ಸಿರಿಗೆರೆ: ಚಿತ್ರದುರ್ಗ ಜಿಲ್ಲೆ ಸಿರಿಗೆರೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಯ ಪುರವಂತಿಕೆ ವಿಭಾಗದಲ್ಲಿ ಹಾನಗಲ್‌ನ ಅರಳೇಶ್ವರದ ಸಿದ್ದೇಶ್ವರ ಪುರವಂತಿಕೆ ಸೇವಾ ಸಂಘ ಪ್ರಥಮ ಸ್ಥಾನ ಪಡೆದಿದೆ.
ಸವಣೂರಿನ ಯಲವಗಿಯ ವೀರಭದ್ರೇಶ್ವರ ಸೇವಾ ಸಂಘ ದ್ವಿತೀಯ, ಗದಗದ ಮುಳಗುಂದ ವೀರಭದ್ರೇಶ್ವರ ಪುರವಂತಿಕೆ ಚಮ್ಮಳ ತೃತೀಯ ಸ್ಥಾನ ಪಡೆದಿವೆ.
ವೀರಗಾಸೆ ಸ್ಪರ್ಧೆ-ತರೀಕೆರೆ ಬಾವಿಕೆರೆಯ ಚಾಮುಂಡೇಶ್ವರಿ ಮಹಿಳಾ ವೀರಗಾಸೆ ತಂಡ ಪ್ರಥಮ, ಹಾಸನ ವೀರಭದ್ರೇಶ್ವರ ವೀರಗಾಸೆ ಕಲಾತಂಡ ದ್ವಿತೀಯ, ಹೊಳಲ್ಕೆರೆ ತಾಳಿಕಟ್ಟೆಯ ಬೀರಲಿಂಗೇಶ್ವರ ಮಹಿಳಾ ಕಲಾ ತಂಡ ತೃತೀಯ ಸ್ಥಾನ ಪಡೆಯಿತು.
ತರಳಬಾಳು ಬೃಹನ್ಮಠದಲ್ಲಿ ಅಣ್ಣನ ಬಳಗ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿಗಳ 86ನೇ ಶ್ರದ್ಧಾಂಜಲಿ ಹಾಗೂ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 10 ಸಾವಿರ, ದ್ವಿತೀಯ 7500, ತೃತೀಯ ಸ್ಥಾನ ಪಡೆದವರಿಗೆ 5000 ರೂ. ಗಳನ್ನು ಬಹುಮಾನವಾಗಿ ಪಡೆದರು.