ಸಿನಿಮಾ

ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ‘ಸೇವಾ ಸಂಪದ’ ಪ್ರಶಸ್ತಿ ಪ್ರದಾನ

ದೋಹ, ಕತಾರ್: ದೆಹಲಿ ಸಾರ್ವಜನಿಕ ಶಾಲೆಯ ಸಭಾಂಗಣದಲ್ಲಿ ಬಂಟರ ಸಂಘ ಏರ್ಪಡಿಸಿದ್ದ ಬಂಟೋತ್ಸವ 2023 ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ‘ಸೇವಾ ಸಂಪದ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: ಜಗದೀಶ್ ಶೆಟ್ಟರ್​ ‘ಕೈ’ ಹಿಡಿಯದ ಮತದಾರ; 35 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು

ಈ ಸೇವಾ ಸಂಪದ ಪ್ರಶಸ್ತಿಯು ಬಂಟ್ಸ್ ಸಂಘವು ಕತಾರ್ ದೇಶದಲ್ಲಿ ಪ್ರತಿ ವರ್ಷ ಸಮಾಜಕ್ಕೆ ಅತ್ಯುನ್ನತ ಸೇವೆಯನ್ನು ನೀಡುತ್ತಾ ಬಂದಿರುವ ಗಣ್ಯರಿಗೆ ನೀಡಿ ಗೌರವಿಸುತ್ತಿದೆ. ಕತಾರ್‌ನ ಭಾರತೀಯ ಸಮುದಾಯದಲ್ಲಿ ಈ ಪ್ರಶಸ್ತಿಗೆ ತನ್ನದೇ ಆದ ಸ್ಥಾನಮಾನಗಳಿವೆ. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಸುಮಾರು 8 ವರ್ಷಗಳ ತಮ್ಮ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಇದನ್ನೂ ಓದಿ: ಮತದಾನೋತ್ತರ ಸಮೀಕ್ಷೆಗಳು ಏನಾದವು? ಯಾವ್ಯಾವ ಸಮೀಕ್ಷೆ ಏನು ಹೇಳಿತ್ತು?

ಕತಾರ್‌ನಲ್ಲಿ ಕರೊನಾ ಹಾವಳಿ ಇದ್ದಾಗ ಅವಶ್ಯಕತೆ ಇರುವ ಜನರಿಗೆ ಅನ್ನಾಹಾರ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಇರುವವರಿಗೆ ‘ವಂದೇ ಭಾರತ್’ ಸೇವೆಯಡಿ ತಾಯ್ನಡಿಗೆ ವಿಮಾನಯಾನದ ವ್ಯವಸ್ಥೆಯನ್ನು ಕಲ್ಪಿಸಿಕೊಡುವಲ್ಲಿ ಮಹತ್ತರ ಕೊಡುಗೆಯನ್ನು ಸುಬ್ರಮಣ್ಯ ಹೆಬ್ಬಾಗಿಲು ನೀಡಿದ್ದಾರೆ.

Latest Posts

ಲೈಫ್‌ಸ್ಟೈಲ್