More

  ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿದೆ ಸಾಮರ್ಥ್ಯ: ಮೊಗೇರಡ್ಕ ಶಾಲೆಯಲ್ಲಿ ದ.ಕ. ಎಸ್‌ಪಿ ಸಿ.ಬಿ.ರಿಷ್ಯಂತ್

  ಕಡಬ: ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಜೀವನದ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ಕಂಡು ಅನುಭವಿಸಿರುತ್ತಾರೆ. ಆದ್ದರಿಂದ ಭವಿಷ್ಯದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಹೆಚ್ಚು ಸಮರ್ಥರಾಗಿರುತ್ತಾರೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.

  ಕಡಬ ತಾಲೂಕು ಕೊಂಬಾರು ಗ್ರಾಮದ ಮೊಗೇರಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಕೊಂಬಾರು ಕುಮಾರಪುರಕಟ್ಟೆ ಗಂಗಾ ಪ್ರತಿಷ್ಠಾನ ಆಶ್ರಯದಲ್ಲಿ ದಾನಿಗಳು ಶಾಲೆಗೆ ನೀಡಿದ ವಿಜ್ಞಾನ ಪ್ರಯೋಗಾಲಯ, ಗಣಕ ಯಂತ್ರ ಹಾಗೂ ಶಾಲಾ ಸಭಾಭವನದ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

  ಕುಮಾರಪುರಕಟ್ಟೆ ಗಂಗಾ ಪ್ರತಿಷ್ಠಾನದ ಪ್ರವರ್ತಕ, ಹೈಕೋರ್ಟ್ ವಕೀಲ ಪ್ರವೀಣ್‌ಕುಮಾರ್ ಕೆ.ಎನ್. ಮಾತನಾಡಿದರು. ಹಿರಿಯ ವಕೀಲ ವೈ.ಸದಾನಂದ ಪಕ್ಕಳ ಸಭಾಭವನ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು ಅಧ್ಯಕ್ಷತೆ ವಹಿಸಿದ್ದರು. ಕೊಂಬಾರು ಗ್ರಾಪಂ ಅಧ್ಯಕ್ಷ ಮಧುಸೂದನ್ ಒಡೋಳಿ, ಲೋಕೋಪಯೋಗಿ ಇಲಾಖೆ ಕುಕ್ಕೆ ಸುಬ್ರಹ್ಮಣ್ಯದ ಪ್ರಭಾರ ಎಇಇ ಪ್ರಮೋದ್‌ಕುಮಾರ್ ಕೆ.ಕೆ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನೀಲಪ್ಪ ಗೌಡ ಎಂ., ಮುಖ್ಯಶಿಕ್ಷಕಿ ಜಯಂತಿ ಪಿ. ಮಾತನಾಡಿದರು. ವಿಜ್ಞಾನ ಪ್ರಯೋಗಾಲಯಕ್ಕೆ ದೇಣಿಗೆ ನೀಡಿದ ಡಾ.ಅನನ್ಯಾ ಪಿ.ಕೆ. ಮತ್ತು ಸಿಂಚನಾ ಪಿ.ಕೆ. ಉಪಸ್ಥಿತರಿದ್ದರು.

  ಶಿಕ್ಷಕಿಯರಾದ ಭಾರತಿ, ಲಾವಣ್ಯ ಹಾಗೂ ಶರ್ಮಿಳಾ ಸನ್ಮಾನಪತ್ರ ವಾಚಿಸಿದರು. ಶಿಕ್ಷಕಿ ಪ್ರಮೀಳಾ ಸ್ವಾಗತಿಸಿದರು. ಗೌರವ ಶಿಕ್ಷಕಿ ವಿನುತಾ ವಂದಿಸಿದರು. ಶಶಿಧರ ಬೊಟ್ಟಡ್ಕ ಹಾಗೂ ಕಮಲಾಕ್ಷ ಬೊಟ್ಟಡ್ಕ ನಿರೂಪಿಸಿದರು.

  ವಿದ್ಯಾರ್ಥಿಗಳಿಗೆ ಗೌರವ, ವೈದ್ಯಕೀಯ ಶಿಬಿರ

  ಪ್ರತಿಭಾವಂತ ವಿದ್ಯಾರ್ಥಿಗಳಾದ ಸೇವಿಕಾ ಡಿ.ಕೆ., ಆರ್.ಕೆ.ತೃಪ್ತಿ, ದೀಪಿಕಾ ಕೆ. ಹಾಗೂ ಯಶಸ್ವಿ ವಿ. ಅವರನ್ನು ಗಂಗಾ ಪ್ರತಿಷ್ಠಾನದ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಎಸ್‌ಪಿ ರಿಷ್ಯಂತ್, ವಕೀಲ ವೈ.ಸದಾನಂದ ಪಕ್ಕಳ ಮತ್ತು ನಳಿನಿ ಪಕ್ಕಳ ದಂಪತಿ, ಮುಖ್ಯಶಿಕ್ಷಕಿ ಜಯಂತಿ ಪಿ., ವಿಜ್ಞಾನ ಶಿಕ್ಷಕಿ ಪ್ರಮೀಳಾ ಅವರನ್ನು ಸನ್ಮಾನಿಸಲಾಯಿತು. ಕೊಂಬಾರು-ಶಿರಿಬಾಗಿಲು ಗ್ರಾಮ ಅರಣ್ಯ ಸಮಿತಿ ವತಿಯಿಂದ ಕೊಡುಗೆಯಾಗಿ ನೀಡಿದ ಲ್ಯಾಪ್‌ಟಾಪ್ ಅನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಕೊಂಬಾರು ಗ್ರಾಪಂ ಹಾಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

  See also  ಎಲ್ಲ ಜಿಲ್ಲೆಯಲ್ಲೂ ವೀರಶೈವ ಲಿಂಗಾಯತ ಭವನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts