ಸಿನಿಮಾ

ಕಡಿವಾಲದ ಯೋಧ ವೀರಪ್ಪ ಹಿರೇಹಾಳಗೆ ಅಂತಿಮ ವಿದಾಯ: ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

ಹನುಮಸಾಗರ: ಪಂಜಾಬ ರಾಜ್ಯದ ಪತೀಂದಾದ ಭಾರತೀಯ ಸೇನಾ ಕೇಂದ್ರದಲ್ಲಿ (ತುಕಡಿಯಲ್ಲಿ) ಮೇ 9 ರಂದು ಹೃದಯಾಘಾತದಿಂದ ಮೃತಪಟ್ಟ ಕಡಿವಾಲ ಗ್ರಾಮದ ಯೋಧ ವೀರಪ್ಪ ಕರಿಯಪ್ಪ ಹಿರೇಹಾಳ ( 39 ).ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಸ್ವಗ್ರಾಮಕ್ಕೆ ತರಲಾಗಿಯಿತು. ಗ್ರಾಮಸ್ಥರು, ಗಣ್ಯರು ಯೋಧನ ಅಂತಿಮ ದರ್ಶನ ಪಡೆದರು.

20 ವರ್ಷಗಳಿಂದ ವಿವಿಧ ರಾಜ್ಯಗಳಲ್ಲಿ ಸೈನಿಕನಾಗಿ ಸೇವೆ

ಕಳೆದ 20 ವರ್ಷಗಳಿಂದ ಭಾರತದ ವಿವಿಧ ರಾಜ್ಯಗಳಲ್ಲಿ ವೀರ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ಪಂಜಾಬ ರಾಜ್ಯದ ಪತೀಂದಾದ ಭಾರತೀಯ ಸೇನಾ ಕೇಂದ್ರದಲ್ಲಿ ಮೇ 9 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.

ಸೇನಾ ಕೇಂದ್ರದಿಂದ ನವದೆಹಲಿಗೆ,ಅಲ್ಲಿಂದ ಬೆಂಗಳೂರು ಮೂಲಕ ಕೊಪ್ಪಳ (ಬಸಾಪೂರು ಎಂಎಸ್‌ಪಿಎಲ್ ಏರ್ ಡ್ರಮ್)ದಿಂದ ಕುಷ್ಟಗಿ ಪೊಲೀಸ್ ಠಾಣೆಗೆ ಯೋಧ ವೀರಪ್ಪ ಹಿರೇಹಾಳ ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು. ನಂತರ ವಿವಿಧ ಹೂಗಳಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ಈಡಲಾಗಿತ್ತು. ಅಪಾರ ಜನಸ್ಥೋಮ, ವಿವಿಧ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆ ಮಾಡುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಇದನ್ನೂ ಓದಿ: ಸೇನೆಯಿಂದ ಸ್ವಗ್ರಾಮಕ್ಕೆ ಬಂದ ಕೋಲಾರದ ಯೋಧ ಪತ್ನಿಯ ಮಡಿಲಲ್ಲೇ ಪ್ರಾಣಬಿಟ್ಟರು!

ಯೋಧ ವೀರಪ್ಪ ಕರಿಯಪ್ಪ ಹಿರೇಹಾಳ

ಸೈನಿಕ ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮೆರವಣಿಗೆ

ಯೋಧನ ಪಾರ್ಥಿವ ಶರೀರವನ್ನು ತಾಲೂಕಿನಿಂದ ಮೆರವಣಿಗೆಯ ಮೂಲಕ ಸ್ವಗ್ರಾಮ ಕಡಿವಾಲ ಗ್ರಾಮಕ್ಕೆ ಸೈನಿಕ ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ತರಲಾಯಿತು. ಪ್ರಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತದ್ದಂತೆ ಜಮಾವಣೆಗೊಂಡಿದ್ದ ಗ್ರಾಮಸ್ಥರು ಯೋಧನಿಗೆ ಘೋಷಣೆಗಳನ್ನು ಕೂಗಿದರು. ಬಳಿಕ ಶ್ರೀ ಶರಣಬಸವೇಶ್ವರ ದೇವಾಲಯದಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಮಾಲಗಿತ್ತಿ, ಪಟ್ಟಲಚಿಂತಿ, ಹನುಮನಾಳ ಸಂಚರಿಸಿ ಕಡಿವಾಲ ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ತಲುಪಿತು.

ಹನುಮಸಾಗರ ಸಮೀಪ ಕಡಿವಾಲ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಯೋಧ ವೀರಪ್ಪ ಹಿರೇಹಾಳ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ಮಾಡಲಾಯಿತು. ಸೇನಾ ಸಿಬ್ಬಂದಿ ರಾಷ್ಟ್ರಧ್ವಜವನ್ನು ಯೋಧನ ಪತ್ನಿ ರೇಖಾ ಅವರಿಗೆ ಹಸ್ತಾಂತರಿಸಿದರು.


ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂತಿಮ ದರ್ಶನ

ಮೆರವಣಿಗೆ ಯುದ್ದಕ್ಕೂ ಶಾಲಾ ಮಕ್ಕಳು, ಮಾಜಿ ಯೋಧರು, ಅಸಂಖ್ಯಾತ ಅಭಿಮಾನಿಗಳು, ಯುವಕರು, ಗಣ್ಯರು ತಂಡದೊಂದಿಗೆ ಭವ್ಯ ಮೆರವಣಿಯೊಂದಿಗೆ ಸ್ವಗ್ರಾಮ ಕಡಿವಾಲಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತು. ಯೋಧನ ಪಾರ್ಥಿವ ಶರೀರವನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ಈಡಲಾಗಿತ್ತು. ನಂತರ ಕಡಿವಾಲ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಮೃತ ಯೋಧನ ಪತ್ನಿ ರೇಖಾ ಹಾಗೂ ಇಬ್ಬರು ಗಂಡು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.

Latest Posts

ಲೈಫ್‌ಸ್ಟೈಲ್