More

    ವಿದ್ಯಾರ್ಥಿಗಳಲ್ಲಿರುವ ಇಂಗ್ಲಿಷ್ ಭಯ ಹೋಗಲಾಡಿಸಿ, ಡಿಡಿಪಿಐ ಟಿ.ರಾಮಪ್ಪ ಸಲಹೆ

    ಬಳ್ಳಾರಿ: ತರಗತಿಯಲ್ಲಿ ಶಿಕ್ಷಕರು ಸರಳವಾಗಿ ಇಂಗ್ಲಿಷ್ ಮಾತನಾಡುವುದನ್ನು ರೂಢಿಸಿಕೊಂಡಾಗ ವಿದ್ಯಾರ್ಥಿಗಳು ಸುಲಲಿತವಾಗಿ ಇಂಗ್ಲಿಷ್ ಭಾಷೆ ಅಧ್ಯಯನ ಮಾಡಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ.ರಾಮಪ್ಪ ಹೇಳಿದರು.

    ನಗರದ ಅಲ್ಲಂ ಕರಿಬಸಪ್ಪ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಇಂಗ್ಲಿಷ್ ಶಿಕ್ಷಕರಿಗೆ ವೀವಿ ಸಂಘ ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಕಷ್ಟ ಪಡುತ್ತಿದ್ದಾರೆ. ಅನೇಕರು ಅನುತ್ತೀರ್ಣರಾಗುತ್ತಿದ್ದಾರೆ. ಈ ಸಮಸ್ಯೆ ಹೋಗಲಾಡಿಸಲು ಶಿಕ್ಷಕರು ಶ್ರಮಿಸಬೇಕು. ವಿದ್ಯಾರ್ಥಿಗಳಲ್ಲಿ ಶಬ್ಧ ಸಂಗ್ರಹ ಬೆಳೆಸಬೇಕು. ಶುದ್ಧ ಬರವಣಿಗೆ, ಸತತವಾಗಿ ಓದಿಸುವ ಮೂಲಕ ಇಂಗ್ಲಿಷ್ ಭಾಷೆ ಮೇಲೆ ಹಿಡಿತ ಸಾಧಿಸಲು ಪ್ರೇರಣೆ ಒದಗಿಸಬೇಕು ಎಂದರು.

    ಸಂಪನ್ಮೂಲ ವ್ಯಕ್ತಿ ಎಚ್.ಎಂ.ಬಸವರಾಜ ಮಾತನಾಡಿ, ಇಂಗ್ಲಿಷ್ ಕಠಿಣ ಭಾಷೆಯಲ್ಲ. ಶಿಕ್ಷಕರು ಏನಾದರೂ ವಿಶೇಷತೆ ಜತೆಗೆ ಮಕ್ಕಳಿಗೆ ಇಂಗ್ಲಿಷ್ ಭಾಷೆ ಅರ್ಥವಾಗುವಂತೆ ಕಲಿಸುವುದಕ್ಕೆ ಆದ್ಯತೆ ನೀಡಬೇಕು ಎಂದರು. ವೀವಿ ಸಂಘದ ಶೈಕ್ಷಣಿಕ ಸಲಹೆಗಾರ ಡಾ.ಅರವಿಂದ ಪಾಟೀಲ್ ಮಾತನಾಡಿದರು. ಬಿಇಒ ವೆಂಕಟೇಶ ರಾಮಚಂದ್ರಪ್ಪ, ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ಪಿ.ಎನ್.ಶ್ರೀನಾಥ, ಸಂಪನ್ಮೂಲ ವ್ಯಕ್ತಿ ಯು.ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts