ಟ್ಯೂಷನ್​ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಪಾಲಿಗೆ ಯಮನಾಗಿ ಬಂತು ಈ ಬೊಲೆರೋ

ಶಿವಮೊಗ್ಗ: ನಗರದ ಸವಳಂಗ ರಸ್ತೆಯ ಜೆಎನ್ಎನ್ ಇಂಜಿ‌ನಿಯರಿಂಗ್ ಕಾಲೇಜಿನ ಬಳಿ ಟ್ಯೂಷನ್ ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬಳು ಬೊಲೆರೋ ಡಿಕ್ಕಿಯಾಗಿ ಮೃತಪಟ್ಟಿದ್ದಾಳೆ.

ಚನ್ನಪ್ಪ ಲೇಔಟ್ ನ ನಿವಾಸಿ, ಪೇಸ್ ಪಿಯು ಕಾಲೇಜಿನ ಸುನೈನಾ (18) ಮೃತ ವಿದ್ಯಾರ್ಥಿನಿ. ಸುನೈನಾ ಟ್ಯೂಷನ್ ಮುಗಿಸಿ ಜೆಎನ್ಎನ್ಸಿ ಕಾಲೇಜು ಬಳಿಯ ತನ್ನ ಗೆಳತಿಯ ಮನೆಗೆ ಬುಕ್ ಕೊಟ್ಟು ಬರುವ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ.

ಸುನೈನಾ ಸವಳಂಗ ಕಡೆಯಿಂದ ಬರುತ್ತಿದ್ದ ವೇಳೆ ಬೊಲೆರೋ ಜೀಪ್​ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One Reply to “ಟ್ಯೂಷನ್​ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಪಾಲಿಗೆ ಯಮನಾಗಿ ಬಂತು ಈ ಬೊಲೆರೋ”

  1. we should use helmet , as per government rules person above 18 will get DL ,how second year PU person riding bike…its same in all places, government should introduce strict rules

Leave a Reply

Your email address will not be published. Required fields are marked *