More

    ಜನಮತ: ದೇಶದ್ರೋಹಿಗಳ ವಿರುದ್ಧ ಕಠಿಣ ಕಾನೂನು ಅಗತ್ಯ

    ಸ್ವಾತಂತ್ರ್ಯಾ ಪೂರ್ವದಲ್ಲಿ ಜಾರಿಗೆ ಬಂದ ದೇಶದ್ರೋಹದ ಕಾನೂನು ಸ್ವತಂತ್ರ ಭಾರತದಲ್ಲಿ ಅಗತ್ಯವಿಲ್ಲ ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಸರ್ಕಾರಗಳು ತಮ್ಮನ್ನು ಟೀಕಿಸುವವರ ವಿರುದ್ಧ ಈ ಕಾನೂನಿನ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎನ್ನುವ ಆರೋಪವನ್ನು ಇದರ ರದ್ದತಿಗೆ ಆಧಾರವಾಗಿ ಮಾಡಲಾಗುತ್ತಿದೆ. ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ಭಾರತದ ಮೇಲೆ ಇದುವರೆಗೆ ಬಂದ ಗಂಡಾಂತರಗಳಲ್ಲಿ ಹೆಚ್ಚಿನದಕ್ಕೆ ಕಾರಣ ನಮ್ಮವರೇ ಆಗಿದ್ದಾರೆ. ನಮ್ಮ ಉದಾರ ನ್ಯಾಯವ್ಯವಸ್ಥೆಯ ಕಾರಣದಿಂದಾಗಿಯೇ ಇಂದು ಅಪರಾಧಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ.

    ಸ್ವಾತಂತ್ರ್ಯ ಮತ್ತು ಸ್ವಚ್ಛಂದತೆ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ನಮ್ಮ ಸಮಾಜದ ಒಂದು ವರ್ಗ ವಿಲವಾಗಿದೆ. ಸಂವಿಧಾನ, ಸರ್ಕಾರದ ಮುಖ್ಯಸ್ಥರು, ರಾಷ್ಟ್ರಧ್ವಜ, ಸೇನೆಯ ಕುರಿತಾಗಿ ಕೀಳಾಗಿ ಮಾತನಾಡುವುದು, ಘೋಷಣೆ ಕೂಗುವುದು ಸ್ವಾತಂತ್ರ್ಯ ಪರಿಧಿಯಲ್ಲಿ ಬರುವುದಿಲ್ಲ. ಎಲ್ಲಿಯವರೆಗೆ ದೇಶವಿರೋಧಿ ೂಷಣೆ ಕೂಗುವವರ ಎದುರು ನಮ್ಮ ಕಾನೂನು ಅಸಹಾಯವಾಗಿ ಬಿಡುತ್ತದೆಯೋ ಅಲ್ಲಿಯವರೆಗೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ವಿಶ್ವವಿದ್ಯಾಲಯಗಳ ಕೆಲವು ಶಿಕರು, ಶಿಕ್ಷಣ ಕ್ಷೇತ್ರದ ಪ್ರತಿಷ್ಠಿತರು, ಸೋಗಲಾಡಿ ಬುದ್ಧೀಜಿವಿಗಳು ಮುಕ್ತ ಸ್ವಾತಂತ್ರ$್ಯದ ನೆಪದಲ್ಲಿ ನಕ್ಸಲ್​ ಸಿದ್ಧಾಂತ, ಧಾರ್ಮಿಕ ಸಾಮರಸ್ಯ ಕೆಡಿಸುವ, ರಾಷ್ಟ್ರದ ಏಕತೆಗೆ ಧಕ್ಕೆ ತರುವಂಥ ಶಕ್ತಿಗಳ, ಸಂಸ್ಥೆಗಳ ಪೋಷಕರಾಗಿ ಸಂರಣೆ ನೀಡುವ ಅನೇಕ ಟನೆಗಳು ದೇಶದಾದ್ಯಂತ ನಡೆಯುತ್ತಿವೆ.

    ಎನ್​ಜಿಒಗಳನ್ನು ಸ್ಥಾಪಿಸಿಕೊಂಡು ಸಮಾಜಸೇವಕರಂತೆ ಸೋಗು ಹಾಕಿಕೊಂಡು ಪಾಕಿಸ್ತಾನ ಸಹಿತ ವಿದೇಶಗಳಿಂದ ಧನಸಹಾಯ ಪಡೆಯುತ್ತ ದೇಶದ ವಿರುದ್ಧ ಚಟುವಟಿಕೆ ನಡೆಸುವ ಅನೇಕರು ಸಂವಿಧಾನ ನೀಡಿದ ಹಕ್ಕುಗಳ ದುರ್ಲಾಭ ಪಡೆಯುತ್ತಿದ್ದಾರೆ. ಆತಂಕವಾದಿಗಳನ್ನು ನಿರ್ಮಿಸುವ, ಪೋಷಿಸುವ ಪಾಕಿಸ್ತಾನದ ವಕಾಲತ್ತು ವಹಿಸುವ, ಕ್ರಿಕೆಟ್​ ಪಂದ್ಯಾಟದಲ್ಲಿ ಆ ದೇಶ ಗೆದ್ದಾಗ ಸಂಭ್ರಮಿಸುವ, ದೇಶದ ಸುರತೆಗೆ ಸವಾಲಾಗಿರುವ, ಸುರಾ ಪಡೆಗಳ ಜವಾನರನ್ನು ಅಮಾನುಷವಾಗಿ ಹತ್ಯೆಗೈಯ್ಯುವ ನಕ್ಸಲ್​ವಾದಿಗಳ, ಉಗ್ರವಾದಿಗಳ ಕುರಿತು ಸಹಾನುಭೂತಿ ಹೊಂದಿದವರ ವಿರುದ್ಧ ದೇಶದ್ರೋಹದ ಕಾನೂನು ಬಳಕೆಯಾಗಬೇಕು. ರಾಷ್ಟ್ರವಿರೋಧಿ ಶಕ್ತಿಗಳು ಇಂದು ಎಲ್ಲೆಡೆ ಸಕ್ರಿಯವಾಗುತ್ತಿದ್ದಾರೆ. ಅವರನ್ನು ಶಿಸಲು ಸುದೀರ್ ಪ್ರಕ್ರಿಯೆ ಅನುಸರಿಸಬೇಕಾದ ತೊಡಕನ್ನು ಕಾನೂನು ಪಾಲಕ ಏಜೆನ್ಸಿಗಳು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ್ರೋಹಿಗಳನ್ನು ಶಿಸಲು ಕಠಿಣ ಕಾನೂನಿನ ಅಗತ್ಯವಿದೆ. ಅದಕ್ಕೆ ಬದಲಾಗಿ ಈಗಿರುವ ಕಾನೂನನ್ನೇ ರದ್ದು ಮಾಡುವ ಘೋಷಣೆ ಮಾಡುತ್ತಿರುವುದು ವಿಷಾದದ ಸಂಗತಿ.

    > ಚಂದ್ರಶೇಖರ ನಾವಡ ಮಾಜಿ ಸೈನಿಕರು, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts