More

    ಬಸ್ ಬಾಗಿಲಿಗೆ ಜೋತು ಬಿದ್ದು ಪ್ರಯಾಣ

    ಅಕ್ಕಿಆಲೂರ: ಪಟ್ಟಣದಲ್ಲಿ ಸಂಜೆ ಶಾಲೆ-ಕಾಲೇಜ್ ಬಿಡುತ್ತಿದ್ದಂತೆ ಮನೆಗೆ ತೆರಳಲು ಕೆಲ ಮಾರ್ಗಗಳಲ್ಲಿ ಸಮರ್ಪಕ ಬಸ್ ಸಂಚಾರ ಇಲ್ಲವಾಗಿದೆ. ಹೀಗಾಗಿ ಸಿಕ್ಕ ಬಸ್​ಗೆ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ. ಇನ್ನೊಂದೆಡೆ ಸಾಕಷ್ಟು ಬಸ್​ಗಳಿದ್ದರೂ ಒಂದೇ ಬಸ್ ಏರಿ ಬಾಗಿಲಿಗೆ ಜೋತು ಬೀಳುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಅಕ್ಕಿಆಲೂರ ಹೋಬಳಿ ವ್ಯಾಪ್ತಿಯ ಸುಮಾರು 52 ಗ್ರಾಮಗಳಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಆಗಮಿಸುತ್ತಾರೆ. ಸಂಜೆ ಏಕಕಾಲಕ್ಕೆ ಶಾಲಾ-ಕಾಲೇಜ್ ಬಿಡುವುದರಿಂದ ಪರಸ್ಥಳಕ್ಕೆ ತೆರಳುವ ವಿದ್ಯಾರ್ಥಿಗಳು ಬಸ್​ಗಾಗಿ ಮುಗಿಬೀಳುತ್ತಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ಒಂದೆರಡು ಬಸ್​ಗಳ ಸೌಲಭ್ಯ ಮಾತ್ರ ಇರುವುದರಿಂದ ವಿದ್ಯಾರ್ಥಿಗಳು ಬಾಗಿಲಿಗೆ ಜೋತು ಬಿದ್ದು ಸಾಗುತ್ತಿದ್ದಾರೆ.

    ಗ್ರಾಮೀಣ ಪ್ರದೇಶಕ್ಕೆ ಅಸಮರ್ಪಕ ಬಸ್ ಸೇವೆ: ಅಕ್ಕಿಆಲೂರಿನಿಂದ ಮನೋಹರ ನಗರ, ಬಾಳಂಬೀಡ, ಆಡೂರ, ಶೀಗಿಹಳ್ಳಿ, ಸಂಗೂರು ಭಾಗದ ವಿದ್ಯಾರ್ಥಿಗಳು ಹಾವೇರಿ ಕಡೆ ಸಂಚರಿಸುವ ಬಸ್​ಗಳಲ್ಲಿ ತೆರಳುತ್ತಾರೆ. ನಿರಂತರ ಬಸ್ ಸೌಲಭ್ಯವಿದ್ದರೂ ಮನೆಗೆ ತೆರಳುವ ಧಾವಂತದಲ್ಲಿ ಬಸ್​ಗೆ ಜೋತು ಬಿದ್ದು ಸಾಗುತ್ತಾರೆ.

    ಇನ್ನೂ ಇನ್ಲಾಂಯಲ್ಲಾಪುರ, ಕಲ್ಲಾಪುರ, ಯತ್ತಿನಹಳ್ಳಿ, ಶ್ಯಾಡಗುಪ್ಪಿ, ಅರಿಶಿಣಗುಪ್ಪಿ, ಮಲಗುಂದ, ಹಾವಣಗಿ, ಹಿರೇಹುಲ್ಲಾಳ ಭಾಗಕ್ಕೆ ಬಸ್​ಗಳ ಕೊರತೆ ಇದೆ. ಹೀಗಾಗಿ ಇರುವ ಒಂದೆರೆಡು ಬಸ್​ನಲ್ಲಿ ಎಲ್ಲರೂ ಪ್ರಯಾಣಿಸುವ ಸ್ಥಿತಿಯಿದೆ.

    ಯ ತಪ್ಪಿದರೆ ಪ್ರಾಣಕ್ಕೆ ಕುತ್ತು: ಪಟ್ಟಣದಲ್ಲಿ ಮೂರು ಐಟಿಐ, ಎರಡು ಪದವಿ ಹಾಗೂ ಮೂರು ಪಿಯು ಕಾಲೇಜ್​ಗಳಿವೆ. ಜ್ಞಾನ ಭಾರತಿ, ಗುರುಕುಲ ಮತ್ತಿತರ ಶಾಲೆಗಳಿಗೆ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸರದಿಯಲ್ಲಿ ಬಸ್ ಹತ್ತಲು ಶಿಕ್ಷಕರು ತಿಳಿಸಿದರೂ, ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇತ್ತ ಬಸ್ ನಿರ್ವಾಹಕರೂ ಇದನ್ನು ನಿರ್ಲಕ್ಷ್ಯಿಸುತ್ತಿದ್ದಾರೆ.

    ಗ್ರಾಮೀಣ ಭಾಗದ ಕೆಲವೆಡೆ ಹೊರತುಪಡಿಸಿದರೆ ಎಲ್ಲ ಕಡೆ ಸಮರ್ಪಕ ಬಸ್ ಸೌಲಭ್ಯವಿದೆ. ಅಗತ್ಯಬಿದ್ದರೆ ಹೆಚ್ಚಿನ ಬಸ್ ಒದಗಿಸಲಾಗುವುದು. ಬಸ್ ಭರ್ತಿಯಾದರೆ ವಿದ್ಯಾರ್ಥಿಗಳು ಬಾಗಿಲಿಗೆ ಜೋತು ಬೀಳದಂತೆ ನೋಡಿಕೊಳ್ಳಲು ಎಲ್ಲ ನಿರ್ವಾಹಕರಿಗೆ ಸೂಚನೆ ನೀಡಲಾಗುವುದು.

    | ಎಚ್.ಡಿ ಜಾವೂರ, ಸಾರಿಗೆ ಘಟಕ ವ್ಯವಸ್ಥಾಪಕ ಹಾನಗಲ್ಲ

    ವಿದ್ಯಾರ್ಥಿಗಳು ಬಸ್ ಬಾಗಿಲಿನಲ್ಲಿ ಜೋತು ಬಿದ್ದು ಸಂಚರಿಸುವುದನ್ನು ನೋಡಿದರೆ ಆತಂಕವಾಗುತ್ತದೆ. ಶಾಲಾ-ಕಾಲೇಜುಗಳು ಮತ್ತು ಸಾರಿಗೆ ಸಂಸ್ಥೆ ಈ ಕುರಿತು ಕ್ರಮ ಕೈಗೊಳ್ಳಬೇಕು.

    | ಹರೀಶ ಹಾನಗಲ್ಲ, ಅಕ್ಕಿಆಲೂರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts