ಮಂಗಳೂರು: ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ಜಾಗೃತಿ ಮೂಡಿಸುವ ಉದ್ದೇಶದಿಂದ ಪೊದಾರ್ ಇಂಟರ್ ನ್ಯಾಶನಲ್ ಶಾಲೆಯ ವಿದ್ಯಾರ್ಥಿಗಳಿಂದ ಬೋಂದೆಲ್ ಪರಿಸರದಲ್ಲಿ ಬೀದಿ ನಾಟಕ ಪ್ರದರ್ಶನಗೊಂಡಿತು.
ಸಂವಿಧಾನದ ಆಶಯದಂತೆ ರಚನೆಯಾಗಿರುವ ರಸ್ತೆ ನಿಯಮಗಳು, ಸಾರ್ವಜನಿಕರು ಪಾಲಿಸಬೇಕಾದ ಸಂಚಾರಿ ನಿಯಮ, ರಸ್ತೆ ಅಪಘಾತಗಳ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಶಿಕ್ಷಕಿ ವಂದನಾ ಜಾಧವ್, ಸಂಸ್ಥೆಯ ಆಡಳಿತಾಧಿಕಾರಿ ಕಿಶನ್ ಕುಮಾರ್ ಸಹಿತ ಹಲವರು ಇದ್ದರು.