ತಾಳಿಕೋಟೆ: ಆಲಮಟ್ಟಿ&ಯಾದಗಿರಿ ರೈಲ್ವೇ ಮಾರ್ಗ ಕೊನೆ ಹಂತದ ಸರ್ವೆ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ಕೊಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೇಂದ್ರ ರೈಲ್ವೆ ರಾಜ್ಯ ಸಚಿವ ವ್ಹಿ.ಸೋಮಣ್ಣ ಅವರಿಗೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯ ಆರ್.ಎಸ್.ಪಾಟೀಲ (ಕೂಚಬಾಳ) ಕುಷ್ಟಗಿಯಲ್ಲಿ ಗುರುವಾರ ಸನ್ಮಾನಿಸಿದರು.

ಆಲಮಟ್ಟಿ&ಯಾದಗಿರಿ ರೈಲ್ವೇ ಮಾರ್ಗ ಪ್ರಾರಂಭಕ್ಕೆ ಸಂಬಂದಿಸಿ ಕಳೆದ 2 ತಿಂಗಳ ಹಿಂದೆ ಆರ್.ಎಸ್.ಪಾಟೀಲ(ಕೂಚಬಾಳ) ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ಸಚಿವ ವ್ಹಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಈ ಮಾರ್ಗ ಬ್ರಿಟಿಷರ್ ಕಾಲದಲ್ಲಿಯೇ ಮುನ್ನೇಲೆಗೆ ಬಂದು ಸ್ಥಗಿತಗೊಂಡಿದ್ದರ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಮನವಿಗೆ ಸ್ಪಂಧಿಸಿದ ಸಚಿವ ಸೋಮಣ್ಣ ಅವರಿಗೆ ಅಭಿನಂದಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆ ಸಚಿವ ಶಿವಾಜ ತಂಗಡಗಿ, ಮುಖಂಡರಾದ ನಾಗರಾಜ ಬಳಿಗಾರ ಉಪಸ್ಥಿತರಿದ್ದರು.
TAGGED:ತಾಳಿಕೋಟೆ