More

    ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

    ಚಡಚಣ: ಸಮೀಪದ ಗೋಡಿಹಾಳ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಗೋಡಿಹಾಳ ಗ್ರಾಮದ ಸುಭಾಷ ಉರ್ಫ್ ಸುಧಾಕರ ಜೂಜಗಾರ (42) ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
    ಮೃತ ರೈತನ ತಂದೆ ಚಿದಾನಂದ ಅವರ ಹೆಸರಿನಲ್ಲಿರುವ ಅದೇ ಗ್ರಾಮದ ಸ.ನಂ.223/3ರ ಜಮೀನಿನ ಮೇಲೆ ಗೋಡಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 1 ಲಕ್ಷ ರೂ. ಬೆಳೆ ಸಾಲ ಹಾಗೂ 8 ವರ್ಷಗಳ ಹಿಂದೆ ಚಡಚಣ ಪಟ್ಟಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ 1 ಲಕ್ಷ ರೂ. ಸಾಲ ಪಡೆದಿದ್ದಾನೆ. ಅಲ್ಲದೆ, ತಿಂಗಳ ಹಿಂದೆ ಮೃತ ರೈತನ ಮಗ ಶ್ರೀನಿವಾಸ ಅಪಘಾತಕ್ಕೀಡಾದ ಸಂದರ್ಭದಲ್ಲಿ ಕೈಗಡವಾಗಿ ಅಂದಾಜು 80 ಸಾವಿರ ರೂ. ಸಾಲ ಮಾಡಿ ಮಗನಿಗೆ ಔಷಧೋಪಚಾರ ಮಾಡಿಸಿದ್ದ. ಸಾಲದ ಚಿಂತೆಯಲ್ಲಿ ತನ್ನ ತೋಟದ ವಸ್ತಿಯ ಪತ್ರಾಸ್ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತ ರೈತನ ಪತ್ನಿ ಮಲ್ಲಮ್ಮ ನೀಡಿದ ದೂರಿನ ಮೇರೆಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts