ಹಣ ಕದ್ದು ಸಮುದಾಯಕ್ಕೆ ವಂಚನೆ

blank

ದಲಿತ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಕಿಡಿ, 9ರಂದು ಶಾಸಕರ ಮನೆ ಮುಂದೆ ಧರಣಿ

ಶ್ರೀನಿವಾಸಪುರ: ನಮ್ಮ ಪಾಲಿನ ಹಣ ಅಪಹರಣವಾಗಿದೆ. ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ಮಾಡಿರುವ ವಂಚನೆ ಸಾಕು ಎಂದು ಜಿಲ್ಲೆಯ ಶಾಸಕರ ವಿರುದ್ಧ ದಲಿತ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ವಿವಿಧ ಪ್ರಗತಿಪರ ಸಂಘಟನೆ ಹಾಗೂ ದಲಿತ ಸಂಘಟನೆಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರೊನಾ ನಂತರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಹೊಡೆತವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಕೆಲ ಯುವಕರು ಕ್ರಿಮಿನಲ್​ಗಳಾಗಿ ಬದಲಾಗಿದ್ದಾರೆ. ಇನ್ನು ಕೆಲವರು ಕಾರ್ಮಿಕರಾಗಿ ಬದಲಾಗುತ್ತಿದ್ದಾರೆ. ಸರಿಯಾದ ಶಿಕ್ಷಣವಿಲ್ಲದೆ ಮುಂದಿನ 15 ವರ್ಷದಲ್ಲಿ ನಮ್ಮ ಸಮುದಾಯದ ಯುವಕರು ಗುಲಾಮಗಿರಿಯತ್ತ ವಾಲುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ಮೀಸಲು ಕ್ಷೇತ್ರವಿಲ್ಲ. ಕೋಲಾರ ಜಿಲ್ಲೆಯಲ್ಲಿ ಮೂರು ಮೀಸಲು ವಿಧಾನಸಭಾ ಕ್ಷೇತ್ರವಿದ್ದು, ಅದರಲ್ಲಿ ಈಗಾಗಲೇ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​ ಅವರು ನಮ್ಮ ಪಾಲಿನ ಹಣದ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತಿದರು. ಉಳಿದ ಇಬ್ಬರು ಶಾಸಕರು ಈ ಬಗ್ಗೆ ಧ್ವನಿ ಎತ್ತದ ಕಾರಣ ಅವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆ.9ರಂದು ಬೆಳಗ್ಗೆ 10&30ರಿಂದ ಮಧ್ಯಾಹ್ನ 3ರವರೆಗೆ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹಾಗೂ ಕೆಜಿಎಫ್​ ಶಾಸಕಿ ರೂಪಕಲಾ ಶಶಿಧರ್​ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು. ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಹೂಹಳ್ಳಿ ಕೃಷ್ಣಪ್ಪ, ಮುಖಂಡರಾದ ವೆಂಕಟೇಶ್​, ರಾಮಾಂಜಮ್ಮ, ಚಲ್ದಿಗಾನಹಳ್ಳಿ ಈರಪ್ಪ, ಪೂಜಪ್ಪ, ಮಟ್ಕನ್ನಸಂದ್ರ ಎಂ.ವಿ.ನಾರಾಯಣಸ್ವಾಮಿ, ಅಡಿವಿ ಚಂಬಕೂರು ಸದಾಶಿವ, ಪನಸಕಮಾಕಹಳ್ಳಿ ರಾಮಮೂರ್ತಿ, ನರಸಿಂಹಮೂರ್ತಿ ಇದ್ದರು.

Share This Article

Vastu Tips: ಮನೆಯ ಮುಖ್ಯ ದ್ವಾರದಲ್ಲಿ ಈ ನಾಲ್ಕು ವಸ್ತುಗಳನ್ನು ಇಟ್ಟರೆ ಯಶಸ್ಸು ನಿಮ್ಮದೇ….!

Vastu Tips :  ಮನೆಯ ಮುಖ್ಯ ಬಾಗಿಲನ್ನು ಸಂತೋಷದ ಬಾಗಿಲು ಎಂದು ಪರಿಗಣಿಸಲಾಗುತ್ತದೆ. ಇಲ್ಲಿಂದ ಎಲ್ಲರಿಗೂ…

ನಿಮ್ಮ ಕನಸಿನಲ್ಲಿ ಬೆಕ್ಕನ್ನು ನೀವು ಪದೇ ಪದೇ ನೋಡುತ್ತೀರಾ? ಇದು ಶುಭನಾ? ಅಶುಭನಾ?.. Dream Science

Dream Science : ನಿದ್ದೆ ಮಾಡುವಾಗ ನಮಗೆ ಹಲವಾರು ರೀತಿಯ ಕನಸುಗಳಿರುತ್ತವೆ. ಅವುಗಳಲ್ಲಿ ಕೆಲವು ಒಳ್ಳೆಯ…

ನಾವು ಬಳಸಿದ ಬಟ್ಟೆಯನ್ನು ಇತರರಿಗೆ ದಾನ ಮಾಡಿದರೆ ಏನಾಗುತ್ತದೆ ಗೊತ್ತಾ? Clothes Donate

Clothes Donate: ನಾವು ಬಳಸಿದ ಬಟ್ಟೆಗಳನ್ನು ಇತರರಿಗೆ ನೀಡುವುದು ಒಳ್ಳೆಯದು ಆದರೆ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು…