ವಿಜಯಪುರ: ವಿದ್ಯಾರ್ಥಿಗಳು ನಿತ್ಯವೂ ಪತ್ರಿಕೆಗಳನ್ನು ಓದುವ ಮೂಲಕ ದೈನಂದಿನ ಟನೆ ಹಾಗೂ ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಮುಂದಾಗಬೇಕೆಂದು ಪತ್ರಕರ್ತ ರಫೀ ಭಂಡಾರಿ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಎಸ್ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ಐಕ್ಯೂಎಸಿ, ಮಹಾವಿದ್ಯಾಲಯದ ಕೆರಿಯರ್ ಗೈಡೆನ್ಸ್, ಪ್ಲೇಸ್ಮೆಂಟ್ ಸೆಲ್ ವಿಭಾಗ ಮತ್ತು ಎಸ್ಬಿ ವಿಸ್ಡಮ್ ಕರಿಯರ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಬಿಎ, ಬಿಎಸ್ಸಿ, ಬಿಸಿಎ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀೆಗಳ 15 ದಿನಗಳ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು.
ಯುವಜನತೆ ಮೊಬೈಲ್ ಗೀಳಿಗೆ ತುತ್ತಾಗಿ ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ಮೊಬೈಲ್ ಶೈಣಿಕ ಚಟುವಟಿಕೆಗೆ ಬಳಸಿಕೊಂಡು ತಮ್ಮ ಭವ್ಯ ಭವಿಷ್ಯ ನಿರ್ಮಿಸಿಕೊಳ್ಳಬೇಕು. ಓದಿನಿಂದಲೇ ಉತ್ತಮ ಜ್ಞಾನ ಸಂಪಾದಿಸಲು ಸಾಧ್ಯ. ವಿದ್ಯೆ ಇದ್ದವನೇ ನಿಜವಾದ ಸಿರಿವಂತ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಗೋಳಗುಮ್ಮಟ ಠಾಣೆ ಸಿಪಿಐ ಮಲ್ಲಯ್ಯ ಮಠಪತಿ ಮಾತನಾಡಿ, ಹೆತ್ತ ತಂದೆ ತಾಯಿಯನ್ನು ಮಾದರಿಯಾಗಿಸಿಕೊಂಡರೆ ಸಾಧನೆಯ ದಾರಿ ಸುಲಭವಾಗಲಿದೆ. ಓದಿನ ಜತೆಗೆ ಜೀವನ ರೂಪಿಸಿಕೊಳ್ಳಲು ನೆರವಾಗುವ ಹಲವು ದಾರಿಗಳನ್ನು ಕಂಡುಕೊಳ್ಳಬೇಕು. ನಿಮ್ಮ ಸಾಧನೆಗೆ ನೀವೇ ಮಾರ್ಗ ಹುಡುಬೇಕೆ ವಿನಾ ಬೇರೆಯವರನ್ನು ಅವಲಂಬಿಸಬಾರದು ಎಂದು ತಿಳಿಸಿದರು.
ಎಸ್ಬಿ ವಿಸ್ಡಮ್ ಕರಿಯರ್ ಅಕಾಡೆಮಿ ಸಂಸ್ಥಾಪಕ ಶರಣಯ್ಯ ಭಂಡಾರಿಮಠ, ಆಡಳಿತಾಧಿಕಾರಿ ಭಾಗೇಶ ಮುರಡಿ ಹಾಗೂ ಪ್ರಾಚಾಯೆರ್ ಡಾ. ಆರ್.ಎಂ. ಮಿರ್ದೆ ಮಾತನಾಡಿದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀೆಗಳ ತರಬೇತಿ ಅನುಭವ ಹಂಚಿಕೊಂಡರು. ಡಾ. ಪಿ.ಎಸ್. ಪಾಟೀಲ ಸ್ವಾಗತಿಸಿದರು, ಡಾ. ಉಷಾದೇವಿ ಹಿರೇಮಠ ನಿರೂಪಿಸಿದರು.
ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಅನೀಲ ನಾಯಕ, ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್. ಪಾಟೀಲ, ನ್ಯಾಕ್ ಸಂಯೋಜಕ ಡಾ. ಕೆ. ಮಹೇಶಕುಮಾರ, ಡಾ. ಶ್ರೀನಿವಾಸ ದೊಡ್ಡಮನಿ, ಪ್ಲೇಸ್ಮೆಂಟ್ ಸೆಲ್ ವಿಭಾಗದ ಸಂಯೋಜಕ ಡಾ. ಅಮಿತ ತೇರದಾಳೆ, ಎಂ.ಎಸ್. ಜೇವೂರ ಮತ್ತಿತರರಿದ್ದರು.
