More

    ಎಗ್ಗಿಲ್ಲದೆ ಸಾಗಿದೆ ಕಲ್ಲು ಗಣಿಗಾರಿಕೆ

    ಗುಂಡ್ಲುಪೇಟೆ: ತಾಲೂಕಿನ ನಾನಾ ಗಣಿಗಳಿಂದ ಕೇರಳಕ್ಕೆ ಭಾರಿ ಪ್ರಮಾಣದಲ್ಲಿ ಕಲ್ಲು ಸಾಗಣೆ ಮಾಡಲಾಗುತ್ತಿದ್ದು, ಇದು ಮುಂದುವರಿದರೆ ಕೆಲವೇ ದಿನಗಳಲ್ಲಿ ತಾಲೂಕಿನ ಖನಿಜ ಸಂಪತ್ತು ಬರಿದಾಗುವ ಆತಂಕ ಎದುರಾಗಿದೆ.

    ನೆರೆರಾಜ್ಯದಲ್ಲಿ ನೋಂದಣಿಯಾದ ವಾಹನಗಳು ರಾಜ್ಯದ ಪರ್ಮಿಟ್ ಪಡೆದುಕೊಳ್ಳದೆ ಪ್ರತಿ ನಿತ್ಯವೂ ಅಧಿಕ ಪ್ರಮಾಣದಲ್ಲಿ ಕಲ್ಲು ತುಂಬಿಕೊಂಡು ಸಂಚರಿಸುತ್ತಿದ್ದರೂ ಟಿಪ್ಪರ್ ಮಾಲೀಕರ ವಿರುದ್ದ ಯಾವುದೇ ಕ್ರಮಕೈಗೊಳ್ಳದ ಗಣಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಬೇಗೂರು ಹೋಬಳಿಯಲ್ಲಿ ಹೆಚ್ಚಿನ ಗಣಿಗಳಿದ್ದರೆ ಪಟ್ಟಣದ ಸುತ್ತಮುತ್ತಲಿನ ಮಡಹಳ್ಳಿ, ಕೂತನೂರು, ಹಸಗೂಲಿ, ತೆರಕಣಾಂಬಿ ಸೇರಿದಂತೆ ಸುಮಾರು 45ಕ್ಕೂ ಹೆಚ್ಚಿನ ಕಲ್ಲು ಗಣಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಹೊರತೆಗೆದ ಕಲ್ಲುಗಳಿಂದ ಕ್ರಷರುಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಜಲ್ಲಿ, ಕಲ್ಲು, ಬೋಲ್ಡರ್ಸ್, ಎಂ-ಸ್ಯಾಂಡ್ ಮುಂತಾದ ಉತ್ಪನ್ನಗಳನ್ನು ತಯಾರಿಸಿ ನೆರೆಯ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಗೂ ಇಲ್ಲಿಂದಲೇ ಸರಬರಾಜು ಮಾಡಲಾಗುತ್ತಿದೆ.

    ಆದರೆ ಇತ್ತೀಚೆಗೆ ನೆರೆಯ ಕೇರಳಕ್ಕೆ ಭಾರಿ ಪ್ರಮಾಣದ ಖನಿಜ ಉತ್ಪನ್ನಗಳನ್ನು ಸಾಗಣೆ ಮಾಡಲಾಗುತ್ತಿದೆ. ಕೇರಳ ಸರ್ಕಾರ ಸುಲಭವಾಗಿ ಗಣಿಗಾರಿಕೆಗೆ ಅನುಮತಿ ನೀಡುತ್ತಿಲ್ಲ. ಇದರಿಂದ ತಾಲೂಕಿನ ಖನಿಜ ಸಂಪತ್ತನ್ನೇ ಸಾಗಿಸಲಾಗುತ್ತಿದೆ. ತಾಲೂಕಿನ ನಾನಾ ಕ್ರಷರುಗಳಿಂದ ಪ್ರತಿ ದಿನವೂ 30ಕ್ಕೂ ಹೆಚ್ಚಿನ ಕೇರಳ ರಾಜ್ಯದ ನೋಂದಣಿ ಹೊಂದಿರುವ ಟಿಪ್ಪರುಗಳಲ್ಲಿ ಬೋಲ್ಡರ್ಸ್, ಜಲ್ಲಿ, ಕಲ್ಲು ಹಾಗೂ ಎಂ-ಸ್ಯಾಂಡ್‌ಗಳನ್ನು ಮದ್ದೂರು ಹಾಗೂ ಮೂಲೆಹೊಳೆ ಚೆಕ್‌ಪೋಸ್ಟ್ ಮೂಲಕ ಕೇರಳಕ್ಕೆ ಸಾಗಿಸಲಾಗುತ್ತಿದೆ.

