ವಿಶ್ವದ ಎತ್ತರದ ಪ್ರತಿಮೆ ಸರ್ದಾರ್​ ಸ್ಟ್ಯಾಚು ಆಫ್​ ಯೂನಿಟಿಯಲ್ಲಿ ಅಡಗಿದೆ ಕನ್ನಡಿಗನೊಬ್ಬನ ಶ್ರಮ!

ದಾವಣಗೆರೆ: ಇಂದು ಲೋಕಾರ್ಪಣೆಗೊಂಡ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಹಾಗೂ ಭಾರತದ ಹೆಮ್ಮೆ ಸರ್ದಾರ್​ ವಲ್ಲಭಭಾಯಿ​ ಪಟೇಲ್​ ಅವರ ‘ಏಕತಾ ಪ್ರತಿಮೆ’ ನಿರ್ಮಾಣದ ಹಿಂದೆ ಕನ್ನಡಿಗನೊಬ್ಬನ ಶ್ರಮವೂ ಅಡಗಿದೆ ಎಂಬುದು ಕನ್ನಡಿಗರ ಪಾಲಿಗೆ ಖುಷಿ ವಿಚಾರ.

ಹೌದು, ದಾವಣಗೆರೆ ವಿದ್ಯಾನಗರದ ಸಿವಿಲ್ ಇಂಜಿನಿಯರ್ ಕೆ.ಎಂ‌.ಜಗದೀಶ್, ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಸಾಕ್ಷಿಯಾದವರು. ಒಂದು ವರ್ಷದಿಂದ ಗುಜರಾತ್​ನಲ್ಲಿ ಬೀಡುಬಿಟ್ಟಿರುವ ಜಗದೀಶ್​​ 200 ಪರಿಣಿತ ಆರ್ಕಿಟೆಕ್ಟ್ ಜತೆ ಕೆಲಸ ಮಾಡುತ್ತಿದ್ದರು.

ಪ್ರತಿಮೆಗೆ ಬೇಕಾದ ಪರಿಕರಗಳ ಗುಣಮಟ್ಟವನ್ನು ಪರಿಶೀಲಿಸುವ ಹೊಣೆ ಜಗದೀಶ್ ಅವರದ್ದಾಗಿತ್ತು. ಗುಜರಾತ್​ನ ಗಾಂಧಿನಗರ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್, ಕಂಪ್ಯೂಟರ್ ಡಿಸೈನ್ ಮಾಡಿ ಮೇಲಾಧಿಕಾರಿಗಳಿಗೆ ಇಂತಹದ್ದೇ ಪರಿಕರ ಬಳಸುವಂತೆ ಸಲಹೆ ನೀಡುತ್ತಿದ್ದರು. (ದಿಗ್ವಿಜಯ ನ್ಯೂಸ್​)