Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಕಳ್ಳತನಕ್ಕೆ ಬಂದು ಸಿಸಿಟಿವಿ ಕ್ಯಾಮರಾ ಎದುರು ಸಖತ್​ ಡ್ಯಾನ್ಸ್​ ಮಾಡಿದ ಕಳ್ಳ

Thursday, 12.07.2018, 12:53 PM       No Comments

ನವದೆಹಲಿ: ಅಂಗಡಿಗಳ ಬಾಗಿಲು ಮುರಿದು ಕಳವು ಮಾಡಲು ಬಂದ ಕಳ್ಳ ಸಿಸಿಟಿವಿ ಕ್ಯಾಮರಾ ಎದುರು ಸಖತ್​ ಆಗಿ ಡ್ಯಾನ್ಸ್​ ಮಾಡಿ ಸುದ್ದಿ ಮಾಡಿದ್ದಾನೆ.
ದೆಹಲಿ ನಗರದ ಕಿರಿದಾದ ರಸ್ತೆಯೊಂದರಲ್ಲಿ ಸಾಲಾಗಿ ಇರುವ ಅಂಗಡಿಗಳ ಬಾಗಿಲು ಮುರಿದ ಕಳ್ಳತನ ಮಾಡಲು ಆಗಮಿಸಿದ ಕಳ್ಳ ಮೊದಲು ಮಧ್ಯರಸ್ತೆಯಲ್ಲಿ ನಿರಾತಂಕವಾಗಿ ನೃತ್ಯ ಮಾಡಿದ್ದಾನೆ. ನಂತರ ಬಂದ ಅವನ ಸಹಚರನ ಜತೆಗೂಡಿ ಅಂಗಡಿ ಬಾಗಿಲು ಮುರಿಯಲು ಮುಂದಾಗಿದ್ದಾನೆ.

ಇವರಿಬ್ಬರೂ ಕರವಸ್ತ್ರದಿಂದ ಮುಖ ಮುಚ್ಚಿಕೊಂಡಿದ್ದರು. ಮಧ್ಯರಾತ್ರಿಯಲ್ಲಿ ನಡೆದ ಈ ನೃತ್ಯ ಹಾಗೂ ಅವರ ಕಳ್ಳತನ ಪ್ರಯತ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಡ್ಯಾನ್ಸ್​ ಮಾಡಿದವನು ಸೇರಿ ಒಟ್ಟು ಐವರು ಕಳ್ಳರು ನಾಲ್ಕು ಅಂಗಡಿಗಳನ್ನು ದೋಚಿದ್ದಾರೆ. ಅವರೆಲ್ಲರನ್ನೂ ಬಂಧಿಸಿರುವ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top