡಿತ್ತು ಎನ್ನುತ್ತಾರೆ ಬಿಡಾರದ ಜಮೇದಾರ್.

ಮಾವುತನ ನೆನಪು ಕಾರಣವೇ?: ಮುಬಾರಕ್ ಎಂಬ ಮಾವುತ ಬಾಲಾಜಿಯ ಆರೈಕೆ ಮಾಡುತ್ತಿದ್ದರು. ಆದರೆ 15 ದಿನ ಮುಬಾರಕ್ ಬಿಡಾರಕ್ಕೆ ಬಂದಿರಲಿಲ್ಲ. ಅಂದಿನಿಂದ ಬಾಲಾಜಿ ಮಂಕಾಗಿತ್ತು. 15 ದಿನಗಳಿಂದ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಮುಬಾರಕ್ ನೆನಪಿನಲ್ಲೇ ಬಾಲಾಜಿ ಪ್ರಾಣ ಬಿಟ್ಟಿದೆ ಎಂಬ ಮಾತುಗಳೂ ಸಕ್ರೆಬೈಲು ಆನೆ ಬಿಡಾರದಿಂದ ಕೇಳಿ ಬರುತ್ತಿವೆ.

 

Leave a Reply

Your email address will not be published. Required fields are marked *

Back To Top