ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಹುಬ್ಬಳ್ಳಿ ನಗರ ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದಲ್ಲಿ ಗುರುವಾರ ಅದ್ದೂರಿಯಿಂದ ನೆರವೇರಿತು.
ಬೆಳಗ್ಗೆ 8.30 ಕ್ಕೆ ಪಾಲಿಕೆ ಸಭಾ ನಾಯಕ ವೀರಣ್ಣ ಸವಡಿ ಅವರು ರಾಷ್ಟ್ರ ಧ್ವಜಾರೋಹಣವನ್ನು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ನಾಡ ಧ್ವಜಾರೋಹಣವನ್ನು ನೆರವೇರಿಸಿದರು. ಕಸಾಪ ಹುಬ್ಬಳ್ಳಿ ನಗರ ತಾಲೂಕು ಅಧ್ಯೆ ವಿದ್ಯಾ ವಂಟಮುರಿ ಅವರು ಪರಿಷತ್ ಧ್ವಜಾರೋಹಣ ಮಾಡಿದರು.
ನಂತರ ದೇಶಪಾಂಡೆ ನಗರದ ಕಾಮಾ ದೇವಾಲಯದಿಂದ ಸವಾಯಿ ಗಂಧರ್ವ ಸಭಾಂಗಣದವರೆಗೆ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ ಅವರನ್ನು ದಂಪತಿ ಸಮೇತ ಮೆರವಣಿಗೆ ಮಾಡಲಾಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ನಂತರ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಕೆ.ಎಸ್. ಕೌಜಲಗಿ, ಸಾಹಿತ್ಯ ಸಮಾಜಮುಖಿಯಾಗದಿದ್ದರೆ ಜನರಿಂದ ದೂರವಾಗುತ್ತದೆ ಎಂದು ಹೇಳಿದರು.
ೇಸ್ಬುಕ್ ಮತ್ತು ಅಂತರ್ಜಾಲ ಪತ್ರಿಕೆಗಳು ಬರಹಗಾರರ ಸೇವೆಗೆ ಸದಾ ಸಿದ್ಧವಾಗಿರುವುದರಿಂದ ಬರೆದ ತಕ್ಷಣ ಲೋಕಾರ್ಪಣೆ ಮಾಡುವ ಸ್ವಯಂ ಪ್ರೇರಣೆಯ ಸೌಲಭ್ಯ ಇಂದಿನ ದಿನಗಳಲ್ಲಿ ಸಾಹಿತಿಗಳಿಗೆ ಸಿಕ್ಕಿದೆ ಎಂದರು.
ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಸೆಗೆ ಅಷ್ಟೊಂದು ಮಹತ್ವ ಕೊಡುತ್ತಿಲ್ಲ. ಇದರಿಂದಾಗಿ ಇಂದಿನ ಬರಹಗಾರರು ಓದುಗರೊಂದಿಗೆ ಸಂಪರ್ಕ ಸಾಧಿಸಲಾರದೇ ಸೋಲುತ್ತಿದ್ದಾರೆ. ಓದುಗರನ್ನು ತಲುಪುವ ಕ್ರಮಗಳನ್ನು ಬರಹಗಾರರೇ ಶೋಧಿಸಿಕೊಳ್ಳಬೇಕಾದ ತುರ್ತು ಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೃತಕ ಬುದ್ಧಿಮತ್ತೆ ಜನಪ್ರಿಯವಾಗುತ್ತಿರುವುದರಿಂದ ಅದರಿಂದ ಸಾಹಿತ್ಯ ಮೇಲೆ ಬೀರುವ ಪರಿಣಾಮವನ್ನು ಆಲೋಚಿಸುವ ಅಗತ್ಯವಿದೆ ಎಂದು ಹೇಳಿದರು.
