ಕೊಲ್ಲೂರು ಬಳಿ ಅವಲಕ್ಕಿಪಾರೆಯಲ್ಲಿ ಶಿಲಾಯುಗದ ಚಿತ್ರಗಳು ಪತ್ತೆ

ಉಡುಪಿ: ಕೊಲ್ಲೂರಿನ ಸಮೀಪ ಅವಲಕ್ಕಿಪಾರೆ ಎಂಬ ವನ್ಯಜೀವಿ ಸಂರಕ್ಷಿತಾರಣ್ಯದ ಸ್ಥಳದಲ್ಲಿ ಸೂಕ್ಷ್ಮ ಶಿಲಾಯುಗ ಕಾಲದ ಮಾನವ ಬೇಟೆಯಾಡುವ 20 ಚಿತ್ರಗಳು ಪತ್ತೆಯಾಗಿವೆ ಎಂದು ಸಂಶೋಧಕ ಪ್ರೊ.ಟಿ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಂದಿ ಬೇಟೆ, ಹಕ್ಕಿ ಬೇಟೆ, ಕಾಡುಗೂಳಿಗಳ ಬೇಟೆ, ಜಿಂಕೆ ಬೇಟೆಯ ವಿವಿಧ ಆದಿಮ ಚಿತ್ರಗಳು ಕಂಡುಬಂದಿವೆ. ಬೇಟೆಯ ವಿವಿಧ ಭಾವ-ಭಂಗಿಗಳಲ್ಲಿ ನಿಂತ ಮಾನವರ ಹಾಗೂ ಪ್ರಾಣಿಗಳ ಚಿತ್ರಗಳು ಆಕರ್ಷಕವಾಗಿವೆ. ಚಿತ್ರಗಳಲ್ಲಿ ಪ್ರಧಾನವಾದ ಚಿತ್ರ ಓರ್ವ ಮಹಿಳೆಯದ್ದೆಂದು ಗುರುತಿಸಲಾಗಿದ್ದು, ಆಕೆಯ ಚಿತ್ರವನ್ನು ಆದಿಮ ಕಾಲದ ಜನರು ಆರಾಧಿಸುತ್ತಿದ್ದರೆಂದು ನಂಬಲಾಗಿದೆ.

ಚಿತ್ರಗಳನ್ನು ಕೆಂಪು ಮುರಕಲ್ಲಿನ ಮೇಲೆ ಕುಟ್ಟಿ-ಉಜ್ಜಿ ನಿರ್ಮಿಸಿರುವುದು ಕಂಡುಬಂದಿದೆ.