ಕುಂದಾಣ : ದೇಶದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಇಂದಿರಾಗಾಂಧಿ ಹಾಗೂ ಡಾ.ಮನಮೋಹನ್ ಸಿಂಗ್ ಅವರು ಆಡಳಿತಾವಧಿಯಲ್ಲಿ ಆಹಾರ ಪೂರೈಕೆ ಸಂಬಂಧ ಕಾಯ್ದೆ, ಕಾನೂನು ಜಾರಿಗೊಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯವನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಣ್ಣಟ್ಟ, ಬೀರಸಂದ್ರ ಆಲೂರು, ಬನ್ನಿಮಂಗಲ ಸೇರಿ ಹಲವು ಗ್ರಾಮಗಳಲ್ಲಿ ಚರಂಡಿ, ಕಾಂಕ್ರೀಟ್ ರಸ್ತೆ, ಸಮುದಾಯ ಭವನ, ಗ್ರಂಥಾಲಯ ಸೇರಿ ಒಟ್ಟು 1.10 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಅಗತ್ಯ ಮೂಲಭೂತ ಸೌಕರ್ಯಗಳ ಸುಧಾರಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಪಂಚಾಯಿತಿಯಲ್ಲಿ ಯಾವುದೇ ಪದ ಬೆಂಬಲಿತರು ಅಧಿಕಾರದಲ್ಲಿದ್ದರೂ ಪಾತೀತವಾಗಿ ಜನರ ಸೇವೆ ಕೈಗೊಳ್ಳಬೇಕು. ಆಲೂರು&ದುದ್ದನಹಳ್ಳಿ ಹೊಸ ಪಂಚಾಯಿತಿಗೆ ಅನುದಾನ ನೀಡಿಲ್ಲ ಎಂದು ಯಾರೂ ಭಾವಿಸಬಾರದು. ಈ ಭಾಗದಲ್ಲಿ ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೊಸೈಟಿ ನಿರ್ಮಾಣದ ಬಗ್ಗೆ ಮಾಧ್ಯಮದವರು ನನ್ನ ಗಮನಕ್ಕೆ ತಂದಿದ್ದು, ಈ ಬಗ್ಗೆ ಸೂಕ್ತ ಕ್ರಮವಹಿಸಲಾಗುವುದು. ಇನ್ನು ಗುಣಮಟ್ಟದ ಕಾಮಗಾರಿ ಹಾಗೂ ಹೆಚ್ಚು ಬಾಳಿಕೆ ಬರಲು ಜನಪ್ರತಿನಿಧಿಗಳು ಶ್ರದ್ಧೆ ವಹಿಸಬೇಕು ಎಂದರು. ಬಿಎಲ್ಡಿ ಬ್ಯಾಂಕ್ ನಿರ್ದೇಶಕ ಮುನಿರಾಜು, ಕಾಂಗ್ರೆಸ್ ಅಧ್ಯ ಪ್ರಸನ್ನ ಕುಮಾರ್, ಖಾದಿ ಬೋರ್ಡ್ನಿರ್ದೇಶಕ ನಾಗೇಗೌಡ, ತಾಪಂ ಇಒ ಶ್ರೀನಾಥ್ ಗೌಡ, ಆಲೂರು ದುದ್ದನಹಳ್ಳಿ ಗ್ರಾಪಂಸದಸ್ಯರಾದ ರು, ಮೀನಾ ಕೃಷ್ಣಮೂರ್ತಿ, ಕಾಂತಮುನಿರಾಜು, ಡೇರಿ ಅಧ್ಯ ಮಂಜುನಾಥ್, ಮಾಜಿ ಅಧ್ಯ ಮುನೇಗೌಡ, ಪಿಡಿಒ ನಂದಿನಿ, ಯುವ ಮುಖಂಡರಾದ ಅನಿಲ್, ರಮೇಶ್ ಇದ್ದರು.
ನಕಾಶೆ ರಸ್ತೆ ಒತ್ತುವರಿ ತೆರವುಗೊಳಿಸಿ : ಗ್ರಾಮ ಪಂಚಾಯಿತಿ ಸದಸ್ಯ ರು ಮಾತನಾಡಿ, ಆಲೂರು&ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಜಾರಿಗೆ ಬಂದಾಗಿನಿಂದ ನಕಾಶೆ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಹಲವಾರು ಬಾರಿ ನಾಡಕಚೇರಿ ಹಾಗೂ ತಾಲೂಕು ಆಡಳಿತಕ್ಕೆ ಲಿಖಿತವಾಗಿ ಅಹವಾಲು ಸಲ್ಲಿಸಿದರೂ ಪರಿಹರಿಸದೆ ಅಧಿಕಾರಿಗಳು ರ್ನಿಲಸುತ್ತಿದ್ದಾರೆ. ಮಂತ್ರಿಗಳು ಈ ಬಗ್ಗೆ ಕಾಳಜಿ ವಹಿಸಿ, ಆದಷ್ಟು ಬೇಗ ಒತ್ತುವರಿ ತೆರವು ಮಾಡಿಸಿಕೊಡಲು ಸಂಬಂಧ ಪಟ್ಟವರಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.