ಬೀಡಾಡಿ ಜಾನುವಾರುಗಳ ಸೆರೆ ಕಾರ್ಯಾಚರಣೆ

ಚಿಕ್ಕಮಗಳೂರು: ನಗರ ವ್ಯಾಪ್ತಿಯ ಹಾದಿ-ಬೀದಿಗಳಲ್ಲಿರುವ ಬಿಡಾಡಿ ಜಾನುವಾರುಗಳಿಂದ ರಸ್ತೆ ಅಪಘಾತಗಳು ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೀಡಾಡಿ ಜಾನುವಾರುಗಳನ್ನು ಸೆರೆಹಿಡಿದು ಸುರಕ್ಷಿತವಾಗಿ ಗೋಶಾಲೆಗೆ ಕಳುಹಿಸಲಾಯಿತು.

ಈ ವೇಳೆ ಮಾತನಾಡಿದ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ನಗರಸಭೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಮುಂಜಾನೆಯಿAದ ಅಲ್ಲಲ್ಲಿ ಓಡಾಡುತ್ತಿರುವ ಜಾನುವಾರುಗಳನ್ನು ಸುರಕ್ಷಿತ ಸೆರೆಹಿಡಿದು ಕಡೂರು ಸಮೀಪದ ಗೋಶಾಲೆಗೆ ಬಿಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿನಿತ್ಯ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಬಿಡಾಡಿ ದನಗಳಿಂದ ತೊಂದರೆಯಾಗುತ್ತಿತ್ತು. ಸಾರ್ವಜನಿಕರು ದನಗಳನ್ನು ಸ್ವಂತ ಜಾಗದಲ್ಲಿ ಇರಿಸಲು ಅನೇಕ ಬಾರಿ ಪ್ರಕಟಣೆ ಹೊರಡಿಸಿದರೂ ಯಾವುದೇ ಕಾಳಜಿ ತೋರದ ಹಿನ್ನೆಲೆಯಲ್ಲಿ ಸೆರೆಹಿಡಿಯುವ ಕಾರ್ಯಕ್ಕೆ ಮುಂದಾಗಿz್ದೆÃವೆ ಎಂದು ಹೇಳಿದರು.
ಬಿಡಾಡಿ ದನಗಳ ಕಡಿವಾಣಕ್ಕೆ ಗೋ ಪಾಲಕರಿಗೆ ಅನೇಕ ಬಾರಿ ವಿನಂತಿಸಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಗೋ ಪಾಲಕರು ದನಗಳನ್ನು ಕಟ್ಟಿಹಾಕದಿರುವ ಪರಿಣಾಮ ರಸ್ತೆಗಳಲ್ಲಿ ಅಪಘಾತ ಹೆಚ್ಚಾ ಗಿ ಪ್ರಾಣಹಾನಿ ಸಂಭವಿಸುತ್ತಿದೆ. ಹೀಗಾಗಿ ದನಗಳನ್ನು ಶೀಘ್ರದಲ್ಲೇ ಕರೆದೊಯ್ಯದಿದ್ದರೆ ಗೋ ಶಾಲೆಗೆ ಕಳುಹಿಸುತ್ತೇವೆ ಎಂದರು.
ಸ್ಥಳೀಯ ನಿವಾಸಿಗಳು ಮನೆಯ ಮುಂಭಾಗದಲ್ಲಿ ದನಗಳಿಗೆ ಆಹಾರ ಒದಗಿಸುವ ಕಾರಣ ಹಸುಗಳ ಗುಂಪುಗುAಪಾಗಿ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ನಿವಾಸಿಗಳು ಜಾನುವಾರುಗಳಿಗೆ ಆಹಾರ ನೀಡಬಾರದು. ಹದಿನೈದು ದಿನಗಳ ಹಿಂದೆಯೂ ನಗರಸಭೆಯಿಂದ ಬೀಡಾಡಿ ದನಗಳ ಸೆರೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೂ ಜನ ಜಾನುವಾರುಗಳನ್ನು ರಸ್ತೆಗೆ ಬಿಡುವುದನ್ನು ಮುಂದುವರಿಸಿದ್ದಾರೆ. ಹೀಗಾಗಿ ಮತ್ತೆ ಕಾರ್ಯಾಚರಣೆ ಆರಂಭಿಸಿz್ದÉÃವೆ ಎಂದರು.
ಈ ಸಂದರ್ಭದಲ್ಲಿ ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರೆ ತೇಜಸ್ವಿನಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಈಶ್ವರಪ್ಪ, ರಂಗಪ್ಪ, ನಾಗಪ್ಪ, ಶಶಿರಾಜ್, ವೆಂಕಟೇಶ್, ಪ್ರಾಣಿದಯಾ ಸಂಘದ ಅಧ್ಯಕ್ಷೆ ನಳೀನಾ ಡೀಸಾ, ಸ್ಥಳೀಯರಾದ ಕಬೀರ್‌ಖಾನ್ ಮತ್ತಿತರರಿದ್ದರು.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