ರಾಮದುರ್ಗ: ಸದೃಢ ಯುವಕರಿಂದ ದೇಶ ಅಭಿವೃದ್ಧಿ

ರಾಮದುರ್ಗ: ಸದೃಢ ಭಾರತ ನಿರ್ಮಾಣಕ್ಕೆ ಆರೋಗ್ಯವಂತ ಮಕ್ಕಳ ಜನನ ಅವಶ್ಯಕವಾಗಿದೆ. ಈ ಕಾರಣದಿಂದ ಉಭಯ ಸರ್ಕಾರಗಳು ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.
ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಪೋಷಣ ಮಾಸ ಉದ್ಘಾಟನೆ ಹಾಗೂ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯ ರೇಣಪ್ಪ ಸೋಮಗೊಂಡ ಮಾತನಾಡಿ, ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ ಮಾಡಿದಲ್ಲಿ ಮಾತ್ರ ಆರೋಗ್ಯವಂತ ಮಗುವಿನ ಜನನ ಸಾಧ್ಯ ಎಂದರು.
ಜಿಪಂ ಸದಸ್ಯ ಮಾರುತಿ ತುಪ್ಪದ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮೌನೇಶ ಕಂಬಾರ, ತಾಪಂ ಸದಸ್ಯ ಶಿವಪ್ಪ ಮೇಟಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಕಾರಿ ಎಸ್.ಡಿ.ಐನಾಪುರ ಉಪನ್ಯಾಸ ನೀಡಿದರು. ತಾಪಂ ಸದಸ್ಯ ನಿಂಗಪ್ಪ ಭಾಗೋಜಿ, ದ್ಯಾವಪ್ಪ ಬೆಳವಡಿ, ತಾಪಂ ಇಒ ಗದಿಗೆಪ್ಪ ಕುರ್ತಕೋಟಿ, ಶಿಶು ಅಭಿವೃದ್ಧಿ ಅಕಾರಿ ಖಾದರಬಿ ಲಕ್ಷ್ಮೇಶ್ವರ, ಮೇಲ್ವಿಚಾರಕಿ ವೈಶಾಲಿ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *