More

    ರಾಜ್ಯದ ರಸ್ತೆ ಸುಧಾರಣೆಗೆ ಆದ್ಯತೆ

    ಉಳ್ಳಾಗಡ್ಡಿ-ಖಾನಾಪುರ: ರಾಷ್ಟ್ರೀಯ ಹೆದ್ದಾರಿ-4ರಿಂದ ಮಹಾರಾಷ್ಟ್ರದ ಹಲಕರ್ಣಿ ಗಡಿ ಗ್ರಾಮ ಸಂಪಕಿಸುವ ರಸ್ತೆ ಹಾಗೂ ಸೇತುವೆಯನ್ನು ಮುಂಬರುವ ದಿನಗಳಲ್ಲಿ ಎರಡು ಹಂತದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

    ರಾಜ್ಯದ ರಸ್ತೆ ಸುಧಾರಣೆಗೆ ಆದ್ಯತೆ
    ಉಳ್ಳಾಗಡ್ಡಿ-ಖಾನಾಪುರ ಗ್ರಾಮದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಚಂದ್ರಕಾಂತ ಪಾಟೀಲ, ರಾಹುಲ್ ಜಾರಕಿಹೊಳಿ, ಸುೀರ ಗಿರಿಗೌಡರ, ಪಾರೇಶಗೌಡ ಪಾಟೀಲ, ಮಹಾರುದ್ರ ಜರಳಿ, ಮಹಾಂತೇಶ ಮಗದುಮ್ಮ ಇತರರಿದ್ದರು.

    ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರಿಂದ ಬುಧವಾರ ಸತ್ಕಾರ ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಪಕ್ಷ ನೀಡಿದ್ದು, ರಾಜ್ಯದಲ್ಲಿನ ರಸ್ತೆಗಳನ್ನು ಹಂತಹಂತವಾಗಿ ಸುಧಾರಿಸಲಾಗುವುದು ಎಂದರು.

    15 ವರ್ಷಗಳಿಂದ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.70 ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದು, ಇನ್ನುಳಿದ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಉಳ್ಳಾಗಡ್ಡಿ-ಖಾನಾಪುರ ಗ್ರಾಮದ ಸುಮಾರು ಮುರ‌್ನಾಲ್ಕು ತೋಟದ ರಸ್ತೆಗಳು ಉಳಿದಿದ್ದು, ಅವುಗಳನ್ನೂ ಮುಂಬರುವ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ರಾಜ್ಯದಲ್ಲಿ ಗ್ರಾಮಕ್ಕೆ ಅಗತ್ಯವಿರುವ ಕುಡಿಯುವ ನೀರನ್ನು ಮಿತವಾಗಿ ಬಳಸಿ ಸದುಪಯೋಗ ಪಡೆದುಕೊಳ್ಳಬೇಕು. ಜೆಜೆಎಂ ಯೋಜನೆಯಿಂದ ಗ್ರಾಮೀಣ ವಲಯದ ಗ್ರಾಮಗಳ ಒಳರಸ್ತೆಗಳೆಲ್ಲಾ ಹಾಳಾಗಿವೆ. ಅವುಗಳನ್ನು ಮತ್ತೆ ಯಥಾಸ್ಥಿತಿಗೆ ತರುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಕಾಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷಾತೀತ ವ್ಯಕ್ತಿಗಳಾದ ಸತೀಶ ಜಾರಕಿಹೊಳಿ ಅವರಂಥ ಸಚಿವರು ದೊರೆತಿದ್ದು ಹೊಸ ಭರವಸೆ ಮೂಡಿಸಿದೆ ಎಂದರು.

    ಯುವ ನಾಯಕ ರಾಹುಲ್ ಜಾರಕಿಹೊಳಿ, ಮಾಜಿ ಅಧ್ಯಕ್ಷ ಸುೀರ ಗಿರಿಗೌಡರ, ಪಾರೇಶಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರ ಜರಳಿ, ಮಹಾಂತೇಶ ಮಗದುಮ್ಮ, ಇಲಿಯಾಸ್ ಇನಾಮದಾರ, ರಾಜು ಅವಟೆ, ಸಚಿನ ಹೆಬ್ಬಾಳಿ, ಸುಭಾಷ ಹೆಬ್ಬಾಳಿ, ಶಾಂತಿನಾಥ ಪಾಟೀಲ, ಬಸೀರ್ ಲಾಡಖಾನ್, ಮುರುಗೇಶ ಹಿರೇಮಠ, ರಾಜು ಕುಲಕರ್ಣಿ, ಮಹಾದೇವ ಪಟೊಳಿ, ಸತ್ಯಪ್ಪ ಮುತ್ಯನ್ನವರ, ಗ್ರಾಪಂ ಅಭಿವೃದ್ಧಿ ಅಕಾರಿ ಯಾಸೀನ್ ಅರಳಿಕಟ್ಟಿ, ಸದಸ್ಯರು ಹಾಗೂ ಮುಖಂಡರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts