ವಿದ್ಯಾರ್ಥಿಗಳ ಎದುರಲ್ಲೇ ಜಗಳವಾಡಿದ ಶಿಕ್ಷಕರು

ಮಂಗಳೂರು: ವಿದ್ಯಾರ್ಥಿಗಳ ಎದುರೇ ಹಿಂದಿ ಶಿಕ್ಷಕ ಮತ್ತು ಶಾಲಾ ಮುಖ್ಯಶಿಕ್ಷಕಿ ಹೊಡೆದಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಘಟನೆ ನಡೆದಿದ್ದು ವಿದ್ಯಾರ್ಥಿನಿಯರ ಎದುರೇ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ ರವೀಂದ್ರ ಮತ್ತು ಮುಖ್ಯ ಶಿಕ್ಷಕಿ ಪ್ರೇಮಲತಾ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಶಿಕ್ಷಕರ ಜಗಳ ಬಿಡಿಸಲು ಬಂದ ಇತರೆ ಶಿಕ್ಷಕರಿಗೂ ಹಿಂದಿ ಶಿಕ್ಷಕ ರವೀಂದ್ರ ಹಲ್ಲೆ ನಡೆಸಿದ್ದು, ಜಗಳದ ದೃಶ್ಯ ಶಾಲೆಯಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಸಂಬಂಧ ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *