ಸರ್ಕಾರದಿಂದ ದಸರಾ ಗಿಫ್ಟ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಶೇ. 2 ತುಟ್ಟಿಭತ್ಯೆ ಹೆಚ್ಚಳ ಮಾಡುವ ಮೂಲಕ ಸರ್ಕಾರ ದಸರಾ ಕೊಡುಗೆ ನೀಡಿದೆ. ಮೂಲ ವೇತನದ ಶೇ. 1.75 ಇದ್ದ ತುಟ್ಟಿಭತ್ಯೆಯನ್ನು ಶೇ. 3.75ಕ್ಕೆ ಹೆಚ್ಚಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಜುಲೈ 1ರ ವೇತನದಿಂದ ಅನ್ವಯವಾಗುವಂತೆ ಹೆಚ್ಚುವರಿ ತುಟ್ಟಿಭತ್ಯೆ ನೀಡಲಾಗುತ್ತದೆ. ಸರ್ಕಾರಿ ನೌಕರರು, ಜಿಲ್ಲಾ ಪಂಚಾಯಿತಿಗಳ ಪೂರ್ಣಾವಧಿ ನೌಕರರು, ನಿವೃತ್ತ ನೌಕರರು, ಅನುದಾನಿತ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಯುಜಿಸಿ ವೇತನ ಪಡೆಯುವವರಿಗೆ ಇದು ಅನ್ವಯವಾಗಲಿದೆ.