ಏಕತೆ ಪ್ರತಿಮೆ ಪೂರ್ಣ

ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಉಕ್ಕಿನ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವರ 143ನೇ ಹುಟ್ಟುಹಬ್ಬದ ದಿನ ಅ. 31ರಂದು ಉದ್ಘಾಟನೆಗೊಳ್ಳಲಿದೆ. ಗುಜರಾತ್​ನ ನರ್ಮದಾ ನದಿಯ ಸರ್ದಾರ್ ಸರೋವರ ಅಣೆಕಟ್ಟೆ ಸಮೀಪ ಈ ಮೂರ್ತಿ ನಿರ್ಮಾಣವಾಗಿದೆ.

ಉಕ್ಕಿನಷ್ಟೇ ಗಟ್ಟಿ!

ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಹಾಗೂ 220 ಕಿ.ಮೀ ವೇಗದ ಮಾರುತಗಳನ್ನು ಈ ಮೂರ್ತಿ ತಡೆದುಕೊಳ್ಳುವ ಶಕ್ತಿ ಹೊಂದಿದೆ. 10 ಕಿ.ಮೀ ಆಳ ಹಾಗೂ 15 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ಭೂಕಂಪನವಾದರೂ ಏಕತೆಯ ವಿಗ್ರಹಕ್ಕೆ ಯಾವುದೆ ಹಾನಿಯಾಗುವುದಿಲ್ಲ. ಮಳೆ ಹಾಗೂ ಸಿಡಿಲಿನಿಂದಲೂ ಯಾವುದೇ ಧಕ್ಕೆಯಾಗದಂತೆ ರೆಡಿಯೋ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ಮೋದಿ ಕನಸಿನ ಯೋಜನೆ

ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆ ಇದಾಗಿದೆ. ಗುಜರಾತಿನ ಮಣ್ಣಿನ ಮಗ ಎಂದು ಕರೆಯಲ್ಪ ಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ಮೊದಲ ಗೃಹ ಸಚಿವರಾಗಿದ್ದರು.

‘ಏಕತೆ’ಯ ವಿಶೇಷತೆ

# ಎತ್ತರ: 182 ಮೀಟರ್
# ಕಂಚಿನ ಹಾಳೆ: 1850 ಮೆಟ್ರಿಕ್ ಟನ್
# ಉಕ್ಕು: 24,200 ಮೆಟ್ರಿಕ್ ಟನ್
# ಯೋಜನಾ ಮೊತ್ತ: 2989 ಕೋಟಿ ರೂ.
# ಸಿಮೆಂಟ್ ಬಳಕೆ: 22,500 ಮೆಟ್ರಿಕ್ ಟನ್
# ಎಲ್ಲಿ: ನರ್ಮದಾ ನದಿಯ ಸರ್ದಾರ್ ಸರೋವರ ಅಣೆಕಟ್ಟೆಯಿಂದ 3.5 ಕಿ.ಮೀ ದೂರದ ಗರುಡೇಶ್ವರ ಬಳಿಯ ಸಾಧು ದ್ವೀಪ

ಆಕರ್ಷಣೆಯೇನು?

# ಹೋಟೆಲ್, ಆಟದ ಜಾಗ ಸೇರಿ ಪ್ರವಾಸಿಗರ ಅನುಕೂಲಕ್ಕೆ ಶ್ರೇಷ್ಟ ಭಾರತ ಭವನ ನಿರ್ಮಾಣ

# ಪಟೇಲರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ಹಾಗೂ ಆಡಿಯೋ-ವಿಡಿಯೋ ಗ್ಯಾಲರಿ

# ಲೇಸರ್ ಬೆಳಕು ಹಾಗೂ ಧ್ವನಿ ಪ್ರದರ್ಶನ

# ಸಂಶೋಧನಾ ಕೇಂದ್ರ

# ಸರ್ದಾರ್ ಸರೋವರ ಅಣೆಕಟ್ಟು ಹಾಗೂ ನರ್ಮದಾ ನದಿಯನ್ನು 400 ಅಡಿ ಎತ್ತರದಲ್ಲಿ ನಿಂತುಕೊಂಡು ನೋಡುವ ಅವಕಾಶ

# ಆಗಮಿಸುವ ಪ್ರವಾಸಿಗರಿಗೆ ವಾಹನದ ಬದಲು ಫೆರ್ರಿ ಸೇವೆ ಹಾಗೂ ಪ್ರತ್ಯೇಕ ಬೋಟಿಂಗ್ ಸೌಲಭ್ಯ

# ಸುಮಾರು 7 ಕಿ.ಮೀ ದೂರದಿಂದ ಈ ಮೂರ್ತಿ ಬರಿ ಕಣ್ಣಿಗೆ ಕಾಣಲಿದೆ

# ವಿಶ್ವದ ಅತಿ ಎತ್ತರದ ವಿಗ್ರಹ ಎಂಬ ಖ್ಯಾತಿಗೆ ಅಮೆರಿಕದ ನ್ಯೂಯಾಕ್​ನಲ್ಲಿರುವ ಲಿಬರ್ಟಿ ವಿಗ್ರಹ ಪಾತ್ರವಾಗಿದೆ. ಈ ಮೂರ್ತಿಯು ಅದರ ಎರಡು ಪಟ್ಟು ಎತ್ತರವಿದೆ.

ನಿರ್ಮಾಣ ಹಾದಿ…

# 2010: ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯಿಂದ ಯೋಜನೆ ಘೋಷಣೆ.

# 2013: ಮೋದಿಯಿಂದ ಯೋಜನೆಗೆ ಶಿಲಾನ್ಯಾಸ

# 2014: ಎಲ್ ಆಂಡ್ ಟಿ ಕಂಪನಿಗೆ ಯೋಜನೆಯ ಗುತ್ತಿಗೆ

# 2015: ಎಲ್ಲ ರೀತಿಯ ಸಮೀಕ್ಷೆ ಸಂಪೂರ್ಣ

# 2017: ಆಧಾರ ಸ್ತಂಭ ಹಾಗೂ ಪ್ರಾಥಮಿಕ ಕಾಮಗಾರಿ ಅಂತಿಮ

# 2018ರ ಅ.31: ಯೋಜನೆ ಲೋಕಾರ್ಪಣೆ

ಎಲ್ ಆಂಡ್ ಟಿ ನಿರ್ಮಾಣ

ಪಟೇಲ್ ಮೂರ್ತಿಯನ್ನು ಚೀನಾ ನಿರ್ವಿುಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ ವಾಸ್ತವಿಕವಾಗಿ ಪ್ರತಿಷ್ಠಿತ ಎಲ್ ಆಂಡ್ ಟಿ ಸಂಸ್ಥೆಯು ಈ ಜವಾಬ್ದಾರಿ ಹೊತ್ತುಕೊಂಡಿದೆ. ಪಟೇಲ್ ಮೂರ್ತಿಗಾಗಿಯೇ 1347 ಕೋಟಿ ರೂ. ಮೀಸಲಿಟ್ಟಿದ್ದು, 15 ವರ್ಷಗಳ ನಿರ್ವಹಣೆಗೆ 657 ಕೋಟಿ ರೂ. ನೀಡಲಾಗಿದೆ.

Leave a Reply

Your email address will not be published. Required fields are marked *