ಕಾಟಾಚಾರದ ಓದು ನಿರರ್ಥಕ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ಏಕಾಗ್ರತೆಯಿಂದ ಜೀವನದಲ್ಲಿ ಏನಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಶ್ರದ್ಧೆ ಬದ್ಧತೆಯಿಂದ ಆತ್ಮಸಾಕ್ಷಿಗೆ ಅನುಗುಣವಾಗಿ ಓದಬೇಕು. ಕಾಟಾಚಾರದ ಓದು ನಿರರ್ಥಕ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇನಾಮಹೊಂಗಲದ ಸಿದ್ಧಲಿಂಗೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರೀಕ್ಷೆಗಳ ಬಗ್ಗೆ ವಿನಾಕಾರಣ ಭಯಪಡಬಾರದು. ಸಾಧನೆ ಮಾಡುವ ಆತ್ಮವಿಶ್ವಾಸದಿಂದ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳಲ್ಲಿರುವ ಶಕ್ತಿ ಬಗ್ಗೆ ನಂಬಿಕೆ ಬಹಳ ಮುಖ್ಯ. ತಂದೆ-ತಾಯಿಗಳು ಮಕ್ಕಳಿಗಾಗಿ ಪಡುವ ಶ್ರಮ ನೆನಪಿಸಿಕೊಳ್ಳಬೇಕು. ಸಮಯ ವ್ಯರ್ಥ ಮಾಡದೆ, ಸದ್ಬಳಕೆ ಮಾಡಿಕೊಂಡು ಓದಬೇಕು ಎಂದರು.
ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಉಪನ್ಯಾಸ ನೀಡಿ, ಪರೀಕ್ಷೆಗಾಗಿ ಓದುವುದು ಎಷ್ಟು ಮುಖ್ಯವೋ ಬರವಣಿಗೆಯೂ ಅಷ್ಟೇ ಮುಖ್ಯ. ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ತಮ್ಮದೇ ಆದ ಯೋಜನೆ ಹಾಕಿಕೊಳ್ಳಬೇಕು. ಸುಮ್ಮನೆ ಓದುವುದರ ಬದಲು ಅರ್ಥ ಮಾಡಿಕೊಂಡು ಓದಬೇಕು. ನಿರಂತರ ಅಧ್ಯಯನ ಆರೋಗ್ಯ ಸಮಸ್ಯೆ ಉಂಟುಮಾಡುವುದು. ಅಲ್ಪ ವಿಶ್ರಾಂತಿಯು ಮುಖ್ಯ. ಕಂಠ ಪಾಠ ಮಾಡುವ ಬದಲು ಅರ್ಥ ಮಾಡಿಕೊಂಡು ಓದಬೇಕು. ಗುಂಪು ಚರ್ಚೆ, ವಿಚಾರ ವಿನಿಮಯದ ಮೂಲಕ ಅಭ್ಯಾಸ ಮಾಡಬೇಕು ಎಂದರು.
ಆರ್​.ಎಲ್​. ಸರದೇಸಾಯಿ ಮಾತನಾಡಿದರು. ಐ.ಎಸ್​. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಪ್ಪ ಕುಂಬಾರ, ಪಿ.ಆರ್​. ಅಳಗವಾಡಿ, ಬಸವರಾಜ ಮೇಟಿ, ಸಂಗಪ್ಪ ಲಕ್ಕಣ್ಣನವರ, ಶಾಲಾ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು, ಇತರರು ಇದ್ದರು.
ಎಚ್​.ಆರ್​ ನಾಯ್ಕರ ಸ್ವಾಗತಿಸಿದರು. ಎಸ್​.ಆರ್​. ದೇಸಾಯಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್​.ಆರ್​. ಆಶಿ ನಿರೂಪಿಸಿದರು. ಎಸ್​.ಎಂ. ಹಡಪದ ವಂದಿಸಿದರು.

Share This Article

ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು? Health Tips

Health Tips: ನೀವು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲ. ಇದು…

ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುತ್ತೀರಾ?ಈ ಅಭ್ಯಾಸ ಬಿಟ್ಟುಬಿಡಿ.. Mobile phone

Mobile phone: ತಜ್ಞರು ಫೋನ್ ಬಳಸುವುದು ಅಪಾಯಕಾರಿ ಎಂದು ಹೇಳುತ್ತಾರೆ. ಇನ್ನೂ ಮುಖ್ಯವಾಗಿ, ಬೆಳಿಗ್ಗೆ ಬೇಗನೆ…