ಬೆಂಗಳೂರು: ಆಟ ಮತ್ತು ಕಲಿಕೆಗೆ ನೆರವಾಗಲು ವಿದ್ಯಾರ್ಥಿಗಳಿಗೆಂದೇ ಎಜುಫನ್ ಟೆಕ್ನಾಲಜಿಸ್ ಪ್ರೖೆ.ಲಿ. ಹೊರತಂದಿರುವ ‘ಸ್ಟೆಪ್ಆಪ್’ ಅನ್ನು ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಬಿಡುಗಡೆ ಮಾಡಿದರು.
ಅಮಿತಾಭ್ ಬಚ್ಚನ್ ಮಾತನಾಡಿ, ಇದೊಂದು ಮೊಬೈಲ್ ಆಪ್. ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿಕೊಂಡು ಪಾಠಗಳನ್ನು ಇದರ ಮೂಲಕವೇ ಅಭ್ಯಾಸ ಮಾಡಬಹುದು. ಮಕ್ಕಳಿಗೆ ಓದಿಗಿಂತ ಆಟದ ಮೇಲೆ ಹೆಚ್ಚಿನ ಗಮನ. ಇದನ್ನೇ ಕೇಂದ್ರೀಕರಿಸಿ ಈ ಕಂಪನಿಯು ಹೊರತಂದಿರುವ ಸ್ಟೆಪ್ಆಪ್ ಆಟದ ಜತೆಗೆ ವ್ಯಾಸಂಗಕ್ಕೂ ಸಹಾಯವಾಗಲಿದೆ. ಐಐಟಿಯಲ್ಲಿ ವ್ಯಾಸಂಗ ಮಾಡಿದ ಬಹುತೇಕರು ಸೇರಿ ಈ ಆಪ್ ರೂಪಿಸಿರುವುದು ಹೆಮ್ಮೆಯ ವಿಚಾರ ಎಂದರು.
ಎಜುಫನ್ ಟೆಕ್ನಾಲಜಿಸ್ ಪ್ರೖೆ.ಲಿ.ನ ಸಂಸ್ಥಾಪಕ ಪ್ರವೀಣ್ ತ್ಯಾಗಿ ಮಾತನಾಡಿ, ಇದೊಂದು ಗೇಮಿಂಗ್ ಲರ್ನಿಂಗ್ ಆಪ್. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಇದನ್ನು ಬಳಸಬಹá-ದು. ಸ್ಟೂಡೆಂಟ್ ಟ್ಯಾಲೆಂಟ್ ಎನ್ಫೋರ್ಸ್ವೆುಂಟ್ ಪ್ರೋಗ್ರಾಂ(ಸ್ಟೇಪ್) ಆಗಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಈ ಆಪ್ ಉಪಯೋಗಿಸಬಹುದು. ಇದು ಎಲ್ಲ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಸಿಗುವ ಆಕರ್ಷಕ ಆಪ್ ಎಂದರು.
ವಿದ್ಯಾರ್ಥಿವೇತನ ಲಭ್ಯ
ಎಜುಫನ್ ಟೆಕ್ನಾಲಜಿಸ್ ಕಂಪನಿಯು ಮಕ್ಕಳಿಗೆ ವಿದ್ಯಾರ್ಥಿವೇತನವನ್ನೂ ಕೊಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ 10 ಸಾವಿರದಿಂದ 1 ಕೋಟಿ ರೂ.ವರೆಗೆ ವಿದ್ಯಾರ್ಥಿವೇತನ ಪಡೆಯಬಹುದು. ಇದಕ್ಕಾಗಿ ಕಂಪನಿ 50 ಕೋಟಿ ರೂ. ಮೀಸಲಿಟ್ಟಿದೆ. ಈಗಾಗಲೇ ನೋಂದಣಿ ಆರಂಭವಾಗಿದೆ. ಮೊದಲ 1 ಲಕ್ಷ ವಿದ್ಯಾರ್ಥಿಗಳಿಗೆ ವಿವಿಧ ಆಫರ್ಗಳು ದೊರೆಯಲಿದೆ. ಐಐಟಿ ಪ್ರಾಧ್ಯಾಪಕರಿಂದ ಮೆಂಟರ್ಶಿಪ್ ಮತ್ತು ಮಾರ್ಗದರ್ಶನ ದೊರೆಯಲಿದೆ ಎಂದು ಕಂಪನಿ ಸಂಸ್ಥಾಪಕ ಪ್ರವೀಣ್ ತ್ಯಾಗಿ ತಿಳಿಸಿದ್ದಾರೆ.