ಕಾಲೇಜಿನಲ್ಲಿ ಪೋಸ್ ಕೊಡಲು ಹೋಗಿ ಟ್ರ್ಯಾಕ್ಟರ್​ನೊಂದಿಗೆ ವಿದ್ಯಾರ್ಥಿಗಳು ಪಲ್ಟಿ, ಇಬ್ಬರಿಗೆ ತೀವ್ರಗಾಯ

ತುಮಕೂರು: ಕ್ಯಾಂಪಸ್​ನಲ್ಲಿ ಹುಡುಗಿಯರ ಮುಂದೆ ಬಿಲ್ಡಪ್​​​​​​ ಕೊಡಲು ಹೋದ ಕಾಲೇಜು ವಿದ್ಯಾರ್ಥಿಗಳು ತೀವ್ರ ಗಾಯಗೊಂಡು ಆಸ್ಪತ್ರೆ ಸೇರುವಂತಹ ಘಟನೆ ಗುಬ್ಬಿ ತಾಲೂಕಿನ ಸಿಐಟಿ ಕಾಲೇಜಿನಲ್ಲಿ ನಡೆದಿದೆ.
ಶನಿವಾರ ಕಾಲೇಜಿನ ವಾಷಿಕೋತ್ಸವ ನಡೆಯುತ್ತಿದ್ದ ವೇಳೆ ಹುಡುಗಿಯರ ಗಮನ ಸೆಳೆಯಲು ಹೋಗಿ ಭಾರಿ ದುರಂತವಾಗಿದೆ. ಕಾಲೇಜಿಗೆ ಟ್ರ್ಯಾಕ್ಟರ್​​ ತರುವುದಕ್ಕೆ ಅನುಮತಿಯಲ್ಲದಿದ್ದರೂ ತಂದಿದ್ದ ವಿದ್ಯಾರ್ಥಿಗಳು ಭಾರಿ ದುರಂತವನ್ನು ಎದುರಿಸಿದ್ದಾರೆ.

ಕಾಲೇಜು ಫೆಸ್ಟ್​​ ವೇಳೆ ಒಂದೇ ತರಹದ ಉಡುಪು ಧರಿಸಿ ಟ್ರ್ಯಾಕ್ಟರ್​​ನಲ್ಲಿ ಝಲಕ್​​​ ನೀಡಿದರು. ಈ ವೇಳೆ ಆಯತಪ್ಪಿದ ಟ್ರ್ಯಾಕ್ಟರ್​​​​​​​ ಬಲಕ್ಕೆ ಪಲ್ಟಿ ಹೊಡೆಯಿತು. ಈ ದೃಶ್ಯದಿಂದ ಇಡೀ ಕಾಲೇಜು ತಲ್ಲಣಗೊಂಡಿದೆ.
ಈ ಘಟನೆಯಿಂದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *