Stock market : ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ (ಡಿ.13) ಆರಂಭಿಕ ವಹಿವಾಟಿನಲ್ಲೇ ಮಹಾ ಕುಸಿತ ಅನುಭವಿಸಿದೆ. ಮುಂಚೂಣಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ-50ರಲ್ಲಿ ಶೇ. 1 ಕ್ಕಿಂತ ಹೆಚ್ಚು ಕುಸಿತಕಂಡಿವೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತೀವ್ರವಾಗಿ ನಷ್ಟ ಅನುಭವಿಸಿದ್ದು, ಇನ್ಟ್ರಾ ಡೇ ಟ್ರೇಡಿಂಗ್ ಸಮಯದಲ್ಲಿ ಸುಮಾರು 2 ಪ್ರತಿಶತದಷ್ಟು ಕುಸಿದಿವೆ.
ಸೆನ್ಸೆಕ್ಸ್ 1,200ಕ್ಕೂ ಹೆಚ್ಚು ಅಂಕಗಳು ಅಥವಾ ಶೇ.1.5 ಕುಸಿತದೊಂದಿಗೆ 80,082.82 ಪಾಯಿಂಟ್ನೊಂದಿಗೆ ವಹಿವಾಟು ನಡೆಸುತ್ತಿದೆ. ನಿಫ್ಟಿ-50ಯಲ್ಲೂ 300 ಅಂಕ ಅಥವಾ ಶೇ.1.5 ಕುಸಿತವಾಗಿದ್ದು, 24,180.80 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐನಂತಹ ಅಧಿಕ ಮೌಲ್ಯದ ಷೇರುಗಳು ತಲಾ 1 ಪ್ರತಿಶತದಷ್ಟು ಕುಸಿತ ಅನುಭವಿಸಿವೆ.
ಇದನ್ನೂ ಓದಿ: ನೀವು ಈ ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಹಾಗಾದರೆ 2025ರಲ್ಲಿ ನಿಮಗೆ ಅದೃಷ್ಟೋ ಅದೃಷ್ಟ… ಹಣದ ಸುಗ್ಗಿ ಗ್ಯಾರಂಟಿ! Numerology
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇ. 2 ರಷ್ಟು ಕುಸಿತ ಕಂಡಿವೆ. ಬಿಎಸ್‌ಇ ಪಟ್ಟಿ ಮಾಡಿದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ಸೆಸನ್ನ 458 ಲಕ್ಷ ಕೋಟಿ ರೂಪಾಯಿಯಿಂದ ಸುಮಾರು 451 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಹೂಡಿಕೆದಾರರು ಒಂದೇ ಅವಧಿಯಲ್ಲಿ ಸುಮಾರು 7 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ನಿಫ್ಟಿ ಬ್ಯಾಂಕ್, ಆಟೋ, ಹಣಕಾಸು ಸೇವೆಗಳು, ಪಿಎಸ್‌ಯು ಬ್ಯಾಂಕ್ ಮತ್ತು ರಿಯಾಲ್ಟಿ ಸೇರಿದಂತೆ ದರ-ಸೂಕ್ಷ್ಮ ವಲಯಗಳು 1.5 % ಮತ್ತು 2.7% ನಡುವೆ ಕುಸಿತವನ್ನು ದಾಖಲಿಸಿವೆ.
ಇಂದು ಭಾರತೀಯ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?
ಯುಎಸ್ ಡಾಲರ್ ಮತ್ತು ಬಾಂಡ್ ಯೀಲ್ಡ್ ಮೌಲ್ಯ ಹೆಚ್ಚಿದ ಪರಿಣಾಮ ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರ ತೀವ್ರ ಕುಸಿತಕ್ಕೆ ಸಾಕ್ಷಿಯಾಯಿತು. ಅಲ್ಲದೆ, ಚೀನಾದಿಂದ ಉತ್ತೇಜಕ ಕ್ರಮಗಳ ಬಗ್ಗೆ ಅನಿಶ್ಚಿತತೆ ಹಾಗೂ ಭಾರತದ ನವೆಂಬರ್ ತಿಂಗಳ ಹಣದುಬ್ಬರ ಅಂಕಿಅಂಶಗಳು ಕೂಡ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಇನ್ನು ಬಲಗೊಳ್ಳುತ್ತಿರುವ ಡಾಲರ್, ಆಮದು ಮಾಡಿಕೊಳ್ಳುವ ಹಣದುಬ್ಬರದ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಭಾರತದಲ್ಲಿ ನವೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು 5.48% ಕ್ಕೆ ಇಳಿದಿದೆ. (ಏಜೆನ್ಸೀಸ್)
2025ರಲ್ಲಿ ನಿಮ್ಮಲ್ಲಿ ಏನಾದರೂ ಬದಲಾವಣೆ ಕಾಣಲು ಬಯಸಿದರೆ ಈ ವಿಚಾರಗಳ ಮೇಲೆ ಗಮನಹರಿಸಿ…New Year 2025
ನನ್ನಿಂದ ನೋಡಲು ಆಗ್ತಿಲ್ಲ…. ಮದುವೆ ದಿನ ಗೊಳೋ ಎಂದು ಕಣ್ಣೀರಿಟ್ಟ ವಧು! ಕಾರಣ ಕೇಳಿ ಸಂಬಂಧಿಕರು ಶಾಕ್! Bride Tears