Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ ಇದೆಯಾ? ಹೊಟ್ಟೆ ಹೊತ್ತುಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲವೇ? ಪ್ರತಿದಿನ ದಪ್ಪ ಹೊಟ್ಟೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೀರಾ? ಹಾಗಾದರೆ, ನಿಮ್ಮ ಹೊಟ್ಟೆ ಕರಗಲು ಈ ಆಹಾರಗಳನ್ನು ತಪ್ಪದೇ ತಿನ್ನಿ. ಇವುಗಳನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಸುಲಭವಾಗಿ ಕಡಿಮೆಯಾಗುತ್ತದೆ. ಯಾವುವು ಆ ಆಹಾರಗಳು ಎಂಬುದನ್ನು ನಾವೀಗ ತಿಳಿಯೋಣ.
ಬೀಟ್‌ರೂಟ್‌ನಲ್ಲಿ ನಾರಿನಂಶ ಹೆಚ್ಚಿದ್ದು, ಇದರ ಸೇವನೆಯಿಂದ ಉದರ ಸಮಸ್ಯೆ ಮಾತ್ರವಲ್ಲದೆ, ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸಿದರೆ ಹೊಟ್ಟೆಯಲ್ಲಿರುವ ತ್ಯಾಜ್ಯ ಸುಲಭವಾಗಿ ಹೊರಬರುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಬೀಟ್ರೂಟ್ಗೆ ಆದ್ಯತೆ ಇರಲಿ. ಅಂದಹಾಗೆ ಬೀಟ್ರೂಟ್ನಿಂದ ವಿವಿಧ ಪಾಕವಿಧಾನಗಳನ್ನು ಮಾಡಬಹುದು.
ಬೀಟ್ ಮಾತ್ರವಲ್ಲದೆ, ಹೊಟ್ಟೆಯ ಕೊಬ್ಬನ್ನು ಕರಗಿಸಲು ಪೇರಲ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಸುಡಲು ಪೇರಲ ಹಣ್ಣು ಸಹಾಯ ಮಾಡುತ್ತವೆ.
ಇನ್ನು ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಇವುಗಳನ್ನು ಸೇವಿಸಿದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಇದರಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು. ಅಲ್ಲದೆ ಹೊಟ್ಟೆಯ ಸುತ್ತಲಿನ ಕೊಬ್ಬು ಸುಲಭವಾಗಿ ಕರಗುತ್ತದೆ.
ಓಟ್ಸ್ ಕೂಡ ಹೊಟ್ಟೆ ಕರಗಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಓಟ್ಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಹಸಿವು ಉಂಟಾಗುವುದಿಲ್ಲ. ಇದರಿಂದ ಹೊಟ್ಟೆಯ ಕೊಬ್ಬು ಕರಗಿ ಹೋಗುತ್ತದೆ. ತೂಕ ಕೂಡ ನಿಯಂತ್ರಣದಲ್ಲಿರುತ್ತದೆ.
ಮೊಸರು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದು ಪ್ರೋಟೀನ್ ಸಹ ಹೊಂದಿದ್ದು, ಸ್ನಾಯುಗಳು ಆರೋಗ್ಯಕರವಾಗಿರುತ್ತವೆ. ಹೊಟ್ಟೆಯ ಕೊಬ್ಬು ಕೂಡ ಸುಲಭವಾಗಿ ಕರಗುತ್ತದೆ. ಹಸಿರು ತರಕಾರಿಗಳನ್ನು ತಪ್ಪಿಸಲೇಬೇಡಿ. ಇವುಗಳಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೊಬ್ಬು ಸುಲಭವಾಗಿ ಕರಗುತ್ತದೆ.
ಇದಿಷ್ಟೇ ಸಾಲದು. ವ್ಯಾಯಾಮ ಕೂಡ ಮುಖ್ಯ. ಅಲ್ಲದೆ, ಪ್ರತಿದಿನ ಅರ್ಧ ಗಂಟೆ ನಡೆದರೆ ಸಾಕು ಹೊಟ್ಟೆಯ ಸುತ್ತಲಿನ ಕೊಬ್ಬು ಸುಲಭವಾಗಿ ಕರಗಿಸಿ, ತೂಕ ಕಳೆದುಕೊಂಡು ಸ್ಲಿಮ್ ಆಗಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.
ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep
ಈ ಆಹಾರಗಳನ್ನು ಸೇವಿಸಿದ ಬಳಿಕ ಅಪ್ಪಿತಪ್ಪಿ ಹಲ್ಲು ಉಜ್ಜಬೇಡಿ! ಉಜ್ಜಿದರೆ ಏನಾಗುತ್ತೆ ಗೊತ್ತಾ? Teeth Health