ಲಕ್ಷ್ಮೇಶ್ವರ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಎಲ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭ ಪು.ಬಡ್ನಿ ಗ್ರಾಮದಲ್ಲಿ ಶುಕ್ರವಾರ ನೆರವೇರಿತು.

ಕ್ಷೇತ್ರ ಯೋಜನಾಧಿಕಾರಿ ಪುನೀತ ಓಲೇಕಾರ ಮಾತನಾಡಿ, ಧಗ್ರಾ ಯೋಜನೆಯಿಂದ ಶಿಕ್ಷಕರು ಕೊರತೆ ಇರುವ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯದ್ಯಂತ ಈ ವರ್ಷ ಗೌರವ ಧನದ ಆಧಾರದ ಮೇಲೆ 1030 ಶಿಕ್ಷಕರನ್ನು ನೇಮಿಸಿ ಈ ಮೂಲಕ ವಿದ್ಯಾರ್ಥಿಗಳಿಗೆ 3 ತಿಂಗಳ ಕಾಲ ಗಣಿತ, ವಿಜ್ಞಾನ, ಇಂಗೀಷ್ ವಿಷಯಗಳ ಟ್ಯೂಷನ್ ಕೊಡಿಸಲಾಗುತ್ತಿದೆ. ತಾಲೂಕಿನಲ್ಲಿ 5 ಶಾಲೆಗಳಲ್ಲಿ ಟ್ಯೂಶನ್ ಕ್ಲಾಸ್ ನಡೆಸಲಾಗಿದೆ ಎಂದರು.
ಗ್ರಾಮದ ಪರಮೇಶಪ್ಪ ಬಟಗುರ್ಕಿ ಮಾತನಾಡಿದರು. ಮುಖ್ಯೋಪಾಧ್ಯಾಯ ಹರ್ಷ, ಎಚ್.ಎಫ್. ನದಾಫ್, ಜೆ.ಆರ್. ಪಾಟೀಲ, ಆನಂದ ಮುಳುಗುಂದ, ಅಮರೇಶ ಚಲವಾದಿ, ಶಿವಲೀಲಾ ಮಂಚಾಲೆ, ಆಯುಷ್ಯ ಗುಡಾರದ, ಅನಸಮ್ಮ ಬೊಮ್ಮಳ್ಳಿ, ದುದ್ದುಸಾಬ್ ಶೆಟ್ಟಿ, ಮಮತಾ ಹಾಗೂ ಸೇವಾ ಪ್ರತಿನಿಧಿಗಳು ಇದ್ದರು