ವಿಜಯನಗರ: ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಎಲ್ಲ ಮಕ್ಕಳಿಗೆ ಕರೊನಾ ಟೆನ್ಷನ್ ಒಂದೆಡೆಯಾದರೆ ಈಕೆಗೆ ಅದರ ಜೊತೆಗೆ ತಂದೆ ಸಾವಿನ ದುಃಖವೂ ಸೇರಿಕೊಂಡಿದೆ. ಅದಾಗ್ಯೂ ತಂದೆಯ ಅಗಲಿಕೆಯ ನೋವಿನಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮೂಲಕ ಈ ವಿದ್ಯಾರ್ಥಿನಿ ಗಮನ ಸೆಳೆದಿದ್ದಾಳೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹಿರೇಮಠ ವಿದ್ಯಾಪೀಠದ ಪದವಿಪೂರ್ವ ಕಾಲೇಜಿನಲ್ಲಿ ಚಂದನಾ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾಳೆ. ಈಕೆಯ ತಂದೆ ಸಣ್ಣ ಓಬಯ್ಯ (51) ಬುಧವಾರ ರಾತ್ರಿ ಬ್ಲ್ಯಾಕ್ ಫಂಗಸ್ನಿಂದಾಗಿ ಬುಧವಾರ ರಾತ್ರಿ ಬಳ್ಳಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಚಿಕ್ಕಮ್ಮ ಗಿರಿಜಾ ಹಾಗೂ ಚಿಕ್ಕಪ್ಪ ಅಂಜಿನಪ್ಪ ಅವರು ಚಂದನಾಳನ್ನು ಸಮಾಧಾನಪಡಿಸಿ, ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದ್ದರು.
ಕರೊನಾ ಬಳಿಕದ ಅಡ್ಡಪರಿಣಾಮಗಳಿಗೆ ಇದೇ ಕಾರಣ: ಇದರ ಬಳಕೆ ತಪ್ಪಿಸಲು ವೈದ್ಯರ ಸಲಹೆ
ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..