More

  ಬಸ್ ಪಾಸ್‌ಗಾಗಿ ವಿದ್ಯಾರ್ಥಿಗಳ ಪರದಾಟ

  ಧಾರವಾಡ: ಶಾಲೆ- ಕಾಲೇಜು ಆರಂಭವಾಗಿ ಅರ್ಧ ತಿಂಗಳು ಕಳೆದರೂ ಸಾರಿಗೆ ಸಂಸ್ಥೆಯ ಬಸ್ ಪಾಸ್ ವಿತರಣೆ ವ್ಯವಸ್ಥೆ ಸುಧಾರಿಸುತ್ತಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ರಿಯಾಯಿತಿ ದರದ ಪಾಸ್ ಪಡೆಯಲು 2- 3 ದಿನ ಅಲೆದಾಡಬೇಕಾಗಿದೆ.
  ಪ್ರಸಕ್ತ ಸಾಲಿನ ಶಾಲೆ- ಕಾಲೇಜುಗಳು ಜೂ. 1ರಿಂದ ಕಾರ್ಯಾರಂಭಿಸಿವೆ. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಟಿಕೆಟ್ ಪಡೆದೇ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸುವ೦ತಾಗಿದೆ. ಹೆಚ್ಚುವರಿ ಕೌಂಟರ್‌ಗಳನ್ನು ಆರಂಭಿಸುವ೦ತೆ ಪಾಲಕರು- ವಿದ್ಯಾರ್ಥಿಗಳ ಒತ್ತಾಯಿಸಿದರೂ ಸಂಸ್ಥೆಯ ಅಽಕಾರಿಗಳು ಕಣ್ಣು ತೆರೆಯುತ್ತಿಲ್ಲ.
  ಶಾಲೆ- ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಪ್ರವೇಶಾತಿ ರಸೀದಿ, ಆಧಾರ್ ಕಾರ್ಡ್ ನೀಡಿ ನೋಂದಾಯಿಸಿಕೊಳ್ಳಬೇಕು. ಸೇವಾ ಸಿಂಧು ಪೋರ್ಟಲ್‌ನಲ್ಲಿ ದಾಖಲೆ ನೀಡಿ ನೋಂದಾಯಿಸಿಕೊಳ್ಳಲೂ ಕೆಲವೊಮ್ಮೆ ಸರ್ವರ್ ಸಮಸ್ಯೆ ತಲೆದೋರುತ್ತಿದೆ. ಖಾಸಗಿ ಆನ್‌ಲೈನ್ ಸೆಂಟರ್‌ಗಳಲ್ಲಿ ಅರ್ಜಿ ಅಪ್‌ಲೋಡ್ ಮಾಡಲು ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದೆ. ಕೆಲ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಲು 200 ರೂಪಾಯಿವರೆಗೆ ಹಣ ಪೀಕಲಾಗುತ್ತಿದೆ.
  ಅರ್ಜಿ ಸಲ್ಲಿಸಿದ ನಂತರ ಹೊಸ ಬಸ್ ನಿಲ್ದಾಣದ ಕೌಂಟರ್‌ಗೆ ಹೋಗಿ ವಿದ್ಯಾರ್ಥಿ ಬಸ್ ಪಾಸ್ ಮಾಡಿಸಬೇಕು. ಆನ್‌ಲೈನ್ ಸೆಂಟರ್‌ಗಳಲ್ಲಿ ಸಲ್ಲಿಸಿದ ಅರ್ಜಿ ಸಾರಿಗೆ ಸಂಸ್ಥೆಯಿAದ ಅನುಮೋದನೆಯಾಗಬೇಕಾದರೆ ಕನಿಷ್ಠ 24 ಗಂಟೆ ಬೇಕು. ಈ ಮಾಹಿತಿ ಇಲ್ಲದ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಮರಳುತ್ತಿದ್ದಾರೆ.
  ಪಾಸ್ ಕೌಂಟರ್ ಹೆಚ್ಚಳಕ್ಕೆ ಒತ್ತಾಯ: ನಗರದ ಹೊಸ ಬಸ್ ನಿಲ್ದಾಣವಲ್ಲದೆ, ಕಲಾಭವನದಲ್ಲಿರುವ ಹು-ಧಾ ಪಾಲಿಕೆಯ ವಲಯ 12ರ ಕರ್ನಾಟಕ ಒನ್ ಕೇಂದ್ರದಲ್ಲೂ ಪಾಸ್ ವಿತರಣೆ ವ್ಯವಸ್ಥೆ ಇದೆ. ಇಲ್ಲಿರುವ 6 ಕೌಂಟರ್‌ಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿಗಾಗಿ ಒಂದು ಕೌಂಟರ್ ಮೀಸಲಿದೆ. ಉಳಿದ 4 ಕೌಂಟರ್‌ಗಳಲ್ಲಿ ತೆರಿಗೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ಬಿಲ್ ಪಾವತಿ ನಡೆಯುತ್ತಿದೆ. ತೆರಿಗೆ, ಇತರ ಬಿಲ್ ಆಕರಣೆಗೆ ಇರುವ ಸಿಬ್ಬಂದಿ ದಿನವಿಡೀ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಚ್ಚುವರಿಯಾಗಿ ಪಾಸ್ ವಿತರಣಾ ಕೌಂಟರ್ ಮಾಡಿರುವುದರಿಂದ ನೂಕುನುಗ್ಗಲು ಇಲ್ಲಿ ಸಾಮಾನ್ಯ. ನಗರದ ಇನ್ನುಳಿದ ವಲಯ ಕಚೇರಿಗಳಲ್ಲೂ ಪಾಸ್ ವಿತರಣಾ ಕೌಂಟರ್‌ಗಳನ್ನು ತೆರೆದರೆ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ ಎಂಬುದು ವಿದ್ಯಾರ್ಥಿ- ಪಾಲಕರ ಒತ್ತಾಯ.

  See also  ಹೆಚ್ಚು ಬಸ್ ಸಂಚಾರಕ್ಕೆ ಕ್ರಮವಹಿಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts