ಗದಗ: ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ 32 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸಮಾಜದ ರಾಜ್ಯಮಟ್ಟದ ಮಹಿಳಾ ಸಮಾವೇಶವನ್ನು ನವೆಂಬರ್ 16 ರಂದು ಶನಿವಾರ ಗದಗನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು 32 ನೇ ಸಂಸ್ಥಾಪನಾ ದಿನಾಚರಣೆ ಸಮಿತಿ ಅಧ್ಯಕ್ಷ ಕೆ.ಎಫ್. ರಬ್ಬಾನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ನ.16 ರಂದು ಶನಿವಾರ ಗದಗ ನಗರದ ಆಂಗ್ಲೋ ಉರ್ದು ಸ್ಕೂಲ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ.
ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಮಾಜದ ಸಾಧಕರಿಗೆ “ದಿ. ಹಾಜಿ ಹೆಚ್. ಇಬ್ರಾಹಿಂಸಾಬ” “ಜಗಳೂರ ಇಮಾಮಸಾಬ” ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ “ಪೈಲ್ವಾನ ಪಿಂಜಾರ ರಮಜಾನಸಾಬ” ಹಾಗೂ “ಪ್ರಗತಿಪರರೈತ” ಈ ಹೆಸರುಗಳ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಹಾಗೂ 5ನೇ ಶತಮಾನದ ವರೆಗೆ ಮಹಿಳೆಯರನ್ನು ಕನಿಷ್ಠವಾಗಿ ನೋಡಿದ್ದ ಅಂದರೆ ಹೆಣ್ಣು ಮಗು ಹುಟ್ಟಿದರೆ ತಕ್ಷಣ ಜೀವಂತ ಸಮಾಧಿ ಮಾಡುತ್ತಿದ್ದರು, ಈ ಅಮಾನುಷ ಕೃತ್ಯಗಳನ್ನು ತಡೆದ ಪ್ರವಾದಿ ಮೊಹ್ಮದ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಂರವರು ಜನರಲ್ಲಿ ಮಹಿಳೆಯರ ಬಗ್ಗೆ ಇದ್ದ ಕೀಳು ಭಾವನೆಯನ್ನು ತೊಡೆದು ಹಾಕಿದರು. ಈಗ ನದಾಫ್/ಪಿಂಜಾರ ಸಂಘವು ಮಹಿಳೆಯರನ್ನು ಪೆÇ್ರೀತ್ಸಾಹಿಸಲು ದೇಶದ ಪ್ರಥಮ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ ಅವರ ಹೆಸರಿನಲ್ಲಿ ಸಮಾಜದ ಅತ್ಯುತ್ತಮ ಶಿಕ್ಷಕಿಯನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದರು.
ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಗಾದಿ ಹಾಕುವವರು, ಹಗ್ಗ ತಯಾರಿಸುವವರಿಗೆ ಕಾಯಕಯೋಗಿ ಪ್ರಶಸ್ತಿ, ನಮ್ಮ ಸಮಾಜದೊಂದಿಗೆ ಅನ್ನೋನ್ಯವಾಗಿರುವ ಗಣ್ಯರೊಬ್ಬರಿಗೆ ಭಾವೈಕ್ಯ ಪ್ರಶಸ್ತಿ, ಹಾಗೂ ಎಸ್ ಎಸ್ ಎಲ್ ಸಿಯಲ್ಲಿ 95% ಪಿಯುಸಿ ಯಲ್ಲಿ 90% ಕ್ಕೂ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಿವೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳ ಆಗಮನ: ಸಮಾವೇಶವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಚಿವರಾದ ಹೆಚ್.ಕೆ. ಪಾಟೀಲ, ಬಿ.ಝಡ್. ಜಮೀರ್‍ಅಹ್ಮದ್‍ಖಾನ್, ಶಿವರಾಜ್ ತಂಗಡಗಿ, ಸಂತೋಷ ಲಾಡ್, ಸಂಸದ ಬಸವರಾಜ ಬೊಮ್ಮಾಯಿ, ಕರ್ನಾಟಕ ರಾಜ್ಯದ ಮುಖ್ಯ ಸಚೇತಕರಾದ ಸಲಿಂ ಅಹ್ಮದ, ರಾಜ್ಯದ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ, ನರಗುಂದ ಶಾಸಕರಾದ ಸಿ.ಸಿ. ಪಾಟೀಲ ಸೇರಿ ಹಲವರು ಆಗಮಿಸಲಿದ್ದಾರೆ.
ಈ ಸಮಾವೇಶಕ್ಕೆ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಿಂದ ಪುರುಷ ಮತ್ತು ಮಹಿಳಾ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಮಹಿಳೆಉರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಸಮಾಜಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಗಾಗಿ ಗಟ್ಟಿ ಧ್ವನಿಯಲ್ಲಿ ಪ್ರಸ್ತಾಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.
ನದಾಫ/ಪಿಂಜಾರ ಸಮಾಜದ ಅರ್ಹ ಬಡಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಧನ ಸಹಾಯ, ಲ್ಯಾಪ್ಟಾಪ್ ವಿತರಣೆ, ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢಶಾಲಾ, ಪ್ರಥಮ ಹಾಗೂ ದ್ವಿತಿಯ ಪಿಯುಸಿಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ 40 ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ಊಟ, ವಸತಿಯೊಂದಿಗೆ ಶಿಕ್ಷಣ ನೀಡುತ್ತಲಿದ್ದು, ಗದಗ ಜಿಲ್ಲಾ ಘಟಕವು ಕೈ ಜೋಡಿಸಿದೆ ಎಂದು ಕೆ ಎಫ್ ಹುಲಕೋಟಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶೌಕತಅಲಿ ಅಣ್ಣಿಗೇರಿ, ಅಬ್ದುಲಶರೀಪ ನೂರಭಾμÁ, ಖಾದರಸಾಬ್ ಹಳ್ಯಾಳ, ಎಂ.ಬಿ ನದಾಫ್, ರಾಜೆಸಾಬ ಶಿಶುವಿನಹಳ್ಳಿ, ಆರ್.ವಾಯ್ ನದಾಫ್, ಎ.ಹೆಚ್ ಹೊಸಳ್ಳಿ, ಮಹಮ್ಮದರಫಿ ಅಣ್ಣಿಗೇರಿ, ಮೈನುದ್ದಿನ್ ನಲವಡಿ, ರಾಜೆಸಾಬ ಅಣ್ಣಿಗೆರಿ, ಜಾಕೀರ ಬಾಗಲಕೋಟ ಸೇರಿ ಹಲವರು ಉಪಸ್ಥಿತರಿದ್ದರು.
ಚನ್ನಮ್ಮ, ಗಾಂಧಿ ಸೇರಿ ಹಲವರ ಮೂರ್ತಿಗಳಿಗೆ ಮಾಲಾರ್ಪಣೆ
ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ 32 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸಮಾಜದ ರಾಜ್ಯಮಟ್ಟದ ಮಹಿಳಾ ಸಮಾವೇಶ ನಡೆಯುವ ದಿನ (ನ.16) ಬೆಳಿಗ್ಗೆ ಬೆಳಿಗ್ಗೆ 8 ಗಂಟೆಗೆ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಬೈಕ್ ರ್ಯಾಲಿಯು ಜಾಮೀಯಾ ಮಸ್ಜೀದ್‍ದಿಂದ ಪ್ರಾರಂಭಗೊಳ್ಳಲಿದೆ. ಬೈಕ್ ರ್ಯಾಲಿ ಸಾಗುವ ಮಾರ್ಗ ಮಧ್ಯೆ ಮಹಾತ್ಮ ಗಾಂಧಿ ಪ್ರತಿಮೆ, ನಗರಸಭೆ ಆವರಣದಲ್ಲಿರುವ ಡಾ. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಜಗದ್ಗುರು ತೋಂಟದಾರ್ಯ ಮಠಕ್ಕೆ ಭೇಟಿ, ಲಿಂಗೈಕ್ಯ ತೋಂಟದ ಶ್ರೀಗಳ ಗದ್ದುಗಗೆ ಮಾಲಾರ್ಪಣೆ ಗೌರವ ನೀಡಲಾಗುವುದು.
ಅಲ್ಲಿಂದ ವೀರರಾಣಿ ಕಿತ್ತೂರ ಚನ್ನಮ್ಮಳ ಪ್ರತಿಮೆ, ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ, ಬಳಿಕ ಮಹ್ಮದಅಲಿ ವೃತ್ತದಲ್ಲಿ ಭಾವಚಿತ್ರವಿಟ್ಟು ಗೌರವಿಸಲಾಗುತ್ತದೆ. ಅಲ್ಲಿಂದ ಬಸವೇಶ್ವರ ವೃತ್ತದಲ್ಲಿ ಮಾಲಾರ್ಪಣೆ ಮಾಡಿ, ಬಳಿಕ ಟಿಪ್ಪು ಸರ್ಕಲ್‍ಗೆ ತೆರಳಿ ಅಲ್ಲಿಂದ ಕೆ.ಎಚ್. ಪಾಟೀಲ ವೃತ್ತಕ್ಕೆ ಆಗಮಿಸಿ, ಮಾಲಾರ್ಪಣೆ ಮಾಡಿ, ಅಲ್ಲಿಂದ ಭೂಮರಡ್ಡಿ ವೃತ್ತಕ್ಕೆ ಆಗಮಿಸಿ, ಅಲ್ಲಿ ಕನಕದಾಸರು ಹಾಗೂ ಸಹಕಾರಿ ರಂಗದ ಪಿತಾಮಹ ಸಿದ್ದನಗೌಡ ಪಾಟೀಲರ ಭಾವಚಿತ್ರವಿಟ್ಟು ಮಾಲಾರ್ಪಣೆ ಮಾಡಿ, ನಂತರ ಪುಟ್ಟರಾಜರ ಪ್ರತಿಮೆಗೆ ಗೌರವಿಸುವ ಕಾರ್ಯ ನಡೆಯಲಿದೆ.
ಇದಾದ ಬಳಿಕ ಭೂಮರಡ್ಡಿ ವೃತ್ತದಿಂದ ಸಮಾವೇಶ ನಡೆಯುವ ಆಂಗ್ಲೋ ಸ್ಕೂಲ್ ಮೈದಾನದವರೆಗೆ ಹೆಜ್ಜೆ ಮೇಳ, ಜಾಂಜ್ ಮೇಳ, ಕರಡಿ ಮಜಲುಗಳ ಮೂಲಕ ಮೆರವಣಿಗೆಯು ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು, ಮಹಿಳೆಯರು, ಯುವಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೆ ಎಫ್ ಹುಲಕೋಟಿ (ರಬ್ಬಾನಿ) ಮನವಿ ಮಾಡಿದರು.
TAGGED:*ಗದಗ