ಮೈಸೂರು: ಮೈಸೂರು ಜಿಲ್ಲಾ ಅಖಿಲ ಕರ್ನಾಟಕ ಭೋವಿ ಮಹಾಸಭಾದಿಂದ ಮೇ 23ರಿಂದ ಮೂರು ದಿನಗಳ ಕಾಲ ರಾಜ್ಯಮಟ್ಟದ ಭೋವಿ ಪ್ರೀಮಿಯರ್ ಲೀಗ್ ಆವೃತ್ತಿ-8 ಆಯೋಜಿಸಲಾಗಿದೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ ಒಂದು ಲಕ್ಷ ರೂ. ನಗದು ಬಹುಮಾನ, ಟ್ರೋಫಿ, ದ್ವಿತೀಯ ಬಹುಮಾನ 50 ಸಾವಿರ ರೂ. ನಗದು, ಟ್ರೋಫಿ, ತೃತೀಯ ಬಹುಮಾನ 25 ಸಾವಿರ ರೂ. ನಗದು, ಟ್ರೋಫಿ ನೀಡಲಾಗುವುದು.
ಪ್ರವೇಶ ಶುಲ್ಕವಿದ್ದು, ಆಸಕ್ತ ತಂಡಗಳು ಶಶಿ (9108404936), ಕಾರ್ತಿಕ್ (7760943906) ಅವರನ್ನು ಸಂಪರ್ಕಿಸುವಂತೆ ಹೇಳಿಕೆಯಲ್ಲಿ ತಿಳಿಸಲಾಗಿದೆ.
