18ರಂದು ಬುದ್ಧನ ಪ್ರತಿಮೆ ಮೆರವಣಿಗೆ

ಬೇಲೂರು: ಬುದ್ಧ ಮತ್ತು ಬಸವ ಜಯಂತಿ ಅಂಗವಾಗಿ ಮೇ.18ರಂದು ಪಟ್ಟಣದಲ್ಲಿ ಬುದ್ಧರ ಪ್ರತಿಮೆ ಹಾಗೂ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಗುವುದು ಎಂದು ಗಾಂಧಾರ ಬುದ್ಧವಿಹಾರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಾಜು ಅರೇಹಳ್ಳಿ ಹೇಳಿದರು.

ಟ್ರಸ್ಟ್ ವತಿಯಿಂದ ಪಟ್ಟಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಅಂದು ಮಾಲಾರ್ಪಣೆ ಮಾಡಲಾಗುವುದು. ಬಳಿಕ ಭಗವಾನ್ ಬುದ್ಧರ 12 ಅಡಿ ಪ್ರತಿಮೆಯನ್ನು ನೆಹರು ನಗರದ ಕೆಂಪೇಗೌಡ ವೃತ್ತದವರೆಗೆ ಮೆರವಣಿಗೆ ಮಾಡಲಾಗುವುದು. ನಂತರ ಮದಘಟ್ಟ ದಲ್ಲಿರುವ ಗಾಂಧಾರ ಬುದ್ಧವಿಹಾರದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

ಟ್ರಸ್ಟ್‌ನ ಖಜಾಂಚಿ ಮಂಜುನಾಥ್ ಮೊಗಸಾವರ, ಸಹ ಕಾರ್ಯದರ್ಶಿ ಶೇಷಪ್ಪ, ಟ್ರಸ್ಟಿಗಳಾದ ಮಾಳೇಗೆರೆ ಕುಮಾರ್, ಶಿವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *