ತೇರದಾಳ : ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ವ್ಯಸನಗಳಿಗೆ ಅಂಟಿಕೊಂಡು ತಮ್ಮ ಭವಿಷ್ಯದ ಮೇಲೆ ಬರೆ ಎಳೆದುಕೊಳ್ಳುತ್ತಿದ್ದಾರೆ ಎಂದು ಬನಹಟ್ಟಿ ಸಿಪಿಐ ಸಂಜೀವ ಬಳಗಾರ ಹೇಳಿದರು.
ಅಪರಾಧ ತಡೆ ಮಾಸಾಚರಣೆ ನಿಮಿತ್ತ ಗುರುವಾರ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯಸನದಿಂದ ದೂರವಿರಿ ಎಂದು ಸಲಹೆ ನೀಡಿದರು.
18 ವರ್ಷದೊಳಗಿನ ಮಕ್ಕಳು ಬೈಕ್ ಓಡಿಸಬಾರದು. ಆದರೆ ಪಾಲಕರೇ ಮಕ್ಕಳ ಕೈಯಲ್ಲಿ ಬೈಕ್‌ಗಳನ್ನು ನೀಡುವುದು ನಿಜಕ್ಕೂ ನೋವಿನ ಸಂಗತಿ. ಲೈಸೆನ್ಸ್ ಇಲ್ಲದೆ ಬೈಕ್ ಓಡಿಸುವುದು ಅಪರಾಧ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಅಗತ್ಯವಾಗಿದೆ ಎಂದರು.
ಠಾಣಾಧಿಕಾರಿ ಅಪ್ಪಣ್ಣ ಐಗಳಿ ಮಾತನಾಡಿ, ದೇಶದ ಸಂಪತ್ತು ಆಗಿರುವ ಯುವಶಕ್ತಿ ದುಷ್ಚಟಗಳಿಂದ ದೂರ ಇರಬೇಕು ಎಂದರು. ಶಿಕ್ಷಕ ಬಿ.ಟಿ. ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆ ಮುಖ್ಯಗುರು ಡಿ.ಎ. ಉಗಾರ, ಪ್ರಾಥಮಿಕ ವಿಭಾಗದ ಬಿ.ಜಿ. ಮುದಕನ್ನವರ, ಪೊಲೀಸ್ ಪೇದೆ ವಿವೇಕ ಸುವರ್ಣಖಂಡಿ, ಮಹಾಂತೇಶ ಗುರವ, ವಿಠ್ಠಲ ಮಾನೆ ಇದ್ದರು.