    ಬರಿದಾಗುವ ಭೀತಿ:ಹಿಂದೆ ಕದ್ದು ಮುಚ್ಚಿ ಸಾಗಣೆ ಮಾಡುತ್ತಿದ್ದ ಟಿಪ್ಪರುಗಳು ಈಗ ಹಾಡಹಗಲೇ ರಾಜಾರೋಷವಾಗಿ ಸಂಚರಿಸುತ್ತಿವೆ. ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಎಲ್ಲಾ ಅಧಿಕಾರಿಗಳೂ ಚುನಾವಣಾ ಕರ್ತವ್ಯದಲ್ಲಿ ಮಗ್ನರಾಗಿದ್ದರಿಂದ ಕಲ್ಲುಸಾಗಣೆ ಭರಾಟೆ ಜೋರಾಗಿದೆ. 20 ಚಕ್ರದ 40 ಟನ್ ಸಾಮರ್ಥ್ಯದ ಟಿಪ್ಪರುಗಳಲ್ಲಿ 60 ಟನ್, 12 ಚಕ್ರದ 20 ಟನ್ ಸಾಮರ್ಥ್ಯದ ವಾಹನಗಳಲ್ಲಿ 35ರಿಂದ 40 ಟನ್ ಕಲ್ಲು ಸಾಗಿಸುತ್ತಿರುವ ಪರಿಣಾಮ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆಗಳು ಹಾಳಾಗುತ್ತಿವೆ. ನೂರಾರು ವರ್ಷ ಬಾಳಿಕೆ ಬರಬೇಕಾದ ಸೇತುವೆಗಳ ಆಯುಷ್ಯ ಕಡಿಮೆಯಾಗುತ್ತಿದೆ. ಅಲ್ಲದೆ ಇನ್ನೂ ಕೆಲವುಕಾಲ ಇದೇ ಪ್ರಮಾಣದಲ್ಲಿ ಕಲ್ಲು ಸಾಗಿಸಿದರೆ ತಾಲೂಕಿನ ಗಣಿಗಳು ಮಾಯವಾಗಲಿವೆ.

    See also  ಬಿಜೆಪಿ ಮಾಡಿದ ಸಾಲವನ್ನು ಕಾಂಗ್ರೆಸ್​ ತೀರಿಸಬೇಕಾಗಿದೆ: ಆಯನೂರು ಮಂಜುನಾಥ

    ಕಣ್ಣುಮುಚ್ಚಿಕುಳಿತ ಸಾರಿಗೆ ಇಲಾಖೆ:
    ರಾಜ್ಯದೊಳಗೆ ಪ್ರವೇಶಿಸುವ ನೆರೆರಾಜ್ಯದ ನೋಂದಣಿ ವಾಹನಗಳು ಇಲ್ಲಿ ತೆರಿಗೆ ಪಾವತಿಸಿ ಪರ್ಮಿಟ್ ಪಡೆದುಕೊಳ್ಳಬೇಕಾಗಿದೆ. ಆದರೆ ಪ್ರತಿ ದಿನವೂ ತಾಲೂಕಿನ ಕ್ರಷರುಗಳಿಂದ ಕಲ್ಲು ಸಾಗಿಸುತ್ತಿರುವ ಕೇರಳ ನೋಂದಣಿ ಟಿಪ್ಪರುಗಳು ಮಾತ್ರ ಇಲ್ಲಿನ ಪರ್ಮಿಟ್ ಪಡೆದುಕೊಳ್ಳದೆ ಸಂಚರಿಸುತ್ತಿವೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇವುಗಳತ್ತ ತಿರುಗಿಯೂ ನೋಡುತ್ತಿಲ್ಲ.

    ಹೋಂ ಗಾರ್ಡ್‌ಗಳಿಂದ ತಪಾಸಣೆ:
    ಗಣಿ ಉತ್ಪನ್ನಗಳ ಸಾಗಣೆ ಬಗ್ಗೆ ತಪಾಸಣೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಅರಣ್ಯ ಇಲಾಖೆಯ ಮದ್ದೂರು ಚೆಕ್‌ಪೋಸ್ಟ್ ತೆರೆದಿದೆ. ಸಿಬ್ಬಂದಿಯ ಕೊರತೆಯಿಂದ ಮುಚ್ಚಿದ್ದ ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳ ಬದಲು ಕೇವಲ ಒಬ್ಬರು ಹೋಂ ಗಾರ್ಡ್ ನಿಯೋಜಿಸಿದೆ. ಆದರೆ ಈ ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಸಾಗುವ ಟಿಪ್ಪರುಗಳು ಹೋಂ ಗಾರ್ಡ್‌ಗಳಿಗೆ ಕೇವಲ ದಾಖಲೆಗಳ ಜೆರಾಕ್ಸ್ ಮಾತ್ರ ನೀಡಿ ಹೋಗುತ್ತಿವೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts