More

    ಲಾಕ್‌ಡೌನ್‌ನಿಂದ ಮನೆಯಲ್ಲಿ ಬಂದಿಯಾಗಿ ಬೇಸರವೇ? ಅದನ್ನು ನೀಗಿಸಲು ಹೀಗೆ ಮಾಡಿ

    ಬೆಂಗಳೂರು: ಕೋವಿಡ್-19 ಸೋಂಕು ಹಬ್ಬುವಿಕೆಯನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಮನೆಯಿಂದ ಹೊರಬರದೆ, ಮನೆಯಲ್ಲೇ ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ. ಯಾವುದೇ ಅಗತ್ಯವಸ್ತು ಖರೀದಿಸಲು ಹೊರಹೋದರೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಅಂಗಡಿಗಳ ಮುಂದೆ ಒಬ್ಬರಿಂದ ಒಬ್ಬರಿಗೆ ಕನಿಷ್ಠ 3 ಅಡಿ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗುತ್ತಿದೆ. ಇದರಿಂದಾಗಿ ಬೇಸರ, ಖಿನ್ನತೆ, ಮಾನಸಿಕಕ್ಲೇಶ ಸೇರಿ ಒಟ್ಟೊಟ್ಟಿಗೆ ಹಲವು ರೀತಿಯ ಒತ್ತಡಗಳಿಗೆ ನಾವೆಲ್ಲರೂ ಸಿಲುಕಿಕೊಳ್ಳುತ್ತಿದ್ದೇವೆ. ಈ ಬೇಸರ, ಖಿನ್ನತೆ, ಮಾನಸಿಕಕ್ಲೇಶ ನಿವಾರಿಸಿಕೊಳ್ಳಲು ಇಲ್ಲೊಂದು ಉಪಾಯವಿದೆ. ಅದೇನು?

    ಅದೇನೆಂದರೆ, ಹೇಗಿದ್ದರೂ ಮನೆಯಲ್ಲೇ ಇದ್ದೀರ ಅಲ್ಲವೇ? ಅಡುಗೆಮನೆಗೆ ಹೋಗಿ, ಅಡುಗೆ ಮಾಡಲು ಪತ್ನಿಯೊಂದಿಗೆ ಕೈಜೋಡಿಸಿ, ಮನೆ ಸ್ವಚ್ಛಗೊಳಿಸುವ ಕೆಲಸ ಮಾಡಿ. ಆಗ ಮೈಗೆ ವ್ಯಾಯಾಮವೂ ಆಗುವುದಲ್ಲದೆ, ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಏಕೆ ಹೀಗಾಗುತ್ತದೆ?

    ಇದು ನಮ್ಮೆಲ್ಲರ ಮಿದುಳಿನಲ್ಲಿರುವ ಅಮಿಗ್ಡಲ ಎಂಬ ಪ್ರದೇಶ. ಮಿದುಳಿನ ಈ ಭಾಗ ಬೇಸರ, ಖಿನ್ನತೆ, ಮಾನಸಿಕಕ್ಲೇಶ ಸೇರಿ ನಾನಾ ಭಾವನೆಗಳನ್ನು ಸೃಜಿಸಲು ನೆರವಾಗುತ್ತದೆ. ಏನೂ ಕೆಲಸ ಮಾಡದೆ ಸುಮ್ಮನೆ ಕುಳಿತಿದಿದ್ದಾಗ ಈ ಭಾಗ ಕ್ರಿಯಾಶೀಲತೆ ಕಳೆದುಕೊಂಡು ಬೇಸರ, ಖಿನ್ನತೆಯನ್ನು ಉಂಟು ಮಾಡುತ್ತದೆ. ಅದೇ ಅಡುಗೆ ಮಾಡಲು ಪತ್ನಿಗೆ ಸಹಾಯ ಮಾಡಿದಾಗ, ಮನೆಯ ಸ್ವಚ್ಛತಾ ಕಾರ್ಯ ಮಾಡಿದಾಗ ಈ ಭಾಗ ತಕ್ಷಣವೇ ಕ್ರಿಯಾಶೀಲಗೊಂಡು ಬೇಸರ, ಖಿನ್ನತೆ, ಮಾನಸಿಕಕ್ಲೇಶವನ್ನೆಲ್ಲ ಕ್ಷಣಾರ್ಧದಲ್ಲಿ ದೂರ ಮಾಡುತ್ತದೆ. ಅಷ್ಟೇ ಅಲ್ಲ, ಖಿನ್ನತೆಯಿಂದ ಉಂಟಾಗಬಹುದಾದ ಉಸಿರಾಟದ ಸಮಸ್ಯೆ, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts