ಕಳೆದ ವರ್ಷದ ಬರ ಪರಿಹಾರ ಹಣ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಶುಕ್ರವಾರವೇ ರೈತರ ಖಾತೆಗೆ ಜಮೆ

ಬೆಂಗಳೂರು: ರಾಜ್ಯ ಸರ್ಕಾರ 2018 ಹಿಂಗಾರು ಹಂಗಾಮಿನ ಬರ ಪರಿಹಾರದ ಹಣವನ್ನು ಗುರುವಾರ ಬಿಡುಗಡೆ ಮಾಡಿದೆ. ಶುಕ್ರವಾರ ಮಧ್ಯಾಹ್ನ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ.

ಪರಿಹಾರ ತಂತ್ರಾಂಶದ ಮೂಲಕ ರೈತರ ಖಾತೆಗೆ ಹಣ ಜಮೆಯಾಗಲಿದೆ. 4,51,362 ರೈತರಿಗೆ ಇನ್​​ಪುಟ್ ಸಬ್ಸಿಡಿಯಾಗಿ 246 ಕೋಟಿ ರೂ. ಜಮೆಯಾಗಲಿದೆ. ಬಾಕಿ ಹಣವನ್ನು ಒಂದು ವಾರದಲ್ಲಿ ಬಿಡುಗಡೆ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ.

2018ರ ಹಿಂಗಾರು ಹಂಗಾಮಿನಲ್ಲಿ ಉಂಟಾದ ಬರಪರಿಹಾರಕ್ಕೆ 1397 ಕೋಟಿ ರೂ. ಸಬ್ಸಿಡಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ‌ ಮಾಡಲಾಗಿತ್ತು. ಎನ್​ಡಿಆರ್​​ಎಫ್ ಮೂಲಕ 1029 .39 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದರಲ್ಲಿ ಮೊದಲ ಹಂತವಾಗಿ ರೈತರಿಗೆ 246 ಕೋಟಿ ರೂ. ಜಮೆ ಮಾಡಲಾಗುತ್ತಿದೆ. 

Leave a Reply

Your email address will not be published. Required fields are marked *