ಜಾಧವ ಕುಟುಂಬಕ್ಕೆ ಸಹಾಯಧನ

ಬೋರಗಾಂವ: ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡಿ ಹುತ್ಮಾತರಾದ ಬೂದಿಹಾಳ ಗ್ರಾಮದ ಪ್ರಕಾಶ ಪುಂಡಲಿಕ ಜಾಧವ
ಕುಟುಂಬಕ್ಕೆ ಯುವಧುರೀಣ ಹಾಗೂ ಮುಖಂಡ ಉತ್ತಮ ಪಾಟೀಲ ಸೋಮವಾರ 1ಲಕ್ಷ ರೂ. ಸಹಾಯಧನ ನೀಡಿದರು.

ಮೃತ ಪ್ರಕಾಶ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ನಂತರ ಮಾತನಾಡಿದ ಅವರು, ಜಾಧವ ಕುಟುಂಬದ ರಕ್ಷಣೆಗಾಗಿ ಅರಿಹಂತ ಕುಟುಂಬ ಸದಾ ಸಿದ್ಧವಾಗಿದೆ ಎಂದು ತಿಳಿಸಿದರು. ನಂತರ ಯೋಧನ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದರು.

ಅಶೋಕಕುಮಾರ ಅಸುದೆ, ಅರಿಹಂತ ಪರಿವಾರದ ಶಶಿಕುಮಾರ ಗೋರವಾಡೆ, ಮಹೇಶ ಪಾಟೀಲ, ರಾಜು ಪಾಟೀಲ, ದಿಲೀಪ ಪಠಾಡೆ, ಸುಂದರ ಪಾಟೀಲ, ಕೇದಾರ ಕುಲಕರ್ಣಿ, ಪ್ರಕಾಶರ ತಂದೆ ಪುಂಡಲಿಕ, ತಾಯಿ ಶಾರದಾ, ಪತ್ನಿ ನೀತಾ ಜಾಧವ, ಇತರರು ಇದ್ದರು.