ಸಾಹಿತ್ಯಕ್ಕೆ ಓದುಗರ ಪ್ರತಿಕ್ರಿಯೆ ಇಲ್ಲದಿದ್ದರೆ ಅಥವಾ ಪ್ರಕಟಿತ ಕೃತಿಗಳನ್ನು ಓದುಗರು ಚಚಿರ್ಸದಿದ್ದರೆ ನಮ್ಮ ಸಾಂಸತಿಕ ಸಾಧನೆ ಕಾಲಕ್ರಮದಲ್ಲಿ ಅರ್ಥಹೀನ ಚಟುವಟಿಕೆಯಾಗಿ ವಿಸ್ಮ$ತಿಗೆ ಗುರಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಪ್ರೊ. ಕೌಜಲಗಿ, ಬರಹಗಾರರ ಮುಂದಿನ ಕೃತಿಗೆ ಓದುಗರು ಕಾಯುವಂತಹ ವ್ಯವಸ್ಥೆ ನಿರ್ಮಾಣವಾದಾಗ ಗುಣಮಟ್ಟದ ಮೌಲ್ಯಾಧಾರಿತ ಕೃತಿಗಳು ಬರಲು ಅವಕಾಶ ದೊರೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಭಾಷೆ ಉಳಿಸಿ, ಬೆಳೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಹಾಗೂ ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ರಾಜಕಾರಣಿಗಳು ಸಹ ಈ ವಿಷಯದಲ್ಲಿ ಜವಾಬ್ದಾರಿಯಿಂದ ವತಿರ್ಸಬೇಕು. ಕನ್ನಡ ಭಾಷೆ ಉಳಿಸಿ, ಬೆಳೆಸುವ ಕಾರ್ಯದಲ್ಲಿ ರಾಜಕಾರಣ ಮಾಡದೇ, ಪಾತೀತವಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕವು ಉತ್ತರ ಭಾರತದ ಸಂಸತಿ ಮತ್ತು ದಣ ಭಾರತದ ಸಂಸತಿಗಳ ಸಮಾಗಮ. ಇಲ್ಲಿ ದೇಶದ ಎರಡೂ ಭಾಗಗಳ ಸಂಸತಿಗಳು ಕಾಣಿಸುತ್ತವೆ. ಕನ್ನಡ ಸಾಹಿತ್ಯಕ್ಕೆ ಜೈನ ಧರ್ಮದ ಕೊಡುಗೆ ಅಪಾರವಾದದ್ದು. ರನ್ನ, ಪಂಪ, ನೇಮಿಚಂದ್ರರಂತಹ ವಿದ್ವಾನರು ಕನ್ನಡ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿದ್ದಾರೆ. ಆದಿಕವಿ ಮತ್ತು ಮಹಾಕವಿ ಎಂಬ ಬಿರುದುಗಳು ಇರುವುದು ಇಬ್ಬರಿಗೆ ಮಾತ್ರ. ಒಬ್ಬರು ಸಂಸತದ ಕವಿಯಾಗಿದ್ದರೆ, ಮತ್ತೊಬ್ಬರು ಕನ್ನಡದ ಪಂಪ. ವ್ಯಾಸಭಾರತವನ್ನು ಕನ್ನಡಕ್ಕೆ ಅನುವಾದಿಸಿದವರು ಮಹಾಕವಿ ಪಂಪ ಎಂದು ತಿಳಿಸಿದರು.
ಸಾಹಿತಿ ಹಾಗೂ 9ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ವೆಂಕಟೇಶ ಮರೆಗುದ್ದಿ ಮಾತನಾಡಿ, ಭಾರತದಲ್ಲಿನ ಶೇ. 50ರಷ್ಟು ದೇವಸ್ಥಾನಗಳನ್ನು ನಿಮಿರ್ಸಿದವರು ಹಾಗೂ ಶೇ. 50ರಷ್ಟು ಶಿಲ್ಪಗಳನ್ನು ಕೆತ್ತಿದವರು ಕನ್ನಡದವರೇ ಆಗಿದ್ದಾರೆ ಎಂದು ಹೇಳಿದರು.
ಭಾರತೀಯ ಸೈನ್ಯದಲ್ಲಿ ಪಂಜಾಬ್ ರೆಜಿಮೆಂಟ್, ಮರಾಠಾ ರೆಜಿಮೆಂಟ್ ಇರುವಂತೆ ಕರ್ನಾಟಕಕ್ಕೂ ಪ್ರತ್ಯೇಕ ರೆಜಿಮೆಂಟ್ ರಚಿಸಬೇಕು ಎಂದು ಆಗ್ರಹಿಸಿದರು.
ಮಹಾನಗರ ಪಾಲಿಕೆಯ ಹುಬ್ಬಳ್ಳಿ ಮುಖ್ಯ ಕಚೇರಿಯಲ್ಲಿ ವೀರ ಪುಲಕೇಶಿ ಪ್ರತಿಮೆ ನಿಮಿರ್ಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಸಾಹಿತಿ ಡಾ. ಬಿ.ವಿ. ಶಿರೂರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮೀನಾ ಒಂಟಮುರಿ, ಉಮೇಶ ಕೌಜಗೇರಿ, ಪ್ರಮುಖರಾದ ಬಿ.ಎ. ಪಾಟೀಲ, ಡಾ. ಶರಣಪ್ಪ ಕೊಟಗಿ, ಸಂಕಲ್ಪ ಶೆಟ್ಟರ್, ಲಿಂಗರಾಜ ಪಾಟೀಲ, ಚನ್ನಬಸಪ್ಪ ಧಾರವಾಡಶೆಟ್ರ, ಪ್ರೊ. ಎಸ್.ಕೆ. ಆದಪ್ಪನವರ ಹಾಗೂ ಇತರರು ಇದ್ದರು.