ದಾವಣಗೆರೆ: ಎಸ್ಎಸ್ಎಲ್ಸಿ ವಿದ್ಯಾರ್ಥಿಯೋರ್ವ ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಜಗಳೂರು ತಾಲೂಕಿನ ಕಣ್ವಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಪವನ್ (16) ಮೃತ ವಿದ್ಯಾರ್ಥಿ. ಈತ ಚಿಕ್ಕಮ್ಮನಹಟ್ಟಿ ಗ್ರಾಮದ ವಕೀಲ ಸಿ.ಬಸವರಾಜ್ ಅವರ ಪುತ್ರನಾಗಿದ್ದು ಬೇಡರ ಕಣ್ಣಪ್ಪ ವಸತಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ನಿನ್ನೆಯಿಂದಲೇ ನಾಪತ್ತೆಯಾಗಿದ್ದ ಪವನ್ಗಾಗಿ ಪಾಲಕರು ಹುಡುಕಾಟ ನಡೆಸಿದ್ದರು. ಹೊಂಡದ ಬಳಿ ಅವನ ಚಪ್ಪಲಿಗಳು ಪತ್ತೆಯಾಗಿದ್ದವು. ಇಂದು ಶವಪತ್ತೆಯಾಗಿದೆ. ಹೊಂಡಕ್ಕೆ ಕೈಕಾಲು ತೊಳೆಯಲು ಹೋದಾಗ ಜಾರಿ ಬಿದ್ದಿರಬಹುದು ಎನ್ನಲಾಗಿದೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.