25.8 C
Bangalore
Tuesday, December 10, 2019

ಫೇಲಾದ ವಿದ್ಯಾರ್ಥಿಗಳಿಗೆ ಪ್ರೇರಣ

Latest News

ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ವಿಜಯಪುರ: ಒಬ್ಬನ ಬುದ್ಧಿಶಕ್ತಿಯಿಂದ ಉತ್ಪಾದನೆಯಾದುದೇ ಬೌದ್ಧಿಕ ಆಸ್ತಿ. ಅದು ಇಡೀ ಜನಾಂಗಕ್ಕೆ ಉಪಯೋಗವಾಗಬೇಕು. ಆ ನಿಟ್ಟಿನಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ನಮ್ಮೆಲ್ಲರ...

ಕೊಲ್ಲಾಪುರ ಮಹಾಲಕ್ಷ್ಮೀ ದರ್ಶನ ಪಡೆದ ರಮೇಶ ಜಾರಕಿಹೊಳಿ

ಗೋಕಾಕ: ತೀವ್ರ ಜಿದ್ದಾಜಿದ್ದಿನಿಂದ ನಡೆದ ಗೋಕಾಕ ಮತಕ್ಷೇತ್ರದ ಉಪಚುನಾವಣೆಯಲ್ಲಿ ಸತತ 6ನೇ ಬಾರಿಗೆ ಭರ್ಜರಿ ವಿಜಯ ಸಾಧಿಸಿ, ಕೊಲ್ಲಾಪುರ ಮಹಾಲಕ್ಷ್ಮೀದೇವಿ ದರ್ಶನ ಪಡೆದ...

ಎರಡು ವರ್ಷಗಳ ಅವಧಿಯಲ್ಲಿ 51 ಗೂಳಿ ದಾಳಿ ಪ್ರಕರಣ, 12 ಜನರ ಪ್ರಾಣಕ್ಕೆ ಕುತ್ತು, 39ಕ್ಕೆ ಜನರಿಗೆ ಗಾಯ!

ಧರ್ಮಶಾಲ: ಎರಡು ವರ್ಷಗಳ ಅವಧಿಯಲ್ಲಿ ದಾಖಲಾದ ಗೂಳಿ ದಾಳಿ ಪ್ರಕರಣ ಹೆಚ್ಚೇನಿಲ್ಲ 51 ಅಷ್ಟೇ. ಪ್ರಾಣ ಕಳೆದುಕೊಂಡವರ ಸಂಖ್ಯೆ 12. ಗಾಯಗೊಂಡವರ ಸಂಖ್ಯೆ...

ಬೇಸಿಗೆಯಲ್ಲಾಗದಿರಲಿ ಕುಡಿವ ನೀರಿನ ತೊಂದರೆ, ಜಿಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಅಧ್ಯಕ್ಷ ವಿಶ್ವನಾಥರಡ್ಡಿ ಸೂಚನೆ

ಕೊಪ್ಪಳ: ಬೇಸಿಗೆ ವೇಳೆಗೆ ಜಿಲ್ಲೆಯಲ್ಲಿ ಕುಡಿವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಲ್ಲದೇ ತೀರಾ ಅನಿವಾರ್ಯ ಇರುವ ಕಾಮಗಾರಿ ಮೊದಲು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಜಿಪಂ...

ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಅವಶ್ಯ ಎಂದ ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭಾ

ಯಲಬುರ್ಗಾ: ಪ್ರತಿ ಮಹಿಳೆ ಸ್ವಾವಲಂಬಿ ಜೀವನ ನಡೆಸಲು ಶಿಕ್ಷಣ ಅವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭಾ ಹೇಳಿದರು. ನ್ಯಾಯಾಲಯ ಹಾಗೂ ವಿವಿಧ ಇಲಾಖೆ...

| ಅವಿನಾಶ್ ಜೈನಹಳ್ಳಿ ಮೈಸೂರು

ವಿದ್ಯಾರ್ಥಿ ಜೀವನದಲ್ಲಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪ್ರಮುಖ ಘಟ್ಟಗಳು. ಈ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳು ಮುಂದಿನ ಹಂತಕ್ಕೆ ಬುನಾದಿ. ಈ ಹಂತದಲ್ಲಿ ಅನುತ್ತೀರ್ಣರಾದಾಗ ಅಪಮಾನ ತಾಳಲಾರದೆ ಮಾನಸಿಕವಾಗಿ ಕುಗ್ಗುವವರೇ ಹೆಚ್ಚು.

ಇನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಅಂಕ ಪಡೆದವರನ್ನೇ ಗುರುತಿಸಿ ಮತ್ತಷ್ಟು ಅಂಕ ಪಡೆಯಲು ಪ್ರೇರೇಪಿಸುವ ಜತೆಗೆ, ಫೇಲಾಗá-ವ ವಿದ್ಯಾರ್ಥಿಗಳನ್ನು ಇನ್ನಷ್ಟು ಅವಮಾನಿಸುವವರೇ ಹೆಚ್ಚುತ್ತಿದ್ದಾರೆ. ಇಂಥ ಕೆಟ್ಟ ಬೆಳವಣಿಗೆಗೆ ಹೊರತಾಗಿರುವ ಮೈಸೂರಿನ ಪ್ರೇರಣ ಅಕಾಡೆಮಿ, ಫೇಲಾದ ವಿದ್ಯಾರ್ಥಿಗಳನ್ನು ಗುರುತಿಸಿ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡುತ್ತಿದೆ.

ಸೋತವರಲ್ಲಿ ಆತ್ಮವಿಶ್ವಾಸ ರೂಢಿಸಿ, ಓದುವ ಕಲೆ ಕರಗತಗೊಳಿಸಿ, ಪ್ರತಿಭೆಯನ್ನು ಒರೆಗೆ ಹಚ್ಚಿ ಅವರನ್ನು ಗೆಲ್ಲಿಸುವ ಕಾಯಕದಲ್ಲಿ ಈ ಅಕಾಡೆಮಿ ನಿರತವಾಗಿದೆ. ಫೇಲಾದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಕೋಚಿಂಗ್ ಪಡೆದು ಯಶಸ್ಸು ಗಳಿಸಿದ್ದಾರೆ. ಪರೀಕ್ಷೆಯೊಂದರ ಸೋಲು ಜೀವನದ ಸೋಲಲ್ಲ, ಸೋಲು ಶಾಶ್ವತವಲ್ಲ, ಸೋತವನೂ ಗೆಲ್ಲಬಲ್ಲ ಎಂಬ ಘೊಷವಾಕ್ಯದೊಂದಿಗೆ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

5 ಸಾವಿರ ವಿದ್ಯಾರ್ಥಿಗಳಿಗೆ ಪ್ರೇರಣೆ!: ಗಣಿತ ಶಿಕ್ಷಕರಾದ ಎಸ್.ಎಸ್. ಭಟ್ 2000ನೇ ಇಸವಿಯಲ್ಲಿ ಈ ಸಂಸ್ಥೆಯನ್ನು ಆರಂಭಿಸಿದರು. ಬಳಿಕ ಸ್ನೇಹಿತರಾದ ಪ್ರದೀಪ್, ನಿರಂಜನ್ ಖೊರಾನಿ ಜತೆಗೂಡಿ ಅನುತ್ತೀರ್ಣಗೊಂಡ ಮಕ್ಕಳಿಗೆ ಒಂದು ತಿಂಗಳ ತರಬೇತಿ ನೀಡಿ ಅವರನ್ನು ಉತ್ತೇಜಿಸುವುದಕ್ಕೆ ಮುಂದಾದರು. ವಿದ್ಯಾರ್ಥಿಗಳ ಕೀಳರಿಮೆ ದೂರ ಮಾಡಿ, ನೀವೂ ಉತ್ತಮ ಅಂಕ ಗಳಿಸಬಲ್ಲಿರಿ ಎಂಬುದನ್ನು ಮನವರಿಕೆ ಮಾಡಿಕೊಡಲು ಮುಂದಾದರು. ಮೊದಲು ಎಸ್​ಎಸ್​ಎಲ್​ಸಿಯಲ್ಲಿ ಫೇಲಾದ ಮಕ್ಕಳಿಗೆ ಮಾತ್ರ ತರಬೇತಿ ನೀಡಲಾಯಿತು. ಬಳಿಕ ಅದನ್ನು ಪಿಯುಸಿಗೂ ವಿಸ್ತರಿಸಲಾಯಿತು.

ಮೊದಲ ವರ್ಷ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಹಂತಕ್ಕೆ ಹೋದರು. ಮರು ವರ್ಷದಿಂದ ಈ ಸಂಖ್ಯೆ ಹೆಚ್ಚಾಗಿ ಪಿಯುಸಿಗೂ ವಿಸ್ತರಣೆಯಾಯಿತು. 19 ವರ್ಷಗಳಲ್ಲಿ 5 ಸಾವಿರ ಮಕ್ಕಳು ತರಬೇತಿ ಪಡೆದಿದ್ದಾರೆ. ನಂತರ ಶಿಕ್ಷಣ ಮುಂದುವರಿಸಿ ಇಂಜಿನಿಯರ್, ವೈದ್ಯ, ಅಧ್ಯಾಪಕ ಮುಂತಾದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಳೆದ ವರ್ಷ ಪಿಯುಸಿ ಪರೀಕ್ಷೆಯ ಗಣಿತ ವಿಷಯದಲ್ಲಿ ಕೇವಲ 8 ಅಂಕ ಗಳಿಸಿ ಫೇಲಾಗಿದ್ದ ಕಾರ್ತಿಕ್ ಇತ್ತೀಚೆಗೆ ಪ್ರಕಟಗೊಂಡ ಈ ವರ್ಷದ ಫಲಿತಾಂಶದಲ್ಲಿ 98 ಅಂಕ ಗಳಿಸಿದ್ದಾನೆ. ಆತ ಪ್ರೇರಣ ಅಕಾಡೆಮಿಯಲ್ಲಿ 200 ದಿನಗಳ ತರಬೇತಿ ಪಡೆದು ಈ ಸಾಧನೆ ಮಾಡಿದ್ದಾನೆ. ಇನ್ನು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲೇ ಫೇಲಾಗಿದ್ದ ಮಮತಾ ರಾಜ್ ಇಂದು ಎಲ್​ಎಲ್​ಎಂ ಮುಗಿಸಿ ವಕೀಲರಾಗಿದ್ದಾರೆ. ಪಿಯುಸಿ ಪರೀಕ್ಷೆಯ ಬಹುತೇಕ ವಿಷಯಗಳಲ್ಲಿ ಕೇವಲ ಆರೇಳು ಅಂಕ ಗಳಿಸಿ ಫೇಲಾಗಿದ್ದ ತೇಜಸ್ ಇಲ್ಲಿ ತರಬೇತಿ ಪಡೆದು ಎಲ್ಲ ವಿಷಯಗಳಲ್ಲೂ ಶೇ. 80 ಅಂಕ ಪಡೆದು ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾನೆ. ಅಷ್ಟೇ ಅಲ್ಲ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೊಬ್ಬರ ಮಕ್ಕಳಿಬ್ಬರು, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಯೊಬ್ಬರ ಮಗ, ಮಾಜಿ ಸಂಸದರೊಬ್ಬರ ಮಗ ಹೀಗೆ… ಅನೇಕ ಪ್ರಾಧ್ಯಾಪಕರು, ವೈದ್ಯರು, ರಾಜಕಾರಣಿಗಳ ಮಕ್ಕಳು ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಫೇಲಾದಾಗ ಪ್ರೇರಣದಲ್ಲಿ ತರಬೇತಿ ಪಡೆದು ಪಾಸಾಗಿರುವುದುಂಟು ಎನ್ನುತ್ತಾರೆ ಎಸ್. ಎಸ್. ಭಟ್. ಮೈಸೂರಿನ ಬೋಗಾದಿ 2ನೇ ಹಂತದಲ್ಲಿ ಹಾಗೂ ಗಂಗೋತ್ರಿ ಬಡಾವಣೆಯ ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿ ಪ್ರೇರಣ ಅಕಾಡೆಮಿಯ ತರಬೇತಿ ಕೇಂದ್ರಗಳು ಇವೆ. 20ಕ್ಕೂ ಹೆಚ್ಚಿನ ಸಂಪನ್ಮೂಲ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರದೀಪ್ ಹಾಗೂ ನಿರಂಜನ್ ಕೋಚಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 200 ದಿನಗಳ ದೀರ್ಘಾವಧಿ ಮತ್ತು ಪೂರಕ ಪರೀಕ್ಷೆ ಸಂದರ್ಭದಲ್ಲಿ 40 ದಿನಗಳ ಅಲ್ಪಾವಧಿ, ಜತೆಗೆ 90 ದಿನಗಳ ಮಧ್ಯಮಾವಧಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತದೆ. ಶುಲ್ಕ ನಿಗದಿ ಮಾಡಿದ್ದರೂ, ಇಲ್ಲಿಯ ವಿದ್ಯಾರ್ಥಿ ಎಲ್ಲ ತರಬೇತಿ ತರಗತಿ ಹಾಗೂ ಟೆಸ್ಟ್​ಗಳನ್ನು ಬರೆದೂ, ಮತ್ತೆ ಅನುತ್ತೀರ್ಣರಾದರೆ ಅವರು ಭರಿಸಿದ ಶುಲ್ಕ ಸಂಪೂರ್ಣ ವಾಪಸ್ ನೀಡಲಾಗುತ್ತದೆ! ಅಲ್ಪಾವಧಿ ತರಬೇತಿಯಲ್ಲಿ ವಿದ್ಯಾರ್ಥಿಗಳು ಪಾಸಾಗá-ವಷ್ಟರ ಮಟ್ಟಿಗೆ ತರಬೇತಿ ನೀಡಲಾಗುತ್ತದೆ. ದೀರ್ಘಾವಧಿಯಲ್ಲಿ ಮೊದಲು ವಿದ್ಯಾರ್ಥಿಯನ್ನು ಅಧ್ಯಯನ ಮಾಡಿ, ಆತ ಏಕೆ ಫೇಲಾದ ಎಂದು ರ್ಚಚಿಸಿ ಬಳಿಕ ಆತನಿಗೆ ಅರ್ಥವಾಗುವ ರೀತಿ ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಪ್ರದೀಪ್.

ಸಮಾಲೋಚನೆ: ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಆಪ್ತಸಲಹೆ (ಕೌನ್ಸೆಲಿಂಗ್) ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಛಲ, ಶಿಸ್ತು, ಏಕಾಗ್ರತೆ, ಸಮಯಪಾಲನೆ ರೂಢಿಸಿ ಸವಾಲನ್ನು ಎದುರಿಸುವ ಬಗೆಯನ್ನೂ ಹೇಳಿಕೊಡಲಾಗುತ್ತದೆ.

ಪಿಯುಸಿ ತರಬೇತಿ: ಮೈಸೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಿಂದಲೂ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯಲು ಬರುತ್ತಾರೆ. ಬೋಗಾದಿ ಕೇಂದ್ರದಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ.

ಇತ್ತೀಚಿನ ಪಿಯುಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಏಪ್ರಿಲ್ 19ರಿಂದ 40 ದಿನಗಳ ಅಲ್ಪಾವಧಿ ತರಬೇತಿ ಪ್ರಾರಂಭವಾಗಿದೆ. ಎಸ್​ಎಸ್​ಎಲ್​ಸಿ ಫಲಿತಾಂಶ ಬಂದ ಎರಡು ದಿನಗಳ ಬಳಿಕ ಅದರಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ ಪ್ರಾರಂಭವಾಗುತ್ತದೆ ಎನ್ನುತ್ತಾರೆ ನಿರಂಜನ್ ಖೊರಾನಿ.

ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು ನಾಲ್ಕು ವಿಷಯಗಳಲ್ಲಿ ಫೇಲಾಗಿದ್ದೆ. ಇಲ್ಲಿ ದೀರ್ಘಾವಧಿ ತರಬೇತಿ ಪಡೆದು ನಂತರದ ಪರೀಕ್ಷೆಯಲ್ಲಿ ಶೇ. 85 ಅಂಕ ಗಳಿಸಿದೆ. ಪಾಸ್ ಆಗಲು ಕಷ್ಟವಾಗಿದ್ದ ನನಗೆ ಪ್ರೇರಣ ಅಕಾಡೆಮಿ ರ್ಯಾಂಕ್ ತೆಗೆಯುವಂತೆ ಮಾಡಿತು.

| ತೇಜಸ್ ಪ್ರೇರಣ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ವಿದ್ಯಾರ್ಥಿ

ಅನಿವಾರ್ಯ ಕಾರಣಗಳಿಂದ ಕೆಲವು ವಿದ್ಯಾರ್ಥಿಗಳು ಫೇಲಾಗಿಬಿಡುತ್ತಾರೆ. ಅಂತಹ ಮಕ್ಕಳು ಇಲ್ಲಿಗೆ ಬಂದಾಗ ಅವರು ಅನá-ತ್ತೀರ್ಣರಾಗಲು ಕಾರಣವಾದ ಅಂಶಗಳನ್ನು ಪತ್ತೆ ಮಾಡಿ ಅದನ್ನಾಧರಿಸಿಯೇ ತರಬೇತಿ ನೀಡಲಾಗುತ್ತದೆ. ಪರೀಕ್ಷೆಗೆ ಮುಖ್ಯವಾದ ವಿಷಯ ಹೇಳಿಕೊಡಲಾಗುತ್ತದೆ. ಆ ವಿದ್ಯಾರ್ಥಿಯ ತಪ್ಪುಗಳನ್ನು ತಿದ್ದಿ ಹೇಳಿಕೊಡಲಾಗುತ್ತದೆ.

| ಎಸ್.ಎಸ್. ಭಟ್ ಪ್ರೇರಣ ಅಕಾಡೆಮಿ ಸಂಸ್ಥಾಪಕ

(ಪ್ರತಿಕ್ರಿಯಿಸಿ: [email protected])

Stay connected

278,746FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...