ಚೆಂಡು ವಿರೂಪ ಪ್ರಕರಣದ ಬಳಿಕ ರಾಷ್ಟ್ರೀಯ ತಂಡದಲ್ಲಿ ಸ್ಮಿತ್​ ಅರ್ಧ ಶತಕ

ಬ್ರಿಸ್ಬೇನ್: ಚೆಂಡು ವಿರೂಪ ಪ್ರಕರಣಕ್ಕೆ ಸಿಲುಕಿ ಒಂದು ವರ್ಷ ರಾಷ್ಟ್ರೀಯ ಕ್ರಿಕೆಟ್​​ ತಂಡದಿಂದ ನಿಷೇಧಕ್ಕೊಳಗಾಗಿದ್ದ ಆಸ್ಟ್ರೇಲಿಯಾ ಅಗ್ರ ಬ್ಯಾಟ್ಸ್​​ಮನ್​​​​ ಸ್ಟೀವ್​​ ಸ್ಮಿತ್​​​ ಅವರು ಅರ್ಧ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇದೇ 30 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್​​ ನಿಮಿತ್ತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ XI ತಂಡದ ಎದುರು ಸ್ಮಿತ್​​ 77 ಎಸೆತಗಳಲ್ಲಿ 89 ರನ್​​ ಗಳಿಸಿ ಅಜೇಯರಾಗಿದ್ದಾರೆ. ಒಂದು ವರ್ಷದ ಬಳಿಕ ರಾಷ್ಟ್ರೀಯ ತಂಡದಲ್ಲಿ ಮೊದಲ ಅರ್ಧ ಶತಕ ಬಾರಿಸಿದ್ದಾರೆ.

ಆಸ್ಟ್ರೇಲಿಯಾ XI ತಂಡ ಈ ಪಂದ್ಯದಲ್ಲಿ ಉತ್ತಮ ಆಟವಾಡಿದರೂ ನ್ಯೂಜಿಲೆಂಡ್​​ ಎದುರು ಏಳು ವಿಕೆಟ್​ಗಳಿಂದ ಪರಾಭವಗೊಂಡಿತು.

ಸ್ಮಿತ್​​ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​​ ತಂಡದ ನಾಯಕನಾಗಿಯೂ ಭರ್ಜರಿ ಪ್ರದರ್ಶನ ತೋರಿದ್ದರು. (ಏಜನ್ಸೀಸ್​)