More

    ರಾಜ್ಯ ಮಟ್ಟದ ಮಕ್ಕಳ ಕವಿಗೋಷ್ಠಿ

    ಬಂಕಾಪುರ: ಪ್ರಾಸಬದ್ಧವಾಗಿ ಕವಿತೆಗಳನ್ನು ಬರೆಯಲು ರೂಢಿಸಿಕೊಂಡರೆ ಉತ್ತಮ ಕವನಗಳನ್ನು ಬರೆಯಬಹುದು. ಇದರಿಂದ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವಾನಂದ ಮ್ಯಾಗೇರಿ ಹೇಳಿದರು.

    ಶಿಗ್ಗಾಂವ ತಾಲೂಕಿನ ಗಂಜಿಗಟ್ಟಿಯ ಚರಮೂರ್ತೆಶ್ವರ ಮಠದ ಸಭಾ ಭವನದಲ್ಲಿ, ಬೆಳಕು ಸಂಸ್ಥೆ ಶಿಗ್ಗಾಂವ ಮತ್ತು ಸ್ಥಳೀಯ ಪತ್ರಕರ್ತರ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಬೆಳಕು ಸಂಸ್ಥೆ ಸತತವಾಗಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ನಾಡು, ನೆಲ, ಜಲ, ಭಾಷೆ ಉಳಿವಿಗಾಗಿ ಸೇವೆ ಸಲ್ಲಿಸುತ್ತಿದೆ ಎಂದರು.

    ಸಂಸ್ಥೆಯ ರಾಜ್ಯ ಸಂಘಟನೆ ಅಧ್ಯಕ್ಷ ವೆಂಕಟೇಶ, ಈಡಿಗರ ಸಂಸ್ಥೆಯ ಉದ್ದೇಶ, ನಡೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

    ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಶಿಗ್ಗಾಂವ ಬೆಳಕು ಸಂಸ್ಥೆ ಅಧ್ಯಕ್ಷ ಬಸವರಾಜ ಹಡಪದ ಮಾತನಾಡಿದರು.

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಕೊಟ್ರೇಶ ಮಾಸ್ತರ ಬೆಳಗಲಿ, ಜಾನಪದ ಅಕಾಡೆಮಿ ಸದಸ್ಯ ಶಂಕರ ಅರ್ಕಸಾಲಿ, ಪತ್ರಕರ್ತ ಮಾಲತೇಶ ಅಂಗೂರ ಅವರನ್ನು ಸನ್ಮಾನಿಸಲಾಯಿತು.

    ಶಿಗ್ಗಾಂವ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಅಣ್ಣಪ್ಪ ಮೇಟಿಗೌಡ, ನಾಗಪ್ಪ ಬೆಂತೂರ, ಸುರೇಶ ಕೋರಕೊಪ್ಪ, ಬಿ.ಶ್ರೀನಿವಾಸ, ಶರೀಫ ನದಾಫ, ಮಂಜುಳಾ ಚಂದ್ರಗೀರಿ, ಸುಮಂಗಲಾ ದುರ್ಗದ, ಅರುಣ ಹುಡೇದಗೌಡ್ರ, ವಿಶ್ವನಾಥ ಬಂಡಿವಡ್ಡರ, ಡಾ: ಸರೋಜಿನಿ ಬಂಕಾಪುರ, ಲಕ್ಷ್ಮಿ ಪಾಟೀಲ, ಅಶೋಕ ಕಾಳೆ, ಮಾರುತಿ ಶಿಡ್ಲಾಪುರ, ಅಂಬಿಕಾ ಹಂಚಾಟೆ ಇತರರು ಇದ್ದರು. ಉಪನ್ಯಾಸಕ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರೂಪಿಸಿದರು.

    ಕವನ ವಾಚಿಸಿದ ಮಕ್ಕಳು: ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಜಿಲ್ಲೆಯ 70ಕ್ಕೂ ಅಧಿಕ ಮಕ್ಕಳು ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮಧ್ಯೆ ಸರಿಗಮಪ ಮತ್ತು ಕನ್ನಡದ ಕೋಗಿಲೆ ಕಾರ್ಯಕ್ರಮದ ಕಲಾವಿದರಾದ ರುಬಿನಾ ಮತ್ತು ಅಂತರಾ ಕುಲಕರ್ಣಿ ಅವರು ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಸಾರ್ವಜನಿಕರನ್ನು ರಂಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts