ತೈಲ ತೆರಿಗೆ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಈ ಹಿಂದೆ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯಲ್ಲಿನ ಏರಿಕೆಯನ್ನು ಗಮನಿಸಿ ತೈಲ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ್ದ ರಾಜ್ಯ ಸರ್ಕಾರ ಈಗ ಮತ್ತೆ ತೆರಿಗೆಯನ್ನು ಯಥಾಸ್ಥಿಗೆ ತಂದಿದೆ.

ತೈಲ ತೆರಿಗೆ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ನಿರಂತರ ತೈಲ ದರ ಏರಿಕೆ ಕಾರಣದಿಂದಾಗಿ ಕಳೆದ ಅಕ್ಟೊಬರ್​ನಲ್ಲಿ ಸರ್ಕಾರ ಪೆಟ್ರೋಲ್​ ಮೇಲಿನ ತೆರಿಗೆಯನ್ನು ಶೇ. 32 ರಿಂದ 28.75ಕ್ಕೆ ಹಾಗೂ ಡಿಸೇಲ್​ ಮೇಲಿನ ತೆರಿಗೆಯನ್ನು ಶೇ. 21ರಿಂದ 17.73ಕ್ಕೆ ಕಡಿತಗೊಳಿಸಿತ್ತು.

ಇದೀಗ ಸತತ ಒಂದು ತಿಂಗಳಿನಿಂದ ತೈಲ ದರದಲ್ಲಿ ನಿರಂತರ ಇಳಿಕೆ ಕಾಣುತ್ತಿರುವುದರಿಂದ ರಾಜ್ಯದ ಬೊಕ್ಕಸದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ತೈಲ ತೆರಿಗೆ ದರವನ್ನು ಈ ಹಿಂದಿನ ದರಕ್ಕೆ ಪರಿಷ್ಕರಿಸಲಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. (ದಿಗ್ವಿಜಯ ನ್ಯೂಸ್​)

One Reply to “ತೈಲ ತೆರಿಗೆ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ”

Comments are closed.